ಮಂಗಳೂರು: ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಒಂದೊಂದೇ ಸ್ಫೋಟಕ ಮಾಹಿತಿಯನ್ನು ಆರೋಪಿಗಳ ಬಾಯಿಯಿಂದ ಹೊರಹಾಕಿಸುತ್ತಿದ್ದಾರೆ. ಈ ವೇಳೆ ಅನೇಕ ಮಾಹಿತಿ ಬಹಿರಂಗ ಪಡಿಸಿದ ಪೈಕಿ ಮೊಬೈಲ್ ಟ್ರೈನಿಂಗ್ ಪಡೆದಿರುವುದು ಕೂಡ ಒಂದು. ಬಾಂಬ್ ಸ್ಫೋಟಗೊಳಿಸಲು ಮೊಬೈಲ್ ಬಗ್ಗೆ ತರಬೇತಿ ಪಡೆದಿರುವುದು ಯಾಕೆ ಎಂದು ತಿಳಿದರೆ ನೀವು ನಿಜಕ್ಕೂ ಆಘಾತಗೊಳ್ಳುತ್ತೀರಿ. ಹಾಗಿದ್ದರೆ ಆರೋಪಿ ಮೊಬೈಲ್ ಟ್ರೈನಿಂಗ್ ಪಡೆದಿದ್ದು ಯಾಕೆ? ಇಲ್ಲಿದೆ ನೋಡಿ ಮೊಬೈಲ್ ಲರ್ನಿಂಗ್ ಕಹಾನಿಯ ಟಿವಿ9 ಎಕ್ಸ್ಲೂಸಿವ್ ಸುದ್ದಿ.
ನಿದ್ದೆ ಬರುತ್ತದೆ ಎಂದು ಸಮಯಕ್ಕೆ ಸರಿಯಾಗಿ ಎಳಲು ಸಹಾಯ ಮಾಡಲೆಂದು ಮೊಬೈಲ್ನಲ್ಲಿ ಅಲರಾಮ್ ಸಿಸ್ಟಮ್ ಇದೆ. ನಿದ್ದೆಯಿಂದ ಎಬ್ಬಿಸಲು ನೆರವಾಗುವ ಈ ಅಲರಾಮ್ ವ್ಯವಸ್ಥೆಯನ್ನು ಆರೋಪಿಗಳು ಕುಕೃತ್ಯ ಎಸಗಲು ಬಳಕೆ ಮಾಡಿದ್ದಾರೆ. ಅದರಂತೆ ಮೊಬೈಲ್ನಲ್ಲಿ ಅಲರಾಮ್ ಅಪ್ಲಿಕೇಶನ್ ಹೇಗೆ ವರ್ಕ್ ಆಗುತ್ತದೆ ಎಂಬ ಬಗ್ಗೆ ಕಲಿತಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ಜೊತೆ ಮತ್ತೊಬ್ಬ ಯುವಕನಿದ್ದನೇ?
ಬಾಂಬ್ ನಿಗದಿತ ಸಮಯಕ್ಕೆ ಸ್ಫೋಟಗೊಳ್ಳಲು ಅದರಲ್ಲಿ ಸಮಯ ನಿಗದಿ ಮಾಡಲಾಗುತ್ತದೆ. ಈ ಸಮಯವನ್ನು ಫೀಕ್ಸ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲೆಂದೇ ಮೊಬೈಲ್ನಲ್ಲಿ ಅಲರಾಮ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಆರೋಪಿಗಳು ಕಲಿತುಕೊಂಡಿದ್ದಾರೆ. ಮೊಬೈಲ್ನಿಂದ ರಿಮೋಟ್ ಕಂಟ್ರೋಲ್ ಹೇಗೆ ಮಾಡಬಹುದು ಎಂಬುದನ್ನು ತಿಳಿಯುವ ಯತ್ನ ನಡೆದಿದೆ ಎಂದು ಟಿವಿ9 ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Tue, 22 November 22