ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಚರಣೆ, ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್​ಗಳ ಬಂಧನ

ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ವ್ಯಾಪ್ತಿಯ ಪಿಲಿಕೂರು ಎಂಬಲ್ಲಿ ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಹೇಳಿದ್ದಾರೆ.

ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಚರಣೆ, ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್​ಗಳ ಬಂಧನ
ಮಂಗಳೂರು ಡ್ರಗ್ಸ್​ ಅರೆಸ್ಟ್​
Edited By:

Updated on: Jul 21, 2023 | 1:14 PM

ಮಂಗಳೂರು: ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್(Drug Peddler)​ಗಳನ್ನು ಮಂಗಳೂರು ಸಿಸಿಬಿ ಪೊಲೀಸ(Mangalore CCB Police) ರು ಉಳ್ಳಾಲ ತಾಲೂಕು ವ್ಯಾಪ್ತಿಯ ಪಿಲಿಕೂರು ಎಂಬಲ್ಲಿ ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ‘ ಈ ಘಟನೆ ಸಂಬಂಧ ಪರಂಗೀಪೇಟೆಯ ನಿಯಾಜ್(28), ತಲಪಾಡಿಯ ನಿಶಾದ್(31) ಹಾಗೂ ಪಡೀಲ್​ನ ರಝೀನ್(24) ಎಂಬ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದರು ಎಂದಿದ್ದಾರೆ.

180 ಗ್ರಾಂ ತೂಕದ 9 ಲಕ್ಷ ಮೌಲ್ಯದ ಎಂಡಿಎಂಎ ಮಾದಕವಸ್ತು ವಶಕ್ಕೆ

ಇನ್ನು 180 ಗ್ರಾಂ ತೂಕದ 9 ಲಕ್ಷ ಮೌಲ್ಯದ ಎಂಡಿಎಂಎ ಮಾದಕವಸ್ತು ಸೇರಿದಂತೆ ಮಾರುತಿ ಸ್ವಿಫ್ಟ್ ಕಾರು, ನಾಲ್ಕು ಮೊಬೈಲ್ ಫೋನ್, ನಗದು, ಪಿಸ್ತೂಲ್, ಸಜೀವ ಗುಂಡುಗಳು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ 27 ಲಕ್ಷ ರೂ.‌ ಆಗಬಹುದು. ಆರೋಪಿ ನಿಯಾಜ್ ವಿರುದ್ದ ಉರ್ವಾ, ಕೊಣಾಜೆ ಠಾಣೆಯಲ್ಲಿ ಈಗಾಗಲೇ ಪೊಲೀಸರ ಮೇಲೆ ಹಲ್ಲೆ, ಕೊಲೆಯತ್ನ, ದರೋಡೆ, ಮಾದಕ ವಸ್ತು ಮಾರಾಟದ ಕೇಸುಗಳಿವೆ. ಜೊತೆಗೆ ಇವರ ಅಕ್ರಮದ ವಿರುದ್ದ ಮಾಹಿತಿ ನೀಡುವವರನ್ನ ಬೆದರಿಸಲು ಪಿಸ್ತೂಲ್ ಇಟ್ಟುಕೊಂಡಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಹೇಳಿದ್ದಾರೆ.

ಇದನ್ನೂ ಓದಿ:ಡ್ರಗ್ ಪೆಡ್ಲರ್ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿಯಲ್ಲಿ ಸೆರೆ!

ಇನ್ನು ಇದೇ ವೇಳೆ ಮಂಗಳೂರಿನಲ್ಲಿ ಚಾಕ್ಲೇಟ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಮಂಗಳೂರಿನ ಡಿಎಫ್ಎಸ್ಎಲ್​ಗೇ ಸ್ಯಾಂಪಲ್ ಕಳಿಸಿದ್ದೇವೆ. ಎರಡ್ಮೂರು ದಿನದಲ್ಲಿ ರಿಪೋರ್ಟ್ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಡ್ರಗ್ಸ್ ಕಂಟೆಂಟ್ ಇದೆ ಎನ್ನುವ ಬಲವಾದ ಮಾಹಿತಿ ಸಿಕ್ಕಿದೆ. ಲ್ಯಾಬ್ ರಿಪೋರ್ಟ್ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ