ಮಂಗಳೂರು: ನಾಪತ್ತೆಯಾಗಿದ್ದ ಮಹಿಳೆ 5 ವರ್ಷದ ಬಳಿಕ ಪತ್ತೆ, ಒಂದಾದ ತಾಯಿ-ಮಕ್ಕಳು

| Updated By: ವಿವೇಕ ಬಿರಾದಾರ

Updated on: Nov 08, 2024 | 9:50 AM

ಐದು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಆಸ್ಮಾ ಎಂಬ ಮಹಿಳೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಪತ್ತೆಯಾದ ಆಸ್ಮಾ ಅವರು ವೈಟ್ ಡೌಸ್ ಆಶ್ರಯ ತಾಣದಲ್ಲಿ ಇದ್ದರು. ಐದು ವರ್ಷದ ಬಳಿಕ ತಾಯಿ-ಮಕ್ಕಳು ಒಂದಾಗಿದ್ದಾರೆ. ಆಸ್ಮಾ ಅವರು ಪತ್ತೆಯಾಗಿದ್ದು ಹೇಗೆ? ಈ ಸುದ್ದಿ ಓದಿ

ಮಂಗಳೂರು: ನಾಪತ್ತೆಯಾಗಿದ್ದ ಮಹಿಳೆ 5 ವರ್ಷದ ಬಳಿಕ ಪತ್ತೆ, ಒಂದಾದ ತಾಯಿ-ಮಕ್ಕಳು
ಮತ್ತೆ ಒಂದಾದ ತಾಯಿ-ಮಕ್ಕಳು
Follow us on

ಮಂಗಳೂರು, ನವೆಂಬರ್​ 08: ಐದು ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿ (Mother) ಮಂಗಳೂರಿನಲ್ಲಿ (Mangaluru) ಪತ್ತೆಯಾಗಿದ್ದು, ಮಕ್ಕಳು ಸಂತಸಗೊಂಡಿದ್ದಾರೆ. ಆಸ್ಮಾ ನಾಪತ್ತೆಯಾಗಿದ್ದ ಮಹಿಳೆ. ಮೂಲತಃ ಮುಂಬೈನ (Mumbai) ಥಾಣೆಯ ಮಂಬ್ರಿಲ್​ನ ನಿವಾಸಿ ಆಸ್ಮಾ ಅವರು ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿದ್ದರು. ಬಳಿಕ, ದಂಪತಿ ಮುಂಬೈನ ಥಾಣೆಯ ಮಂಬ್ರಿಲ್​ನಲ್ಲಿ ವಾಸವಾಗಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಆಸ್ಮಾ, 2019ರ ಮೇನಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.

ಪತಿ ಮನೆಯಿಂದ ಮುಂಬೈನ ಬೈಕಲಾದಲ್ಲಿರುವ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದರು. ಬಳಿಕ, ಆಸ್ಮಾ ದಾರಿತಪ್ಪಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಒಬ್ಬರೆ ನಡೆದುಕೊಂಡು ಹೋಗುತ್ತಿದ್ದ ಆಸ್ಮಾ ಅವರನ್ನು ಕಂಡ ವೈಟ್ ಡೌಸ್ ನಿರ್ಗತಿಕರ ಆಶ್ರಯ ತಾಣದ ಸಂಸ್ಥಾಪಕಿ ಕೊರಿನ್ ರಸ್ಕಿನಾ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಜೀವಂತವಾಗಿ ಹೂತುಹಾಕಿದ ದುರುಳರು: ಗುಂಡಿಯಿಂದ ಎದ್ದು ಬಂದ ಯೋಗ ಶಿಕ್ಷಕಿ, ಮುಂದೇನಾಯ್ತು?

ಆಸ್ಮಾರನ್ನು ರಕ್ಷಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ, ಆಸ್ಮಾ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚಲು ಕೊರಿನ್ ರಸ್ಕಿನಾ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಕುಟಂಬದವರ ಸುಳಿವು ಸಿಗಲಿಲ್ಲ. ಆಸ್ಮಾ ಅವರು ಇತ್ತೀಚೆಗೆ ಮುಂಬೈನ ಬೈಕಲಾದ ತವರು ಮನೆಯ ವಿಳಾಸ ನೀಡಿದ್ದರು. ವಿಳಾಸದ ಆಧಾರದ ಮೇಲೆ ಕೊರಿನ್ ರಸ್ಕಿನಾ ಅವರು ಬೈಕಲಾ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾರೆ.

ಪೊಲೀಸರು ಈ ವಿಚಾರವನ್ನು ಆಸ್ಮಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೆ ಆಸ್ಮಾ ಕುಟುಂಬಸ್ಥರು ವೈಟ್ ಡೌಸ್ ಸಂಸ್ಥೆಗೆ ಸಂಪರ್ಕಿಸಿ, ವಿಮಾನದ ಮೂಲಕಮಂಗಳೂರಿಗೆ ಬಂದಿದ್ದಾರೆ. ಬರೋಬ್ಬರಿ ಐದು ವರ್ಷದ ಹಿಂದೆ ಕಳೆದುಕೊಂಡ ತಾಯಿಯನ್ನು ಮತ್ತೆ ಕಂಡು ಮಕ್ಕಳು ಕಣ್ಣೀರು ಹಾಕಿದರು. ಕುಟುಂಬ ಸದಸ್ಯರು ಆಸ್ಮಾರನ್ನು‌ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:07 am, Fri, 8 November 24