ಗುಂಡು ಹೊಡೆಯುತ್ತಲೇ ಅಟಿಕೆ ಪಿಸ್ತೂಲೆಂದಿದ್ದ ಧರ್ಮಗುರು! ಮಂಗಳೂರಿನಲ್ಲಿ ಪಿಎಫ್​ಐ ಮತ್ತೆ ಸಕ್ರಿಯವಾಗಿರುವ ಶಂಕೆ

| Updated By: Ganapathi Sharma

Updated on: Jan 11, 2025 | 11:22 AM

ಮಂಗಳೂರಿನ ವಾಮಂಜೂರಿನಲ್ಲಿ ಇತ್ತೀಚಗೆ ನಡೆದ ರಿವಾಲ್ವರ್ ಮಿಸ್‌ಫೈರ್‌ನಲ್ಲಿ ಅಕ್ರಮ ಪಿಸ್ತೂಲ್ ಬಳಕೆಯಾಗಿರುವುದು ಬಹಿರಂಗವಾಗಿದೆ. ಘಟನೆ ಸಂಬಂಧ ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯ ಅದ್ದು ಯಾನೆ ಬದ್ರುದ್ದೀನ್ ಮತ್ತು ಇಮ್ರಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಫ್ಐ ಸಂಘಟನೆ ಮತ್ತೆ ಸಕ್ರಿಯವಾಗಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿವರಗಳಿಗೆ ಮುಂದೆ ಓದಿ.

ಗುಂಡು ಹೊಡೆಯುತ್ತಲೇ ಅಟಿಕೆ ಪಿಸ್ತೂಲೆಂದಿದ್ದ ಧರ್ಮಗುರು! ಮಂಗಳೂರಿನಲ್ಲಿ ಪಿಎಫ್​ಐ ಮತ್ತೆ ಸಕ್ರಿಯವಾಗಿರುವ ಶಂಕೆ
ಇಮ್ರಾನ್ ಮತ್ತು ಬದ್ರುದ್ದೀನ್
Follow us on

ಮಂಗಳೂರು, ಜನವರಿ 11: ಮಂಗಳೂರಿನಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಮತ್ತೆ ಸಕ್ರಿಯರಾಗಿದ್ದಾರಾ ಎಂಬ ಅನುಮಾನ ಬಲವಾಗಿದೆ. ವಾಮಂಜೂರಿನಲ್ಲಿ ಜನವರಿ 6 ರಂದು ನಡೆದ ರಿವಾಲ್ವರ್ ಮಿಸ್ ಫೈರ್ ಪ್ರಕರಣ ಭಾರೀ ಅನುಮಾನ ಹುಟ್ಟಿಸಿದೆ. ಮಿಸ್ ಫೈರ್ ಪ್ರಕರಣದಲ್ಲಿ ಬಳಕೆಯಾದ ಪಿಸ್ತೂಲ್ ಅಕ್ರಮ ಎಂಬುದು ಬೆಳಕಿಗೆ ಬಂದಿದೆ. ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯ, ರೌಡಿಶೀಟರ್ ಅದ್ದು ಯಾನೆ ಬದ್ರುದ್ದೀನ್ ಅಕ್ರಮ ಪಿಸ್ತೂಲ್ ಬಳಕೆ ಮಾಡಿರುವುದು, ಅನುಮಾನಗಳಿಗೆ ಪುಷ್ಟಿ ನೀಡಿದೆ.

ವಾಮಂಜೂರಿನಲ್ಲಿ ಹಳೇ ವಸ್ತುಗಳ ಮಾರಾಟದ ಅಂಗಡಿ ಇಟ್ಟುಕೊಂಡಿರುವ ಅದ್ದು ಯಾನೆ ಬದ್ರುದ್ದೀನ್ ಲೈಸೆನ್ಸ್ ಇಲ್ಲದೇ 9 ಎಂಎಂ ಪಿಸ್ತೂಲ್ ಇಟ್ಟುಕೊಂಡಿದ್ದ. ಈತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಕಾರ್ಯಕರ್ತನಾಗಿದ್ದ. ಈತನಿಗೆ ಪಿಎಫ್ಐನ ಇನ್ನೂಬ್ಬ ಸದಸ್ಯ ರೌಡಿಶೀಟರ್ ಇಮ್ರಾನ್ ಎಂಬಾತ ಪಿಸ್ತೂಲ್ ಕೊಡಿಸಿದ್ದ ಮಾಹಿತಿ ದೊರೆತಿದೆ.

ಕೇರಳದಿಂದ ಅಕ್ರಮವಾಗಿ ಪಿಸ್ತೂಲ್ ತರಿಸಿಕೊಂಡಿದ್ದ ಆರೋಪಿ

ರೌಡಿಶೀಟರ್ ಇಮ್ರಾನ್ ಕೇರಳದಿಂದ ಅಕ್ರಮವಾಗಿ ಪಿಸ್ತೂಲ್ ತರಿಸಿಕೊಂಡು ಅದ್ದುಗೆ ಕೊಟ್ಟಿದ್ದ. ಜನವರಿ 6 ರ ಮಿಸ್ ಫೈರ್ ಘಟನೆ ಬೆನ್ನಲ್ಲೇ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.

ಧರ್ಮಗುರು ಕೈಯಲ್ಲಿ ಸುಳ್ಳು ಹೇಳಿಸಿದ್ದ ಆರೋಪಿಗಳು

ಅದ್ದುವಿನ ಕೈಯ್ಯಲ್ಲಿದ್ದ ಗನ್ ಮಿಸ್ ಫೈರ್ ಆಗಿ ಅಂಗಡಿ ಹೊರಗೆ ನಿಂತಿದ್ದ ಧರ್ಮಗುರು ಸಫ್ವಾನ್​ಗೆ ತಾಗಿತ್ತು. ಆದರೆ, ವಿಚಾರ ಹೊರಗೆ ಬಂದರೆ ಆಪತ್ತು ಎಂದು ಅದ್ದು ಮತ್ತು ಇಮ್ರಾನ್ ಕಥೆ ಕಟ್ಟಿದ್ದರು. ಗುಂಡೇಟು ತಿಂದ ಸಫ್ವಾನ್ ಬಳಿ ಪೊಲೀಸರಿಗೆ ಸುಳ್ಳು ಕಥೆ ಹೇಳಿಸಿದ್ದರು. ಧರ್ಮಗುರು ಸಫ್ವಾನ್ ತಾನೇ ಗುಂಡು ಹೊಡೆದುಕೊಂಡೇ ಅಟಿಕೆ ಪಿಸ್ತೂಲ್ ಎಂದು ಹೇಳಿದ್ದ. ಆದರೆ, ಎಫ್ಎಸ್ಎಲ್ ಹಾಗೂ ಬ್ಯಾಲೆಸ್ಟಿಕ್ ವರದಿಯಲ್ಲಿ ಸಫ್ವಾನ್ ಸುಳ್ಳು ಹೇಳಿರುವುದು ಪತ್ತೆಯಾಗಿದೆ. ಸಫ್ವಾನ್ ಕೂಡ ನಿಷೇಧಿತ ಪಿಎಫ್ಐ ಸದಸ್ಯ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಸದ್ಯ ಅಕ್ರಮ ಪಿಸ್ತೂಲ್ ಇಟ್ಟುಕೊಂಡ ಬಗ್ಗೆ ಪೊಲೀಸರು ಅಳವಾದ ತನಿಖೆ ಆರಂಭಿಸಿದ್ದಾರೆ. ನಿಷೇಧಿತ ಪಿಎಫ್ಐ ಸದಸ್ಯರಾದ ಅದ್ದು ಹಾಗೂ ಇಮ್ರಾನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರ ನೆಟ್​​ವರ್ಕ್​​ಗಳ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಕ್ರಮ ಗನ್ ತಂದಿಟ್ಟು ಯಾರದ್ದಾದರೂ ಹತ್ಯೆಗೆ ಸ್ಕೆಚ್ ಹಾಕಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:20 am, Sat, 11 January 25