ಮಂಗಳೂರು: ಕರ್ನಾಟಕದಲ್ಲಿ ಪ್ರಕರಣವೊಂದ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೊಸ ಅಸ್ತ್ರ ಪ್ರಯೋಗಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶರಣಾಗಲು ಆರೋಪಿಗಳಿಗೆ ಜೂನ್ 30ರವರೆಗೆ ಗಡುವು ನೀಡಲಾಗಿದೆ. NIA ನ್ಯಾಯಾಲಯಕ್ಕೆ ಶರಣಾಗದಿದ್ದರೆ ಆರೋಪಿಗಳ ಮನೆಗಳಲ್ಲಿ ಎಲ್ಲವನ್ನೂ ಜಪ್ತಿ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಸುಳ್ಯದಲ್ಲಿ (Sullia) ಮೈಕ್ ಅನೌನ್ಸ್ ಮೆಂಟ್ ಮೂಲಕ ಸಾರ್ವಜನಿಕವಾಗಿ ಘೋಷಣೆ ಕೂಗಲಾಗಿದೆ (Praveen Nettaru murder case).
ಇದೇ ವೇಳೆ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಸುಳ್ಯದ ಕಲ್ಲುಮುಟ್ಲುವಿನಲ್ಲಿ ವಾಸವಿದ್ದ ಉಮ್ಮರ್ ಫಾರೂಕ್ ಹಾಗೂ ಮುಸ್ತಾಫ್ ನಿವಾಸಕ್ಕೆ ಈ ಕುರಿತಾದ ಭಿತ್ತಿಪತ್ರಗಳನ್ನು NIA ನ್ಯಾಯಾಲಯದ ಅಧಿಕಾರಿಗಳು ಅಂಟಿಸಿದ್ದಾರೆ. ಕೋರ್ಟ್ ಆದೇಶದ ಪ್ರತಿಯನ್ನು ಅಂಟಿಸಿರುವ ಅಧಿಕಾರಿಗಳು, ಆರೋಪಿಗಳಿಗೆ ಶರಣಾಗಲು ಇನ್ನೆರೆಡೇ ದಿನ ಕಾಲಾವಕಾಶ ನೀಡಿರುವುದಾಗಿ ತಿಳಿಸಿದ್ದಾರೆ.
ಏನಿದು ಪ್ರಕರಣ: ಪ್ರವೀಣ್ ನೆಟ್ಟಾರು ಹತ್ಯೆ ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದಿತ್ತು. ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ 21 ಅರೋಪಿಗಳನ್ನು ಎನ್ಐಎ ಅರೆಸ್ಟ್ ಮಾಡಿ, ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿತ್ತು. ಅದರ ಮುಂದಿನ ಭಾಗವಾಗಿ ಮತ್ತೆ, ಇಬ್ಬರು ಅರೋಪಿಗಳಾದ ತುಫೈಲ್ ಎಂ ಹೆಚ್ ಮತ್ತು ಮಹಮ್ಮದ್ ಜಬೀರ್ ವಿರುದ್ದ ಪೂರಕ ಚಾರ್ಜ್ರ್ಶೀಟ್ ಅನ್ನು ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದೆ.
ಕೊಲೆ ಮಾಡಿದ್ದ ಅರೋಪಿಗಳ ಪೈಕಿ ಮಹಮ್ಮದ್ ಜಾಬಿರ್ ಮಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಹೇಳಿ ಪ್ರಚೋದನಕಾರಿ ಭಾಷಣವನ್ನೂ ಮಾಡಿದ್ದ ಎಂಬುದು ಎನ್ ಐ ಎ ತನಿಖೆ ವೇಳೆ ಪತ್ತೆಯಾಗಿದೆ. ಒಟ್ಟಾರೆ ಪ್ರವೀಣ್ ನೆಟ್ಟಾರು ಕೊಲೆ ಕೇವಲ ಒಂದು ಕಾರಣಕ್ಕೆ ಆಗಿದ್ದಲ್ಲ, ಬದಲಾಗಿ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ತರುವ ಉದ್ದೇಶಕ್ಕೆ ಪೂರಕವಾಗಿ ಇಟ್ಟಿದ್ದ ಹೆಜ್ಜೆಗುರುತು ಎನ್ನುವುದು ಆತಂಕಕಾರಿ ವಿಷಯವಾಗಿದೆ. ಸದ್ಯ 21 ಅರೋಪಿಗಳ ವಿರುದ್ದ ಈ ಕೇಸ್ನಲ್ಲಿ ಚಾರ್ಜ್ರ್ಶಿಟ್ ಸಲ್ಲಿಕೆ ಮಾಡಿರುವ ಎನ್ ಐ ಎ ಹೆಚ್ಚಿನ ತನಿಖೆ ನಡೆಸುತ್ತಿದೆ.
ಮಂಗಳೂರು ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Wed, 28 June 23