Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವುದಕ್ಕೆ ರಾಜ್ಯದಲ್ಲೆಡೆ ಪರ ವಿರೋಧಗಳ ಸುರಿಮಳೆ

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವ ವಿಚಾರವಾಗಿ ರಾಜ್ಯದೆಲ್ಲೆಡೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಅದರಂತೆ ವಿವಿಧ ಜಿಲ್ಲೆಗಳ ಜನರ ಅಭಿಪ್ರಾಯ ಇಲ್ಲಿದೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವುದಕ್ಕೆ ರಾಜ್ಯದಲ್ಲೆಡೆ ಪರ ವಿರೋಧಗಳ ಸುರಿಮಳೆ
ಅನ್ನಭಾಗ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 29, 2023 | 11:47 AM

ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದೊಂದನ್ನೇ ಈಡೇರಿಸುತ್ತಾ ಬರುತ್ತಿದೆ. ಅದರಂತೆ ಅನ್ನಭಾಗ್ಯ ಯೋಜನೆ(Anna Bhagya Scheme)ಜಾರಿಗೆ ಅಕ್ಕಿ ಇಲ್ಲವೆಂದು ದಿನಗಳನ್ನು ಮುಂದೂಡುತ್ತಾ ಬಂದಿತ್ತು. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೆವೆಂದು ಹೇಳಿ ಮೋಸ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ ಅಕ್ಕಿ ಸಿಗದ ಕಾರಣ,​ ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ ಮಾಡಿರುವ ವಿಚಾರ ಕುರಿತು ರಾಜ್ಯದೆಲ್ಲೆಡೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಕುರಿತು ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕರು ‘ನಮಗೆ ಹಣ ಬೇಡ, ಅಕ್ಕಿ ನೀಡಿ ಎನ್ನುತ್ತಾ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹಣ ನೀಡುವುದು ಒಳ್ಳೆ ನಿರ್ಧಾರವೆಂದಿದ್ದಾರೆ.

ಕುಂದಾನಗರಿಯಲ್ಲಿ ಹಣ ಬೇಡ, ಅಕ್ಕಿ ಬೇಕೆಂದ ಸಾರ್ವಜನಿಕರು

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹಣವನ್ನ ತಿನ್ನೋಕಾಗುತ್ತಾ? 170 ರೂ. ಒಂದು ದಿನದಲ್ಲಿ ಖರ್ಚಾಗುತ್ತೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 50 ರಿಂದ 70 ರೂಪಾಯಿವರೆಗೂ ಇದೆ. ಅಕ್ಕಿ ಬದಲು ಹಣ ನೀಡಿದ್ರೆ, ಸಾರಾಯಿ ಕುಡಿದು ಹಾಳು ಮಾಡುತ್ತಾರೆ. ಕೊಟ್ಟ ಮಾತಿನಂತೆ ತಲಾ 10ಕೆಜಿ ಅಕ್ಕಿ ನೀಡುವಂತೆ ಜನರ ಆಗ್ರಹಿಸಿದರೆ, ಮತ್ತೊಂದೆಡೆ ಏನೂ ಫ್ರೀ ಕೊಡೋದೇ ಬೇಡ, ಮೊದಲು ಐದು ಕೆಜಿ ಅಕ್ಕಿ ನೀಡುತ್ತಿದ್ದರು ಅದು ಒಳ್ಳೆಯದಿತ್ತು. ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡುವ ಅವಶ್ಯಕತೆ ಇಲ್ಲ, ಜೊತೆಗೆ ಹಣ ನೀಡುವ ಅವಶ್ಯಕತೆಯೂ ಇಲ್ಲ ಎಂದೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Money in place of rice: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಿದ ಸರ್ಕಾರ, ಜುಲೈನಿಂದಲೇ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ!

ಅನ್ನಭಾಗ್ಯ ಅಕ್ಕಿ ಬದಲು ಹಣ ನೀಡುವ ವಿಚಾರ; ಹರ್ಷ ವ್ಯಕ್ತಪಡಿಸಿದ ಫಲಾನುಭವಿಗಳು

ಮಂಗಳೂರು: ಒಂದು ವಿರೋಧಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸರ್ಕಾರದ ನಿರ್ಧಾರಕ್ಕೆ ಫಲಾನುಭವಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಹಣ ನೀಡಿದ್ರೆ, ಅದೇ ಹಣದಲ್ಲಿ ಬೇರೆ ದಿನಸಿ ಖರೀದಿಸಬಹುದು. ಕರಾವಳಿಯಲ್ಲಿ ಹೆಚ್ಚಾಗಿ ಕುಚ್ಚಲಕ್ಕಿ ಬಳಕೆ ಮಾಡುತ್ತೇವೆ. ಈ ಹಣದಲ್ಲಿ ಸ್ವಲ್ಪ ಆದ್ರೂ, ಕುಚ್ಚಲಕ್ಕಿ ಖರೀದಿ ಮಾಡಬಹುದು. ಹೆಚ್ಚಿನವರು ಬಡತನದಲ್ಲಿ ಇರ್ತಾರೆ. ಈ ಹಣ ಬಡವರಿಗೆ ತುಂಬಾ ಸಹಾಯವಾಗುತ್ತೆ ಎಂದಿದ್ದಾರೆ.

ನಮಗೆ ಹಣ ಬೇಡ ಅಕ್ಕಿಯನ್ನೇ ಕೊಡಿ ಎಂದ ಮೈಸೂರಿಗರು

ಮೈಸೂರು: ಇತ್ತ ಅಕ್ಕಿ ಬದಲು ಹಣ ನೀಡುವ ಸರ್ಕಾರದ ವಿಚಾರ ಕುರಿತು‘ ನಮಗೆ ಹಣ ಬೇಡ ಅಕ್ಕಿಯನ್ನೇ ಕೊಡಿ, ಹಣ ಇದ್ದರೆ ಖರ್ಚಾಗುತ್ತದೆ, ಅಕ್ಕಿ ಆದರೆ ಊಟ ಮಾಡಬಹುದು. ಹಣ ಇದ್ದರೆ ಮಕ್ಕಳು ಗಂಡ ಕಿತ್ತುಕೊಳ್ಳುತ್ತಾರೆ. ಜೊತೆಗೆ ಕುಡಿತ ಸೇರಿ ಬೇರೆ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಅಕ್ಕಿ ಇದ್ದರೆ ಗಂಜಿಯನ್ನಾದರೂ ಮಾಡಿಕೊಂಡು ಕುಡಿಯಬಹುದು. ಅವರು ಕೊಡುವ ಹಣದಲ್ಲಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ತಡವಾದರೂ ಪರ್ವಾಗಿಲ್ಲ, ನಮಗೆ ಅಕ್ಕಿಯೇ ಬೇಕು ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ