ಮಂಗಳೂರು, (ಜನವರಿ 17): ಉಳ್ಳಾಲದ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ನಲ್ಲಿ ದರೋಡೆಯಾಗಿದ್ದು, ಚಿನ್ನ ಹಾಗೂ ನಗದು ಹಣ ಸೇರಿದಂತೆ ಸುಮಾರು 10ರಿಂದ 12 ಕೋಟಿಯಷ್ಟು ದೋಚಿಕೊಂಡು ಪರಾರಿಯಾಗಿದ್ದಾರೆ. ಕಿರಾತಕರು ಮುಸುಕುದಾರಿಗಳಾಗಿ ಬಂದು ಕೃತ್ಯ ನಡೆಸಿದ್ದಾರೆ. ಸದ್ಯ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದ್ದು ತಲಪಾಡಿ ಟೋಲ್ ಗೇಟ್ನಲ್ಲಿ 150 ರೂಪಾಇ ಹಣ ಕೊಟ್ಟು ರಶೀದಿಯನ್ನು ದರೋಡೆಕೋರರು ಪಡೆದ್ದು, ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇನ್ನು ನಂಬರ್ ಪ್ಲೇಟ್ ಫೇಕ್ ಆಗಿದ್ದರಿಂದ ಕಾರಿಗೆ ಫಾಸ್ಟಾಗ್ ಇರಲಿಲ್ಲ ಎಂದು ತಿಳಿದು ಬಂದಿದೆ.
ದರೋಡೆಕೋರರು ಕಾರಿಗೆ KA04 MQ9923 ಎಂಬ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿದ್ದಾರೆ. ಈ ನಂಬರ್ ಪ್ಲೇಟ್ ಡಿಟೇಲ್ ತೆಗೆದು ನೋಡಿದ ಪೊಲೀಸರಿಗೆ ಶಾಕ್ ಆಗಿದೆ. KA04 MQ9923 ನಂಬರ್ ನ ಅಸಲಿ ಮಾಲೀಕನಿಗೆ ಪೊಲೀಸರು ಕರೆ ಮಾಡಿದಾಗ ಶಾಕ್ಗೆ ಒಳಗಾಗಿದ್ದಾನೆ. ಈ ಮೂಲಕ ಖದೀಮರು ಫೇಕ್ ನಂಬರ್ ಪ್ಲೇಟ್ ಹಾಕಿರುವುದು ಖಚಿತವಾಗಿದೆ. ತಲಪಾಡಿ ಟೋಲ್ ಗೇಟ್ ಮೂಲಕ ದರೋಡೆಕೋರರು ಕೇರಳದತ್ತ ಪರಾರಿಯಾಗಿದ್ದಾರೆ. ಹೀಗಾಗಿ ದರೋಡೆಕೋರರ ಜಾಡು ಹಿಡಿದು 2 ಪೊಲೀಸರ ತಂಡ ಕೇರಳದ ಕಾಸರಗೋಡು ಕಡೆ ಹೋಗಿದೆ.
ಇನ್ನು ದರೋಡೆಕೋರರರು 6 ನಿಮಿಷದಲ್ಲೇ 12 ಕೋಟಿಯಷ್ಟು ಚಿನ್ನ, ನಗದು ಹಣವನ್ನು ನಾಲ್ಕೈದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಆ ಆರು ನಿಮಿಷರಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ದೋಚಿ ಓಡಿಹೋಗುವ ಪ್ಲ್ಯಾನ್ನಲ್ಲಿದ್ದರು. ಇದೇ ಆತುರದಲ್ಲಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ. ಸುಮಾರು 12ಕೆಜಿಯಷ್ಟು ಚಿನ್ನವನ್ನು ಬ್ಯಾಂಕ್ನಲ್ಲಿಯೇ ಉಳಿಸಿದ್ದು, ಆ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ದೋಚಿಕೊಂಡು ಹೋಗಿದ್ದಾರೆ. ಎಲ್ಲಾ ಹೊತ್ತುಕೊಂಡು ಹೋಗುವಷ್ಟರಲ್ಲಿ ಒಂದು ಪೊಲೀಸರಿಗೆ ಸಮಯ ಕೊಟ್ಟ ಹಾಗೆ ಆಗುತ್ತೆ. ಇನ್ನೊಂದು ಎತ್ತುಕೊಂಡು ಹೋಗಲು ಭಾರವಾಗುತ್ತೆ ಎಂಬ ಕಾರಣದಿಂದ ಬಿಟ್ಟು ಹೋಗಿರುವ ಶಂಕೆಯಿದೆ.
ಇನ್ನು ಈ ಪ್ರಕರಣವಾದ ಬಳಿಕ ಬ್ಯಾಂಕ್ನಲ್ಲಿ ಠೇವಣಿ ಇಟ್ಟವರು ಹಾಗೂ ಚಿನ್ನ ಅಡವಿಟ್ಟವರು ಆತಂಕಗೊಂಡಿದ್ದಾರೆ. ನಮ್ಮ ಠೇವಣಿ ಹಣ ವಾಪಸ್ ಬರುತ್ತೋ ಇಲ್ಲೋ ಎನ್ನುವ ಆತಂಕದಲ್ಲಿದ್ದರೆ, ಇನ್ನು ಚಿನ್ನ ಗಿರಿವಿ ಇಟ್ಟ ಮಾಲೀಕರು ಸಹ ಚಿಂತೆ ಮಾಡುತ್ತಿದ್ದಾರೆ. ಇನ್ನು ಇದೀಗ ಗ್ರಾಹಕರ ಬಗ್ಗೆ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯಿಸಿದ್ದು, 19 ಕೋಟಿಯಷ್ಟು ಇನ್ಯೂರೆನ್ಸ್ ಇದೆ, ಗ್ರಾಹಕರು ಗಾಬರಿ ಆಗಬೇಕಿಲ್ಲ. ಇನ್ಯೂರೆನ್ಸ್ ಸಂಸ್ಥೆಯವರು ಎಲ್ಲಾ ಸರಿ ಮಾಡೋಣವೆಂದು ಹೇಳಿ ಹೋಗಿದ್ದಾರೆ. ಗ್ರಾಹಕರಿಗೆ ಅವರ ಮೊತ್ತ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.