ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ 11 ಜನ ಬಲಿ, 638 ಮನೆಗಳಿಗೆ ಹಾನಿ: ಗುಂಡೂರಾವ್ ಮಾಹಿತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 02, 2024 | 8:23 PM

ವರುಣಾರ್ಭಟಕ್ಕೆ ಕರುನಾಡು ಕಂಗಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಜನರು ಹೈರಾಣಾಗಿದ್ದಾರೆ. ಅದರಂತೆ ಇಂದು(ಆ.02) ದಕ್ಷಿಣ ಕನ್ನಡ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಭೇಟಿ ನೀಡಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ 11 ಜನ ಬಲಿ, 638 ಮನೆಗಳಿಗೆ ಹಾನಿ: ಗುಂಡೂರಾವ್ ಮಾಹಿತಿ
ದಿನೇಶ್ ಗುಂಡೂರಾವ್
Follow us on

ದಕ್ಷಿಣ ಕನ್ನಡ, ಆ.02: ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಈ ಹಿನ್ನಲೆ ಇಂದು(ಶುಕ್ರವಾರ) ದಕ್ಷಿಣ ಕನ್ನಡ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಭೇಟಿ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಇದುವರೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ. 154 ಮನೆಗಳು ಪೂರ್ತಿ ಹಾನಿ, 484 ಮನೆಗಳು ಭಾಗಶಃ ಹಾನಿಯಾಗಿದೆ ಎಂದಿದ್ದಾರೆ.

ಪರಿಹಾರದ ವಿವರ ಇಂತಿದೆ

ಜಿಲ್ಲೆಯಲ್ಲಿ ನಿರಂತರ ಮಳೆಗೆ ಒಟ್ಟು 65 ಬ್ರಿಜ್ ಡ್ಯಾಮೆಜ್ ಆಗಿದೆ. 3 ಕಾಳಜಿ ಕೇಂದ್ರ ಇದ್ದು, 138 ಮಂದಿ ಆಶ್ರಯ ಪಡೆದಿದ್ದಾರೆ. ಪೂರ್ತಿ ಹಾನಿಯಾದ ಮನೆಗೆ 1.20 ಲಕ್ಷ, ಪ.ಜಾತಿ, ಪ.ಪಂಗಡಗಳಿಗೆ 1.50 ಲಕ್ಷ ರೂ. ಅನಧಿಕೃತ ಮನೆಗೆ 1 ಲಕ್ಷ ಪರಿಹಾರ, ಭಾಗಶಃ ಹಾನಿಯಾದ ಮನೆಗೆ 50 ಸಾವಿರ, ಉಪಕರಣ ಹಾನಿಗೆ 5 ಸಾವಿರ ಜೊತೆಗೆ ಹಾನಿಯಾದ 18 ಅಂಗನವಾಡಿಗೆ 37 ಲಕ್ಷ, 106 ಶಾಲಾ ದುರಸ್ತಿಗೆ 1.94 ಕೋಟಿ ರೂ. ನೀಡಲಾಗಿದೆ. ಮಳೆಹಾನಿಗೆ ತಕ್ಷಣ ಪರಿಹಾರ ನೀಡಲು ಗ್ರಾಮ ಪಂಚಾಯತ್‌ಗಳಿಗೂ ಅನುದಾನ ಕೊಡಲಾಗಿದೆ.

ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ, ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧ

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟ

ಇನ್ನು 20 ಕೋಟಿ ರೂ. ವಿಕೋಪ ನಿರ್ವಹಣೆಗೆ ಹಣ ಇದೆ. ಅದ್ಯಪಾಡಿ, ಕೆತ್ತಿಕಲ್‌ಗೆ ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದಿಂಲೂ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ. ಕೆತ್ತಿಕಲ್ ಮಣ್ಣು ಕುಸಿತ ಆತಂಕದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಯಾರು ಹೇಳಿಲ್ಲ. ಕೆತ್ತಿಕಲ್ ಬಗ್ಗೆ ಎಲ್ಲರ ನಿರ್ಲಕ್ಷ್ಯ ಇದೆ.

ಇತ್ತ ಲ್ಯಾಂಡ್ ಸ್ಲೈಡ್‌ ಆತಂಕದಿಂದ ಕಡಬದಲ್ಲಿ 31 ಜನ ಶಿಫ್ಟ್ ಆಗಿದ್ದಾರೆ. ವಿಕೋಪ ಆದಾಗ ಎಲ್ಲರೂ ಮಾತನಾಡುತ್ತಾರೆ. ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಿದೆ. ವಯನಾಡು ದುರಂತ ಬೇರೆ ಕಡೆ ಕೂಡ ಆಗಬಹುದು. ಪರಿಸರದ ಮೇಲೆ ಆಗುವ ಒತ್ತಡವೂ ದುರಂತಕ್ಕೆ ಕಾರಣವಾಗಿದೆ. ಅಭಿವೃದ್ಧಿ ಸಮತೋಲನದ ಬಗ್ಗೆ ಯೋಚನೆ ಮಾಡಬೇಕು. ಇದೇ ರೀತಿ ಮುಂದುವರೆದರೆ ಅನಾಹುತ ಹೆಚ್ಚಾಗುತ್ತದೆ ಎಂದು ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Fri, 2 August 24