ಕೋರ್ಟ್​ನ 6ನೇ ಮಹಡಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ; ಬೈಕ್​ಗಳ ಮುಖಾಮುಖಿ ಡಿಕ್ಕಿ, ಖೋ ಖೋ ಆಟಗಾರ ಸಾವು

| Updated By: guruganesh bhat

Updated on: Aug 31, 2021 | 7:36 PM

ಇಂದಿನ ಅಪರಾಧ ಜಗತ್ತಿನ ಸುದ್ದಿಗಳನ್ನು ನೀವಿಲ್ಲಿ ಓದಬಹುದು

ಕೋರ್ಟ್​ನ 6ನೇ ಮಹಡಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ; ಬೈಕ್​ಗಳ ಮುಖಾಮುಖಿ ಡಿಕ್ಕಿ, ಖೋ ಖೋ ಆಟಗಾರ ಸಾವು
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ನ್ಯಾಯಾಲಯದ ಕೋರ್ಟ್ನ 6ನೇ ಮಹಡಿಯಿಂದ ಹಾರಿ ಆರೋಪಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ: ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ. ಉಳ್ಳಾಲದ ಕಿನ್ಯಾ ನಿವಾಸಿ ರವಿರಾಜ್(31) ಆತ್ಮಹತ್ಯೆಗೆ ಮಾಡಿಕೊಂಡ ಆರೋಪಿತ ವ್ಯಕ್ತಿ. ಕುಡಿದ ಅಮಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಆಗಸ್ಟ್ 30ರಂದು ಪೋಕ್ಸೊ ಪ್ರಕರಣದಲ್ಲಿ ರವಿರಾಜ್ ಬಂಧನವಾಗಿತ್ತು. ರವಿರಾಜ್​ನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗ: ಎರಡು ಬೈಕುಗಳ ಮಧ್ಯೆ ಡಿಕ್ಕಿಯಾಗಿ ಖೋ ಖೋ ಆಟಗಾರನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಗೋಪಾಳದ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದಿದೆ. ಶಿವಮೊಗ್ಗದ ಖೋ ಖೋ ಆಟಗಾರ ನವೀನ್(29) ಸಾವನ್ನಪ್ಪಿದ ವ್ಯಕ್ತಿ. ವೇಗವಾಗಿ ಬಂದು ಎರಡು ಬೈಕುಗಳ ಮುಖಾಮುಖಿ ಡಿಕ್ಕಿಯಾಗಿದ್ದು ನವೀನ್ ಮೃತಪಟ್ಟಿದ್ದಾನೆ. ಮತ್ತೋರ್ವ ಬೈಕ್ ಸವಾರನಿಗೆ ಗಾಯವಾಗಿದ್ದು, ಮತ್ತೋರ್ವ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕುಗಳ ನಡುವಿನ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳಲ್ಕೆರೆ ಶೂಟೌಟ್ ಪ್ರಕರಣ: ಆರೋಪಿಗಳ ಬಂಧನ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ವ್ಯಾಪಾರಿಯೋರ್ವನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿರಾಜಸ್ಥಾನದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಜಿತ್ ಸಿಂಗ್(22), ಪೃಥ್ವಿರಾಜ್ ಸಿಂಗ್(31) ಬಂಧಿತ ಆರೋಪಿಗಳು. ಆಗಸ್ಟ್ 17ರಂದು ರಾತ್ರಿ 9ರ ಸುಮಾರಿಗೆ ಶೂಟೌಟ್ ನಡೆದಿತ್ತು. ಕೊಲೆಯಾಗಿದ್ದ ಖಾಸಗಿ ಟೆಕ್ಸ್ಟೈಲ್ಸ್ ಮಾಲೀಕ ಮೂಲ್ ಸಿಂಗ್ ಕಲ್ಯಾಣ ಸಿಂಗ್ ಎಂಬಾತನ ಕೊಲೆಯ ಆರೋಪಿಯಾಗಿದ್ದ. ಹೀಗಾಗಿ ಕಲ್ಯಾಣ ಸಿಂಗ್ ಪುತ್ರ ಸಂಜಿತ್ ಸಿಂಗ್ ಪ್ರತೀಕಾರ ತೆಗೆದುಕೊಳ್ಳಲು ಮೂಲ್ ಸಿಂಗ್​ನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 

ತಾಲಿಬಾನ್ ಜೊತೆಗೆ ಭಾರತದ ಮೊದಲ ರಾಜತಾಂತ್ರಿಕ ಸಭೆ: ಮಹತ್ವದ ಬೆಳವಣಿಗೆ

ಕುಸಿದು ಬೀಳುತ್ತಿದೆ ಅಫ್ಘಾನಿಸ್ತಾನದ ವೈದ್ಯಕೀಯ ವ್ಯವಸ್ಥೆ: ದೇಶದಲ್ಲೇ ಇರಲು ವಿದೇಶಿ ವೈದ್ಯರಿಗೆ ತಾಲಿಬಾನ್ ದುಂಬಾಲು

(Mangaluru District court Pocso case accused make suicide)

Published On - 7:30 pm, Tue, 31 August 21