Mangaluru City Corporation: ನೂತನ ಮೇಯರ್, ಉಪಮೇಯರ್ ಆಯ್ಕೆ; ಸಭಾಂಗಣದಲ್ಲಿ ಬಿಜೆಪಿ-ಕಾಂಗ್ರೆಸ್​ ಜಗಳ

| Updated By: ಆಯೇಷಾ ಬಾನು

Updated on: Sep 19, 2024 | 2:43 PM

ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಕೂಡ ಶುರುವಾಗಿದೆ. ಚುನಾವಣೆ ಬಳಿಕ ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಗದ್ದಲ ಶುರುವಾಗಿದೆ. ಮಾಜಿ‌ ಮೇಯರ್ ಅಭಿನಂದನಾ ಭಾಷಣ ಸಂದರ್ಭ ನೂತನ ಮೇಯರ್- ಉಪಮೇಯರ್ ಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ತೆರಳಿದರು. ಭಾಷಣದ ಮಧ್ಯೆ ಎದ್ದು ಹೋಗಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ.

Mangaluru City Corporation: ನೂತನ ಮೇಯರ್, ಉಪಮೇಯರ್ ಆಯ್ಕೆ; ಸಭಾಂಗಣದಲ್ಲಿ ಬಿಜೆಪಿ-ಕಾಂಗ್ರೆಸ್​ ಜಗಳ
ಮಂಗಳೂರು ಮಹಾನಗರ ಪಾಲಿಕೆ
Follow us on

ಮಂಗಳೂರು, ಸೆ.19: ಮಂಗಳೂರು ಮಹಾನಗರ ಪಾಲಿಕೆಯ (Mangaluru City Corporation) 25ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಭಾನುಮತಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಕೂಡ ಶುರುವಾಗಿದೆ. ಚುನಾವಣೆ ಬಳಿಕ ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಗದ್ದಲ ಶುರುವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ನಡೆದ ಚುನಾವಣಾ ಪ್ರಕ್ರಿಯೆಯನ್ನು ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್ ಅವರು ನಡೆಸಿಕೊಟ್ಟರು. ‌ಮೇಯರ್ ಆಗಿ ಬಿಜೆಪಿಯಿಂದ ಮನೋಜ್ ಕುಮಾರ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ ಆಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಝೀನತ್ ಶಂಶುದ್ದೀನ್​ಗೆ ಸೋಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಒಟ್ಟು 60 ಸದಸ್ಯರ ಬಲ ಹೊಂದಿದೆ. 60 ಸದಸ್ಯರ ಜೊತೆಗೆ ಬಿಜೆಪಿಯ 2 ಶಾಸಕರು, 1 ಸಂಸದ, ಕಾಂಗ್ರೆಸ್ ನ 2 MLCಗಳಿಗೆ ಮತದಾನದ ಹಕ್ಕಿದ್ದು ಬಿಜೆಪಿ 47, ಕಾಂಗ್ರೆಸ್ 16, ಎಸ್‌ಡಿಪಿಐ ಇಬ್ಬರು ಸೇರಿ 65 ಮಂದಿಗೆ ಮತದಾನದ ಹಕ್ಕಿದೆ.

ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ನ ಒಬ್ಬರು ಸದಸ್ಯರು, 2 ಕಾಂಗ್ರೆಸ್ MLC ಗಳು ಗೈರಾಗಿದ್ದು ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಭಾನುಮತಿಗೆ ಒಟ್ಟು 47 ಮತ ಹಾಗೂ ಕಾಂಗ್ರೆಸ್ ನ ಝೀನತ್ ಶಂಶುದ್ದೀನ್ ಗೆ 14 ಮತ ಬಂದಿದೆ. ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಭಾನುಮತಿಗೆ ಜಯ ಸಿಕ್ಕಿದೆ. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್‌ಗೆ ಹಿಂದುಳಿದ ವರ್ಗ ಎ ಮೀಸಲಿಡಲಾಗಿತ್ತು. ಹಾಲಿ ಆಡಳಿತದ ಅವಧಿ ಐದುತಿಂಗಳು ಮಾತ್ರ ಆಗಿದೆ. ಈ ಬಾರಿ ಹಾಲಿ ಪಾಲಿಕೆ ಆಡಳಿತದ ಕೊನೆ ಅವಧಿಯ ಆಯ್ಕೆ ಇದಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ ವಾಗ್ದಾಳಿ

ಇನ್ನು ಮತ್ತೊಂದೆಡೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಶುರುವಾಗಿದೆ. ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಕಿತ್ತಾಡಿಕೊಂಡಿದ್ದಾರೆ. ಮಾಜಿ‌ ಮೇಯರ್ ಅಭಿನಂದನಾ ಭಾಷಣ ಸಂದರ್ಭ ನೂತನ ಮೇಯರ್- ಉಪಮೇಯರ್ ಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ತೆರಳಿದರು. ಭಾಷಣದ ಮಧ್ಯೆ ಎದ್ದು ಹೋಗಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಪರಿಶಿಷ್ಟ ಜಾತಿಯ ಮೇಯರ್ ಅವರಿಗೆ ಅವಮಾನ ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ನೂತನ ಮೇಯರ್-ಉಪಮೇಯರ್ ಗೆ ಅಭಿನಂದನೆ ವೇಳೆ ಮಾತಿನ ಚಕಮಕಿ ನಡೆದಿದ್ದು ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ