ಮಂಗಳೂರು ಕುಕ್ಕರ್​ ಬಾಂಬ್​ ಸ್ಪೋಟದ ಮಾಸ್ಟರ್​ಮೈಂಡ್​ ಬಂಧಿತ ಉಗ್ರ ಅಫ್ಸರ್​ ಪಾಷಾ

ಕಳೆದ ವರ್ಷ ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್​ಮೈಂಡ್ ಬೆಳಗಾವಿ​ ಜೈಲಿನಲ್ಲಿ ಬಂಧಿಯಾಗಿದ್ದ ಲಷ್ಕರ್​ ಎ ತೊಯ್ಬಾ ಸಂಘಟನೆಯ ಸದಸ್ಯ ಅಫ್ಸರ್​ ಪಾಷಾ ಎಂಬ ಸ್ಪೋಟಕ ಅಂಶವನ್ನು ಮಹಾರಾಷ್ಟ್ರ ಪೊಲೀಸರು ತನಿಖೆಯಲ್ಲಿ ಪತ್ತೆಮಾಡಿದ್ದಾರೆ.

ಮಂಗಳೂರು ಕುಕ್ಕರ್​ ಬಾಂಬ್​ ಸ್ಪೋಟದ ಮಾಸ್ಟರ್​ಮೈಂಡ್​ ಬಂಧಿತ ಉಗ್ರ ಅಫ್ಸರ್​ ಪಾಷಾ
ಕುಕ್ಕರ್​ ಬಾಂಬ್​ ಬ್ಲಾಸ್ಟ್​​​ ಆರೋಪಿ ಶಾರಿಕ್​
Follow us
ವಿವೇಕ ಬಿರಾದಾರ
|

Updated on:Jul 31, 2023 | 7:14 AM

ಬೆಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ (Mangaluru) ಆಟೋದಲ್ಲಿ (Auto) ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ (Cooker Bomb) ಪ್ರಕರಣದ ಮಾಸ್ಟರ್​ಮೈಂಡ್ ಬೆಳಗಾವಿ​ (Belagavi) ಜೈಲಿನಲ್ಲಿ ಬಂಧಿಯಾಗಿದ್ದ ಲಷ್ಕರ್​ ಎ ತೊಯ್ಬಾ ಸಂಘಟನೆಯ ಸದಸ್ಯ ಅಫ್ಸರ್​ ಪಾಷಾ ಎಂಬ ಸ್ಪೋಟಕ ಅಂಶವನ್ನು ಮಹಾರಾಷ್ಟ್ರ ಪೊಲೀಸರು (Maharashtra Police) ತನಿಖೆಯಲ್ಲಿ ಪತ್ತೆಮಾಡಿದ್ದಾರೆ. ಶಿವಮೊಗ್ಗ ಮೂಲದ ಮೊಹ್ಮದ್​ ಶಾರೀಖ್​​ಗೆ ಉಗ್ರ ಅಫ್ಸರ್​ ಪಾಷಾ ಕರ್ನಾಟಕದ ಜೈಲೊಂದರಲ್ಲಿ ತರಬೇತಿ ನೀಡಿದ್ದನು. ಹಲವು ಉಗ್ರ ಚಟುವಟಿಗಳಲ್ಲಿ ಭಾಗಿಯಾಗಿರುವ ಅಫ್ಸರ್​ ಪಾಷಾ ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಕೆ ತರಬೇತಿ ಪಡೆದಿದ್ದನು.

ಕಖ್ಯಾತ ಉಗ್ರಗಾಮಿ ಸಂಘಟನೆ ಲಸ್ಕರ್ ಎ.ತೊಯ್ಬಾದ ಸದಸ್ಯನಾಗಿರುವ ಅಫ್ಸರ್​ ಪಾಷಾ ಹಲವು ವರ್ಷಗಳ ಹಿಂದೆಯೇ ನೆರೆಯ ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಕೆ ಕುರಿತು ತರಬೇತಿ ಪಡೆದಿದ್ದಾನೆ. 2005ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ಮೇಲೆ ನಡೆದ ದಾಳಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದಾನೆ. 2012ರಲ್ಲಿ ಜಮ್ಮು- ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣದಲ್ಲಿ ಈತ ಅಪರಾಧಿಯಾಗಿದ್ದಾನೆ. ಅಲ್ಲದೇ ಈತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾಗ ಸಕೈದಿಗಳಿಗೆ ಮೂಲಭೂತವಾದ ಬೋಧನೆ ಮಾಡಿದ ಆರೋಪವಿದೆ. ಇದೇ ಅಫ್ಸರ್​ ಪಾಷಾ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾಹಾರಷ್ಟ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಚುರುಕುಗೊಂಡ ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣ; ಸ್ಥಳ ಮಹಜರು ಪ್ರಕ್ರಿಯೆ ನಡೆಸಿರುವ NIA ಅಧಿಕಾರಿಗಳು

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಜೈಲಿನಿಂದ ಜಯೇಶ್ ಪೂಜಾರಿ ಎಂಬಾತ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಈ ಪ್ರಕರಣದಲ್ಲಿ ಅಫ್ಸರ್​ ಪಾಷಾನನ್ನು ಬೆಳಗಾವಿ ಜೈಲಿನಿಂದ ಜುಲೈ 14ರಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕರೆದೊಯ್ದು ನಾಗಪುರ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸಿದರು. ಆ ವೇಳೆ ಈತನಿಗೆ ಮಂಗಳೂರು ಕುಕ್ಕರ್ ಬಾಂಬ್‌ ಜತೆಗೆ ನಂಟು ಇರುವ ಮಾಹಿತಿ ಪತ್ತೆಯಾಗಿದೆ. ಈ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರು ಸಮಗ್ರ ವರದಿ ತಯಾರಿಸಿ, ಕೇಂದ್ರ ಗುಪ್ತಚರ ದಳಕ್ಕೂ ಮಾಹಿತಿ ರವಾನಿಸಿದ್ದಾರೆ.

ಏನಿದು ಮಂಗಳೂರು ಕುಕ್ಕರ್​ ಬಾಂಬ್​ ಸ್ಪೋಟ

2022ರ ನ.19ರಂದು ಮಂಗಳೂರಿನಲ್ಲಿ, ಆಟೋವೊಂದರಲ್ಲಿ ​​ಕುಕ್ಕರ್‌ಗೆ ಡಿಟೋನೇಟಲ್, ವೈ‌ ಹಾಗೂ ಬ್ಯಾಟರಿಗಳನ್ನು ಅಳವಡಿಸಿದ್ದ ಕುಕ್ಕರ್​ ಬಾಂಬ್ ಅನ್ನು ಶಿವಮೊಗ್ಗ ಮೂಲದ ಮೊಹಮ್ಮದ್ ಶಾರಿಕ್ ತೆಗೆದುಕೊಂಡು ಹೋಗುತ್ತಿದ್ದನು. ಇದು ದಾರಿ ಮಧ್ಯೆ ಸ್ಪೋಟವಾಗಿತ್ತು. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 am, Mon, 31 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ