
ಮಂಗಳೂರು, ಜ.23: ಮಂಗಳೂರಿನ ಜನರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ ಕೇಂದ್ರ ಸರ್ಕಾರ, ನಾಗರಕೋಯಿಲ್ ಮತ್ತು ಮಂಗಳೂರು ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು (Amrit Bharat Express) ಶೀಘ್ರದಲ್ಲೇ ಆರಂಭವಾಗಲಿದೆ. ಈ ಹೊಸ ರೈಲು ತಮಿಳುನಾಡಿನಿಂದ ಕೇರಳದ ಮೂಲಕ ಕರಾವಳಿ ಕರ್ನಾಟಕಕ್ಕೆ ಸಂಪರ್ಕಿಸಲಿದೆ. ಇದು ಪಶ್ಚಿಮ ಕರಾವಳಿ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕೈಗೆಟುಕುವ ದರದಲ್ಲಿ ದೂರು ಊರುಗಳನ್ನು ಪ್ರಯಾಣಿಸುವ ಅವಕಾಶವನ್ನು ನೀಡಲಿದೆ. ಇದು ಪ್ರವಾಸೋದ್ಯಮ, ಮೀನುಗಾರಿಕೆ, ಸಣ್ಣ ವ್ಯಾಪಾರ ಮತ್ತು ಅಂತರ-ರಾಜ್ಯ ಆರ್ಥಿಕ ಏಕೀಕರಣವನ್ನು ಉತ್ತೇಜಿಸುತ್ತದೆ.16329/16330 ಸಂಖ್ಯೆಯ ನಾಗರಕೋಯಿಲ್-ಮಂಗಳೂರು-ನಾಗರ್ಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಮಾರ್ಗಗಗಳಲ್ಲಿ ಪ್ರಯಾಣಿಸಲಿದೆ. ತಿರುವನಂತಪುರಂ ಸೆಂಟ್ರಲ್, ಕೊಲ್ಲಂ, ಚೆಂಗನ್ನೂರ್, ಕೊಟ್ಟಾಯಂ ಮುಂತಾದ ಪ್ರಮುಖ ರೈಲು ಮಾರ್ಗಗಗಳಲ್ಲಿ ಓಡಲಿದೆ.
ನಾಗರಕೋಯಿಲ್ ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯದಲ್ಲಿ, ರೈಲು 20 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. ಕಾಸರಗೋಡು, ಕಣ್ಣೂರು, ತಲಶ್ಶೇರಿ, ಕೋಝಿಕ್ಕೋಡ್, ತಿರೂರ್, ಶೋರನೂರು, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶ್ಶೇರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಕರುನಾಗಪ್ಪಲ್ಲಿ, ಕೊಲ್ಲಂ, ಶಿವಗಿರಿ, ವರ್ಕಳ, ತಿರುವನಂತಪುರಂ ಸೆಂಟ್ರಲ್. ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ ಸಂಚರಿಸಲಿದೆ. ಈ ರೈಲು ಪ್ರತಿ ಮಂಗಳವಾರ ನಾಗರಕೋಯಿಲ್‌ನಿಂದ ಮತ್ತು ಪ್ರತಿ ಬುಧವಾರ ಮಂಗಳೂರಿನಿಂದ ಹೊರಡಲಿದೆ.
ಇದನ್ನೂ ಓದಿ: ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ, ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಿದ್ಧ
ರೈಲು ಸಂಖ್ಯೆ 16329 ನಾಗರಕೋಯಿಲ್-ಮಂಗಳೂರು-ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್, ಮಂಗಳವಾರ ಬೆಳಿಗ್ಗೆ 11:40 ಕ್ಕೆ ನಾಗರಕೋಯಿಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 05:00 ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಮತ್ತೆ ರೈಲು ಸಂಖ್ಯೆ 16330 ಮಂಗಳೂರು-ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಬುಧವಾರ ಬೆಳಿಗ್ಗೆ 08:00 ಕ್ಕೆ ಮಂಗಳೂರನ್ನು ಬಿಟ್ಟು ಅದೇ ದಿನ ರಾತ್ರಿ 22:05 ಕ್ಕೆ ನಾಗರಕೋಯಿಲ್ ತಲುಪಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ