2 ಗಂಟೆ ತಡವಾಗಿ ಬಂದರೂ ಮುಂಬೈನಲ್ಲೇ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ

ಬಹರೇನ್​ನಲ್ಲಿ ಓರ್ವನಿಗಾಗಿ ಎರಡು ಗಂಟೆ ಕಾದಿದ್ದ ವಿಮಾನ, 12 ಜನರಿಗಾಗಿ ಒಂದು ಗಂಟೆ ಕಾದಿಲ್ಲ. ಮುಂಬೈ ವಿಮಾನ ನಿಲ್ದಾಣದಲ್ಲೇ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹಾರಿದೆ.

2 ಗಂಟೆ ತಡವಾಗಿ ಬಂದರೂ ಮುಂಬೈನಲ್ಲೇ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ
ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆಕ್ರೋಶ
Updated By: ರಮೇಶ್ ಬಿ. ಜವಳಗೇರಾ

Updated on: Mar 23, 2023 | 12:51 PM

ಮಂಗಳೂರು: ಬಹರೇನ್​ನಿಂದ ಮುಂಬೈಗೆ ವಿಮಾನ 2 ಗಂಟೆ ತಡವಾಗಿ ಆಗಮಿಸಿದಲ್ಲದೇ ಪ್ರಯಾಣಿಕರನ್ನು ಬಿಟ್ಟು ಹೋಗಿದೆ.  ಇಂಡಿಗೋ ವಿಮಾನ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಂಗಳೂರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಹರೇನ್​ನಿಂದ ಮಂಗಳೂರಿಗೆ ಟಿಕೆಟ್ ಮಾಡಿದ್ದ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಬಹರೇನ್​ನಿಂದ ಮುಂಬೈಗೆ ಆಗಮಿಸಿದ ವಿಮಾನ 2 ತಾಸು ವಿಳಂಬವಾಗಿದೆ. ಮುಂಜಾನೆ 5.30 ಕ್ಕೆ ಲ್ಯಾಂಡ್ ಆಗಮಿಸಬೇಕಿದ್ದ ಇಂಡಿಯೋ ವಿಮಾನ 7.30 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದ್ದು, ಆದರೂ ಸಹ ಮುಂಬೈನಲ್ಲಿ ಕಾಯುತ್ತಿದ್ದ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹೋಗಿದೆ. ಇದರಿಂದ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದ್ದು,  ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹರೇನ್​ನಲ್ಲಿ ಪ್ರಯಾಣಿಕನೋರ್ವನಿಗಾಗಿ ವಿಮಾನ ಎರಡು ಗಂಟೆ ಕಾದಿದೆ. ಹೀಗಾಗಿ ಮುಂಬೈ ನಿಲ್ದಾಣಕ್ಕೆ ತಡವಾಗಿ ಲ್ಯಾಂಡ್ ಆಗಿದೆ. ಅಲ್ಲದೆ ಮುಂಬೈನಿಂದ ಮಂಗಳೂರಿಗೆ ಹಾರಬೇಕಿದ್ದ ಇಂಡಿಗೋ ವಿಮಾನದ ಕನೆಕ್ಟಿಂಗ್ ಫ್ಲೈಟ್ ಮಂಗಳೂರಿನ ಪ್ರಯಾಣಿಕರನ್ನು ಬಿಟ್ಟು ಹಾರಿದೆ. 12 ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಅತಂತ್ರರಾಗಿದ್ದು ಇಂಡಿಗೋ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಸಿಬ್ಬಂದಿ ರಾತ್ರಿ 8.30ರ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ರಾತ್ರಿ ವರೆಗೂ ರೂಮ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದ್ರೆ ಬಹರೇನ್​ನಲ್ಲಿ ಓರ್ವನಿಗಾಗಿ ಎರಡು ಗಂಟೆ ಕಾದಿದ್ದ ವಿಮಾನ, 12 ಜನರಿಗಾಗಿ ಒಂದು ಗಂಟೆ ಕಾದಿಲ್ಲ ಯಾಕೆ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ 12 ಪ್ರಯಾಣಿಕರನ್ನು ಬಿಟ್ಟು ಮಂಗಳೂರಿಗೆ ವಿಮಾನ ಹಾರಿದೆ. ಈ ಹಿನ್ನೆಲೆಯಲ್ಲಿ ಇಂಡಿಗೋ ಸಿಬ್ಬಂದಿ ಇಂದುಶ್ರ(ಮಾರ್ಚ್ 23) ರಾತ್ರಿ 8.30ರ ವಿಮಾನ ವ್ಯವಸ್ಥೆ ಮಾಡಿದೆ. ಅಲ್ಲಿಯವರೆಗೂ ಪ್ರಯಾಣಿಕರಿಗೆ ರೂಮ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:43 pm, Thu, 23 March 23