ಅರಬ್ಬೀ ಸಮುದ್ರದಲ್ಲಿ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರ ರಕ್ಷಣೆ

| Updated By: guruganesh bhat

Updated on: Sep 15, 2021 | 10:57 PM

ಮೀನುಗಾರರನ್ನು ರಕ್ಷಿಸಿ ಉಡುಪಿ ಜಿಲ್ಲೆಯ ಮಲ್ಪೆಗೆ ಕರೆ ತರಲಾಗಿದೆ.

ಅರಬ್ಬೀ ಸಮುದ್ರದಲ್ಲಿ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರ ರಕ್ಷಣೆ
ರಕ್ಷಣೆಯ ದೃಶ್ಯ
Follow us on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಅರಬ್ಬೀ ಸಮುದ್ರದ 35 ನಾಟಿಕಲ್ ಮೈಲಿ ದೂರದಲ್ಲಿ IND-KA 02 MM 4294 ‘ಸಾಗರ್ ಸಾಮ್ರಾಟ್’ ಮೀನುಗಾರರ ದೋಣಿ ಕೆಟ್ಟು ನಿಂತಿತ್ತು. ಮೀನುಗಾರರನ್ನು ರಕ್ಷಿಸಿ ಉಡುಪಿ ಜಿಲ್ಲೆಯ ಮಲ್ಪೆಗೆ ಕರೆ ತರಲಾಗಿದೆ. ರೋಪ್ ಹಾಕಿ ಎಳೆದು ಮೀನುಗಾರರ ದೋಣಿಯನ್ನು ಸಹ ಎಳೆದುತರಲಾಗಿದೆ.

ಪ್ರವಾಸಿಗನೋರ್ವ ಸಮುದ್ರ ಪಾಲು
ಕಾರವಾರ: ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್​ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರದ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವನ್ನಳ್ಳಿ ಕಡಲ ತೀರದಲ್ಲಿ ನಡೆದಿದೆ. ಸುಬ್ಬುಗೌಡ(42) ಎಂಬುವವರೇ ಅಲೆ ಅಪ್ಪಳಿಸಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ದುರ್ದೈವಿ. ಸುಬ್ಬುಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿದ್ದರು. ಸ್ನೇಹಿತರ ಜತೆಗೆ ಪ್ರವಾಸಕ್ಕೆಂದು ಕುಮಟಾದ ವನ್ನಳ್ಳಿ ಸಮುದ್ರ ತೀರಕ್ಕೆ ಬಂದಿದ್ದರು. ಆದರೆ ದುರದೃಷ್ಟವಷಾತ್ ಅವರು ಸಮುದ್ರ ಪಾಲಾಗಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ವಿಸರ್ಜನೆ ವೇಳೆ ನೀರುಪಾಲು
ಗಣೇಶ ವಿಸರ್ಜನೆ ವೇಳೆ ಯುವಕನೋರ್ವ ಭೀಮಾ ನದಿ ಪಾಲಾದ ದುರ್ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅಂಕಲಗಾ ಗ್ರಾಮದಲ್ಲಿ ನಡೆದಿದೆ. ಅಂಕಲಗಾ ಬಳಿ ಗಿರೀಶ್​ ಚೌಹಾಣ್(25) ನದಿಪಾಲಾದ ದುರ್ದೈವಿ. ಗಣೇಶ ಮೂರ್ತಿ ವಿಸರ್ಜಿಸಲು ನದಿ ಒಳಗೆ ಇಳಿದ್ದ ಗಿರೀಶ್ ಸೆಳೆತ ಹೆಚ್ಚಾಗಿದ್ದರಿಂದ ನದಿಪಾಲಾಗಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆದಿದ್ದು ನೆಲೋಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಬಾಲಿವುಡ್​ನ ಖ್ಯಾತ ತಾರೆಯರ ನೈಜ ಹೆಸರೇನು? ಇಲ್ಲಿದೆ ಅಪರೂಪದ ಮಾಹಿತಿ

Zee Entertainment: ಈ ಮೀಡಿಯಾ ಕಂಪೆನಿ​ ಷೇರು ಒಂದೇ ದಿನದಲ್ಲಿ ಶೇ 40ರಷ್ಟು ಏರಿಕೆ; ಏಕೆ, ಏನು ಇಲ್ಲಿದೆ ಮಾಹಿತಿ

(Mangaluru 11 fisherman’s are rescued in Arabian Sea)

Published On - 10:03 pm, Wed, 15 September 21