ಪುತ್ತೂರು: ತಂಗಿ ಲಿವರ್‌ ದಾನ ಮಾಡಿದರೂ ಉಳಿಯಲಿಲ್ಲ ಅಕ್ಕ; ಹೃದಯಾಘಾತದಿಂದ ಸಾವು

|

Updated on: Jan 25, 2024 | 12:58 PM

ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನನ್ನು ಉಳಿಸಿಕೊಳ್ಳಲು ತಂಗಿ ಲಿವರ್ ದಾನ ಮಾಡಿದ್ದು ದುರದೃಷ್ಟವಶಾತ್ ಅಕ್ಕನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಕ್ಕನನ್ನು ಉಳಿಸಿಕೊಳ್ಳುವ ತಂಗಿಯ ಪ್ರಯತ್ನ ವಿಫಲವಾಗಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ತಂಗಿಯ ಚಿಕಿತ್ಸೆ ಮುಂದುವರೆದಿದೆ.

ಪುತ್ತೂರು: ತಂಗಿ ಲಿವರ್‌ ದಾನ ಮಾಡಿದರೂ ಉಳಿಯಲಿಲ್ಲ ಅಕ್ಕ; ಹೃದಯಾಘಾತದಿಂದ ಸಾವು
Follow us on

ಪುತ್ತೂರು, ಜ.25: ಲಿವರ್ ವೈಫಲ್ಯದಿಂದ (Liver Damage) ಬಳಲುತ್ತಿದ್ದ ಅಕ್ಕನ ಪ್ರಾಣ ಕಾಪಾಡಲು ತಂಗಿ ತನ್ನ ಲಿವರ್ ದಾನ ಮಾಡಿದ್ದು ದುರದೃಷ್ಟವಶಾತ್ ಅಕ್ಕ ಹೃದಯಾಘಾತದಿಂದ (Heart Attack) ಪ್ರಾಣಬಿಟ್ಟಿದ್ದಾರೆ. ಅಕ್ಕನನ್ನು ಕಾಪಾಡಬೇಕೆನ್ನುವ ತಂಗಿಯ ಸಂಪೂರ್ಣ ಪ್ರಯತ್ನ ವಿಫಲವಾದ ಮನಕಲಕುವ ಘಟನೆ ನೆಹರು ನಗರದಲ್ಲಿ ನಡೆದಿದೆ. ಐಶ್ವರ್ಯ(29) ಮೃತ (Death) ಯುವತಿ.

ನೆಹರು ನಗರದ ನಿವಾಸಿ ದಿವಂಗತ ಆನಂದ ನಾಯ್ಕ ಅವರ ಹಿರಿಯ ಪುತ್ರಿ ಐಶ್ವರ್ಯ ಅವರು ಜಾಂಡೀಸ್‌ನಿಂದ ಬಳಲುತ್ತಿದ್ದರು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಐಶ್ವರ್ಯಾಗೆ ಲಿವರ್ ಡ್ಯಾಮೇಜ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಯಕೃತ್ತಿನ ಕಸಿ ಅಗತ್ಯ ಎಂದು ವೈದ್ಯರು ನಿರ್ಧರಿಸಿದರು.

ಐಶ್ವರ್ಯಾ ಅವರ ತಾಯಿ ಲಿವರ್ ದಾನ ಮಾಡಲು ಸಿದ್ಧರಿದ್ದರು, ಆದರೆ ಐಶ್ವರ್ಯಾ ಅವರ ತಂಗಿ ಅನುಷಾ ತನ್ನ ಸಹೋದರಿಯ ಜೀವ ಉಳಿಸಲು ತನ್ನ ಸ್ವಂತ ಲಿವರ್ ದಾನ ಮಾಡುವ ಧೈರ್ಯದ ನಿರ್ಧಾರವನ್ನು ತೆಗೆದುಕೊಂಡರು. ಕಸಿ ಪ್ರಕ್ರಿಯೆಗಾಗಿ ಇಬ್ಬರೂ ಸಹೋದರಿಯರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ, ಯಕೃತ್ತಿನ ಕಸಿ ಸಮಯದಲ್ಲಿ ಐಶ್ವರ್ಯಾ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟಿದ್ದಾರೆ.

ಲಿವರ್ ದಾನ ಪ್ರಕ್ರಿಯೆಗೆ ಒಳಗಾದ ಅನುಷಾ ಪ್ರಸ್ತುತ ಬೆಂಗಳೂರಿನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಐಶ್ವರ್ಯಾ ಅವರ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿತ್ತು. ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುವಂತೆ ಕುಟುಂಬಸ್ಥರು ಸಾಮಾಜಿಕ ಮಾಧ್ಯಮದ ಮೂಲಕ ಸಹಾಯವನ್ನು ಕೋರಿದ್ದರು. ಆದರೆ ತಂಗಿ ತಾಯಿಯನ್ನು ಬಿಟ್ಟು ಐಶ್ವರ್ಯಾ ಇಹಲೋಕ ತ್ಯಜಿಸಿದ್ದಾರೆ. ಅಕ್ಕನನ್ನು ಉಳಿಸುವ ತಂಗಿಯ ಯತ್ನ ವಿಫಲವಾಗಿದೆ.

ಇದನ್ನೂ ಓದಿ: ಹನಿಮೂನ್​ಗೆ ಬೀಚ್‌ ಸ್ವಚ್ಛ ಮಾಡಿದ್ದ ಬೈಂದೂರಿನ ದಂಪತಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

ಖೋಟಾ ನೋಟು ತಯಾರು ಮಾಡ್ತಿದ್ದವರ ಬಂಧನ

ಖೋಟಾ ನೋಟು ತಯಾರಿಸಿ ಚಲಾವಣೆ ಮಾಡ್ತಿದ್ದ 6 ಜನರನ್ನ ಬಂಧಿಸಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸರು, DCRB ಪೊಲೀಸರ ಕಾರ್ಯಾಚಣೆ ನಡೆಸಿದ್ದು, ಮೂಲದ ಕುಬೇರಪ್ಪ ತಳವಾರ್, ಹರೀಶ್ ಗೌಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಇಂಜಿನಿಯರ್ ಜೆ.ರುದ್ರೇಶ್, ಮೈಸೂರು ಮೂಲದ ಮನೋಜ್ ಗೌಡ, ಮಂಡ್ಯ ಮೂಲದ ಸಂದೀಪ್, ಚಿತ್ರದುರ್ಗ ಮೂಲದ ಕೃಷ್ಣ ನಾಯ್ಕನನ್ನು ಬಂಧಿಸಿದ್ದಾರೆ. ಒಟ್ಟು 7.70 ಲಕ್ಷ ಮೌಲ್ಯದ 500, 200 ಮುಖಬೆಲೆಯ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ