Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 08, 2022 | 8:07 AM

ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗೊ ಮೊದಲು ಎರಡು ಭಾರೀ ಹತ್ಯೆ ಯತ್ನ ನಡೆದಿತ್ತು.

Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಇಬ್ಬರ ಬಂಧನ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು
Follow us on

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರು ಬಂಧಿಸಲಾಗಿತ್ತು, ಪೊಲೀಸರು ವಿಚಾರ‌ಣೆ ನಡೆಸುತ್ತಿದ್ದಾರೆ. ಅಬೀದ್ (22), ನೌಫಾಲ್ (28) ಬಂಧಿತ ಆರೋಪಿಗಳು. ಅಬಿದ್​ ನಾವೂರು ನಿವಾಸಿ ಯಾಕೂಬ್ ಮಗ. ನೌಫಾಲ್ ಬೆಳ್ಳಾರೆಯ ಗೌರಿಹೊಳೆ ನಿವಾಸಿ ಮೊಹಮ್ಮದ್ ಮಗನಾಗಿದ್ದಾನೆ. ಹಂತಕರು ಕೊಲೆ ಮಾಡಲು ಅಬೀದ್ ಬಳಿ ಇದ್ದ ಕೇರಳ ರಿಜಿಸ್ಟ್ರೇಷನ್​ ಬೈಕ್​ನ್ನು ಬಳಿಸಿದ್ದಾರೆ. ಅದೇ ಬೈಕ್​​ನಲ್ಲಿ ಬಂದು ಕೊಲೆ ಮಾಡಿ ಮೂವರು ಹಂತಕರು ಹೋಗಿದ್ದಾರೆ. ಅಬೀದ್​​ಗೆ ಹಂತಕರ ಜೊತೆ ನೇರಾನೇರ ಟಚ್ ಇತ್ತು ಎನ್ನಲಾಗುತ್ತಿದೆ. ನೌಫಾಲ್​ಗೂ ಕೂಡ ಹಂತಕರ ಜೊತೆ ನೇರಾನೇರ ಸಂಪರ್ಕವಿತ್ತು. ಹಂತಕರಿಗೆ ಪ್ರವೀಣ್ ಅಂಗಡಿ ಬಗ್ಗೆ ನೌಫಾಲ್ ಮಾಹಿತಿ ನೀಡಿದ್ದ. ಅಂಗಡಿ ಬಳಿ ಬಂದು ಪ್ರವೀಣ್ ಇದ್ದಾನಾ ಇಲ್ವಾ ಅಂತಾ  ನೌಫಾಲ್ ನದ್ದು ಮಾಹಿತಿ ಕೊಡೊ ಕೆಲಸ ಮಾಡಿದ್ದಾನೆ. ನೌಫಾಲ್ ಸ್ಥಳೀಯನೇ ಆಗಿದ್ದರಿಂದ ಅಲ್ಲಿನ ಸಂಪೂರ್ಣ ಮಾಹಿತಿ ಸಿಗುತ್ತಿತ್ತು‌ ಎಂದು ಆರೋಪಿಸಲಾಗುತ್ತಿತ್ತು.

ಇದನ್ನೂ ಓದಿ: ಕೋಮುಗಲಭೆಯಲ್ಲಿ ಪಾಲ್ಗೊಂಡವರ ಆಸ್ತಿ ಮುಟ್ಟುಗೋಲಿಗೆ ಕ್ರಮ, ಪ್ರವೀಣ್ ಕೊಲೆಗಾರನ ಶೀಘ್ರ ಬಂಧನ: ಎಡಿಜಿಪಿ ಅಲೋಕ್​ಕುಮಾರ್

ಪ್ರವೀಣ್ ಹತ್ಯೆಗೆ ಮೂರು ಬಾರಿ ಸಂಚು:

ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗೊ ಮೊದಲು ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅದೇ ಬೈಕ್​ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ರಿಂದ ವಾಪಾಸ್ ಹೋಗಿದ್ದಾರೆ. ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಸಂಚು ರೂಪಿಸಿದ್ದು, ಅಂದು ಆ ಮೂವರ ತಂಡದಲ್ಲಿ ಅಬೀದ್ ಕೂಡ ಇದ್ದ ಎಂದು ಹೇಳಲಾಗಿದೆ. ವಿಚಾರಣೆ ವೇಳೆ ಪೊಲೀಸರಿಗೆ ಅಬೀದ್ ಹೇಳಿಕೆ‌ ನೀಡಿದ್ದು, ಅಂದು ಕೊಲೆ ಮಾಡಲು ಇಬ್ಬರ ಜೊತೆ ಅಬೀದ್ ಹೋಗಿದ್ದು, ಅಂಗಡಿ ಬಳಿ ಪ್ರವೀಣ್ ಇದ್ದಾನ ಇಲ್ವಾ ಅಂತಾ ನೋಡಲು  ನೌಫಾಲ್ ಹೋಗಿದ್ದ. ಅವತ್ತು ಪ್ರವೀಣ್ ಅಂಗಡಿಯಲ್ಲಿ ಇರಲಿಲ್ಲ‌. ಪ್ರವೀಣ್ ಅಂಗಡಿಯಲ್ಲಿ ಇಲ್ಲ ಅಂತಾ ನೌಫಾಲ್‌ ಮಾಹಿತಿ ನೀಡಿದ್ದ.

 

Published On - 8:02 am, Mon, 8 August 22