ಬೋಳ ಗ್ರಾಮ ಪಂಚಾಯತ್ ರಸ್ತೆಗೆ ಅಳವಡಿಸಿದ್ದ ನಾತುರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವು

| Updated By: ವಿವೇಕ ಬಿರಾದಾರ

Updated on: Jun 06, 2022 | 3:51 PM

ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾತುರಾಮ್ ಗೋಡ್ಸೆ ಹೆಸರಿನ ನಾಮಫಲಕ ಅವಳವಡಿಸಿರುವ ವಿಚಾರವಾಗಿ ಕಾರ್ಕಳ ಯುವ ಕಾಂಗ್ರೆಸ್ ಮುಖಂಡರು ಬೋಳ ಗ್ರಾಮ ಪಂಚಾಯತ್ ಭೇಟಿಕೊಟ್ಟು ನಾಮಫಲಕ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಬೋಳ ಗ್ರಾಮ ಪಂಚಾಯತ್ ರಸ್ತೆಗೆ ಅಳವಡಿಸಿದ್ದ ನಾತುರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವು
ನಾಥುರಾಮ ಗೋಡ್ಸೆ ನಾಮಫಲ
Image Credit source: Kannada Prabha
Follow us on

ದಕ್ಷಿಣ ಕನ್ನಡ: ಕಾರ್ಕಳ (Karkala) ತಾಲೂಕಿನ ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾತುರಾಮ್ ಗೋಡ್ಸೆ (Nathuram Godse) ಹೆಸರಿನ ನಾಮಫಲಕ ಅವಳವಡಿಸಿರುವ ವಿಚಾರವಾಗಿ ಕಾರ್ಕಳ ಯುವ ಕಾಂಗ್ರೆಸ್ (Congress) ಮುಖಂಡರು ಬೋಳ ಗ್ರಾಮ ಪಂಚಾಯತ್ ಭೇಟಿಕೊಟ್ಟು ನಾಮಫಲಕ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ರಸ್ತೆಗೆ ದೇಶ ಕಂಡ ಮೊದಲ ಭಯೋತ್ಪಾದಕನ ಹೆಸರು ಇಡಲಾಗಿದೆ. ಬೋರ್ಡ್ ತೆರವುಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ದೇಶಕ್ಕೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಏನು ಕೊಡುಗೆ ಕೊಟ್ಟಿದೆ? ವಿ.ಎಸ್.ಉಗ್ರಪ್ಪ ಪ್ರಶ್ನೆ

ಈ ವೇಳೆ ಬೋಳ ಗ್ರಾಮ ಪಂಚಾಯತ್ ಪಿಡಿಓ ಪಂಚಾಯತ್​ಗೂ ಈ ಬೋರ್ಡ್​​ಗೂ ಸಂಬಂಧವಿಲ್ಲ. ಯಾರೋ ಕಿಡಿಗೇಡಿಗಳು ಬೋರ್ಡ್ ಹಾಕಿದ್ದಾರೆ. ಪೊಲೀಸರನ್ನು ಕರೆಸಿ ಬೋರ್ಡ್ ತೆರವುಗೊಳಿಸುವುದಾಗಿ ಪಿಡಿಒ ಭರವಸೆ ನೀಡಿದ್ದಾರೆ. ನಂತರ ಸ್ಥಳಕ್ಕೆ ತೆರಳಿದ ಕಾರ್ಕಳ ಪೊಲೀಸರುಬೋಳ ಗ್ರಾಮಪಂಚಾಯತ್ ಉಪಸ್ಥಿತಿ ಯಲ್ಲಿ ವಿವಾದಾಸ್ಪದ ಬೋರ್ಡ್ ತೆರವುಗೊಳಿಸಿದ್ದಾರೆ.

ಇದನ್ನು ಓದಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋಟಿಸ್​ ನೀಡಿದ ಮಂಗಳೂರು ವಿವಿ

ಈ ಸಂಬಂಧ ಕಾರ್ಕಳ ಯುವ ಕಾಂಗ್ರೆಸ್ ಮುಖಂಡ ಮಾತನಾಡಿ ದೇಶದ ಮೊದಲ ಭಯೋತ್ಪಾದಕನ ಹೆಸರುನ್ನು ಯಾರೊ ಕಿಡಿಗೇಡಿಗಳು ರಸ್ತೆಗೆ ಅಳವಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿವೆ. ರಾತ್ರೊರಾತ್ರಿ ಯಾರೋ ಕಿಡಿಗೇಡಿಗಳು ನಾಮಫಲಕ ಅಳವಡಿಸಿದ್ದಾರೆ. ಕೂಡಲೆ ಅವರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:51 pm, Mon, 6 June 22