ಕಡಬ ತಾಲೂಕಿನ ಕೋಲ್ಪೆಯಲ್ಲಿ ನೈತಿಕ ಪೊಲೀಸ್​​ಗಿರಿ: 9 ಜನರ ವಿರುದ್ಧ FIR ದಾಖಲು

ಕಡಬ ತಾಲೂಕಿನ ಕೋಲ್ಪೆಯಲ್ಲಿ ಯುವತಿ ಮತ್ತು ಕುಟುಂಬದ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವೇಳೆಯೇ ಈ ಸಂಬಂಧ ಸಂತ್ರಸ್ತೆ ವಿಡಿಯೋ ಹರಿಬಿಟ್ಟಿದ್ದರು. ಸಂತ್ರಸ್ತೆ ದೂರಿನ ಅನ್ವಯ BNS ಕಾಯ್ದೆಯಡಿ ಪೊಲೀಸರು ದೂರು ದಾಖಲಿಸಿದ್ದಾರೆ.

ಕಡಬ ತಾಲೂಕಿನ ಕೋಲ್ಪೆಯಲ್ಲಿ ನೈತಿಕ ಪೊಲೀಸ್​​ಗಿರಿ: 9 ಜನರ ವಿರುದ್ಧ FIR ದಾಖಲು
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Aug 16, 2026 | 9:59 AM

ಮುಖ್ಯಾಂಶಗಳು

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್​ಗಿರಿ
  • ಕಡಬ ತಾಲೂಕಿನ ಕೋಲ್ಪೆಯಲ್ಲಿ ಘಟನೆ
  • ಸಂತ್ರಸ್ತೆ ದೂರಿನನ್ವಯ 9 ಜನರ ವಿರುದ್ಧ FIR

ಮಂಗಳೂರು, ಆಗಸ್ಟ್​​ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ಪ್ರಕರಣ ವರದಿಯಾಗಿದ್ದು, ಆಗಸ್ಟ್ 12ರಂದು ಕಡಬ ತಾಲೂಕಿನ ಕೋಲ್ಪೆ ಎಂಬಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ಗುಂಪೊಂದು ಹಲ್ಲೆ ನಡೆಸಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ 9 ಜನರ ವಿರುದ್ಧ FIR ದಾಖಲಾಗಿದೆ. ಮೆಲ್ಕಾರ್​ನಲ್ಲಿ ಕೆಲಸ ಮಾಡಿತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿಸಿ ಅಂಗಡಿ ಮಾಲೀಕ ಜಹೀರ್ ಸ್ನೇಹಿತ ಸಿಪ್ಪಾನ್ ಕಾರಿನಲ್ಲಿ, ತಾಯಿ ಸಫಿಯಾ ಜೊತೆ ತೆರಳಿದ್ದರು. ಯುವತಿಯನ್ನು ಮನೆ ಬಳಿ ಬಿಟ್ಟು, ಬೈಕ್​​ ಮತ್ತು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಕೋಲ್ಪೆ ಎಂಬಲ್ಲಿ ಅವರನ್ನು ಅಡ್ಡಗಟ್ಟಿ ಪುಂಡರು ನೈತಿಕ ಪೊಲೀಸ್​ಗಿರಿ ನಡೆಸಿದ್ದಾರೆ ಎನ್ನಲಾಗಿದೆ.

ಕಪಾಳಕ್ಕೆ ಹೊಡೆದು ಪ್ರಾಣ ಬೆದರಿಕೆ

ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಯುವತಿ ಕಪಾಳಕ್ಕೆ ಹೊಡೆದು ಪ್ರಾಣ ಬೆದರಿಕೆ ಹಾಕಿದ್ದ ಪುಂಡರು ಜಗಳ ಬಿಡಿಸಲು ಬಂದಿದ್ದ ಜಮಾಲ್​​ರ್​ರನ್ನು ತಳ್ಳಿ ಹಲ್ಲೆ ನಡೆಸಿದ್ದರು. ಪ್ರಜ್ಞೆತಪ್ಪಿ ಬಿದ್ದಿದ್ದ ಅಕ್ಕನನ್ನು ಮೇಲೆತ್ತಲು ಬಂದ ಸಹೋದರಿ ಫಾಸಿಲಾ ಕಪಾಳಕಕ್ಕೂ ಹೊಡೆದು ದೂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವೇಳೆಯೇ ಈ ಸಂಬಂಧ ಸಂತ್ರಸ್ತೆ ವಿಡಿಯೋ ಹರಿಬಿಟ್ಟಿದ್ದರು. ಸಂತ್ರಸ್ತೆ ದೂರಿನ ಅನ್ವಯ ಉಪ್ಪಿನಂಗಡಿ ಠಾಣೆಯಲ್ಲಿ ಆರೋಪಿಗಳಾದ ಜಾಬಿರ್, ಸಿದ್ದಿಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್, ಅಶ್ರಫ್ ಕೋಲ್ಪೆ ವಿರುದ್ಧ BNS ಸೆಕ್ಷನ್ 115(2), 126(2), 189(2), 190, 191(2), 351(2), 352)ರ ಅಡಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿಯ ಕೈಬೆರಳು: ಭಾರೀ ಅವಘಡ ತಪ್ಪಿಸಿದ ವಿದ್ಯಾರ್ಥಿ; ಎಲ್ಲೆಡೆ ಮೆಚ್ಚುಗೆ

ಸಂತ್ರಸ್ತ ಯುವತಿ ಹೇಳಿದ್ದೇನು?

ರಾತ್ರಿ ತಡವಾದ ಕಾರಣ ಘಟನೆ ನಡೆದ ದಿನ ಕಾರಿನಲ್ಲಿ ಬಂದಿದ್ದೆ. ನಾನು ಮತ್ತು ನನ್ನ ತಂಗಿಯ ಖಾಸಗಿ ಭಾಗದ ಮೇಲೆಯೂ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ನಮ್ಮ ಕುಟುಂಬಸ್ಥರ ಮೇಲೆಯೂ ದಾಳಿ ನಡೆದಿದೆ. ಅವರು ಹಲ್ಲೆ ನಡೆಸಿದ ತೀವ್ರತೆಗೆ ನಾವು ರಸ್ತೆಯಲ್ಲಿ ಬಿದ್ದಿದ್ದು, ಆರೋಪಿಗಳು ತೀವ್ರ ಅಮಾನುಷವಾಗಿ ವರ್ತಿಸಿದ್ದಾರೆ. ತೀರಾ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಸಂತ್ರಸ್ತ ಯುವತಿ ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us