ವೇಣೂರು ಪಟಾಕಿ ಗೋದಾಮು ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಅರೆಸ್ಟ್​

| Updated By: ವಿವೇಕ ಬಿರಾದಾರ

Updated on: Feb 06, 2024 | 9:33 AM

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದಲ್ಲಿ ಜನವರಿ 28 ರಂದು ಪಟಾಕಿ ಗೋಡೌನ್​ ಸ್ಪೋಟಗೊಂಡು ಮೂವರು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೆ ಮೂವರನ್ನು ಬಂಧಿಸಿದ್ದು, ಇದೀಗ ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಹೆಚ್ಚಿನ ಪಟಾಕಿ ರಾಸಾಯನಿಕ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ವೇಣೂರು ಪಟಾಕಿ ಗೋದಾಮು ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಅರೆಸ್ಟ್​
ಆರೋಪಿ ಅನಿಲ್​
Follow us on

ಮಂಗಳೂರು, ಫೆಬ್ರವರಿ 06: ವೇಣೂರು ಪಟಾಕಿ ಗೋದಾಮು (Firecrackers godown) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು (Dharmasthala Police) ಬಂಧಿಸಿದ್ದಾರೆ. ಬೆಂಗಳೂರು (Bengaluru) ಉತ್ತರ ದಿವಾನರ ಪಾಳ್ಯ ನಿವಾಸಿಯಾದ ಅನಿಲ್.ಎಂ ಡೇವಿಡ್ (49) ಬಂಧಿತ ಆರೋಪಿ. ಆರೋಪಿ ಅನಿಲ್ ​ಹೆಚ್ಚಿನ ಪಟಾಕಿ (Firecracker) ರಾಸಾಯನಿಕ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆ ವಿವರ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜ.28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಸ್ಪೋಟದ ಸದ್ದು ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದಾಗ ಅಲ್ಲಿ ಇಡೀ ಗೋಡಾನ್​ಗೆ ಬೆಂಕಿ ಆವರಿಸಿತ್ತು. ಒಂಬತ್ತು ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್(25) ಕೇರಳದ ಸ್ವಾಮಿ(60) ಮೃತಪಟ್ಟಿದ್ದರು. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ ಮತ್ತು ಕೇಶವ ಕೇರಳ ಗೋಡೌನ್​​ನಲ್ಲಿ ಕೆಲಸ ನಿರ್ವಹಿಸುತ್ತಿವರು. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಕುಚ್ಚೋಡಿ ನಿವಾಸಿ ಬಂಧಿತ ಆರೋಪಿ ಬಶೀರ್ ಎಂಬುವರು 2011-12 ರಲ್ಲಿ ಸ್ಟೋಟಕ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ವೇಣೂರು ದುರಂತ: ನಿಯಮ ಮೀರಿ ಗನ್ ಪೌಡರ್ ದಾಸ್ತಾನು ಮಾಡಿದ್ದೇ ಭೀಕರ ಸ್ಫೋಟಕ್ಕೆ ಕಾರಣವಾಯ್ತ?

ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ವೃದ್ಧ ದಂಪತಿ

ಸ್ಪೋಟಗೊಂಡ ಗೋದಾಮಿನ ಪಕ್ಕದಲ್ಲಿ ಮನೆಯೊಂದು ಇದೆ. ಈ ಮನೆಯಲ್ಲಿ ವೃದ್ಧ ದಂಪತಿ ವಾಸವಾಗಿದ್ದರು. ರವಿವಾರ (ಜ.28) ಸ್ಪೋಟಗೊಂಡ ಸಮಯದಲ್ಲಿ ವೃದ್ಧ ದಂಪತಿ ಮನೆಯ ಹೊರಗಡೆ ಕೂತು ಚಹಾ ಕುಡಿಯುತ್ತಿದ್ದರು. ಈ ವೇಳೆ ಗೋದಾಮಿನಲ್ಲಿ ಸ್ಪೋಟ ಸಂಭವಿಸಿತ್ತು. ಸ್ಪೋಟದ ತೀರ್ವತೆಗೆ ವೃದ್ಧ ದಂಪತಿಯ ಮನೆ ಕೂಡ ಕುಸಿದು ಬಿದ್ದಿತ್ತು. ಅದೃಷ್ಟವಶಾತ್​​ ದಂಪತಿ ಹೊರಗಡೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನು ಸ್ಫೋಟದ ತೀರ್ವತೆಗೆ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ಕುಸಿದು ಬಿದ್ದಿದ್ದವು. ಛಾವಣಿಯ ಶೀಟ್​ಗಳು ತುಂಡು ತುಂಡಾಗಿ ಮುರಿದು ಕೆಳಗೆ ಬಿದ್ದಿದ್ದಿವು.

ಐದು ಬಾರಿ ಸ್ಫೋಟ

ಒಟ್ಟು ಐದು ಬಾರಿ ಸ್ಫೋಟ ಸಂಭವಿಸಿತು. ಸ್ಫೋಟ ಆಗುತ್ತಿದ್ದಂತೆಯೇ ಕಣ್ಣು ಮಂಜಾಯಿತು. ಮನೆಯ ಶೀಟ್​ಗಳು ಮುರಿದು ಕೆಳಗೆ ಬಿದ್ದವು. ಮನೆ ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರ ಪರಿಹಾರ‌ ನೀಡಬೇಕು ಎಂದು ವೃದ್ಧ ದಂಪತಿ ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ