ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸದೆ ಕೋಟಿ ಕೋಟಿ ವಂಚನೆ! KFDC ಅಧಿಕಾರಿಗಳು ಶಾಮೀಲು?

ಮಂಗಳೂರು: ಹಿಂದಿನಿಂದಲೂ ವಿವಿಧ ರೀತಿಯ ಅವ್ಯವಹಾರಗಳಿಗೆ ಹೆಸರಾಗಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ವಂಚನಾ ಜಾಲವು ಇದೀಗ ಸುದ್ದಿಯಾಗಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದಲ್ಲಿ 129 ಹೆಕ್ಟರ್ ಪ್ರದೇಶದಲ್ಲಿರುವ ರಬ್ಬರ್ ನಿಗಮದ ತೋಟದಲ್ಲಿ ಸುಮಾರು 27 ಬ್ಲಾಕ್​ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಸಿಂಪಡಿಸದೆ ನಿಗಮಕ್ಕೆ ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಔಷಧಿ ಸಿಂಪಡಣೆ ಹಾಗೂ ಇತರ ಕಾಮಗಾರಿಗಳಲ್ಲಿ ನಿಗಮದ ಅಧಿಕಾರಿಗಳಿಂದ ವಂಚನೆ ನಡೆಯುತ್ತಿರುವ ಬಗ್ಗೆ ಆರೋಪಗಳು ವ್ಯಕ್ತವಾಗುತ್ತಿದೆ. […]

ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸದೆ ಕೋಟಿ ಕೋಟಿ ವಂಚನೆ! KFDC ಅಧಿಕಾರಿಗಳು ಶಾಮೀಲು?
Follow us
ಸಾಧು ಶ್ರೀನಾಥ್​
| Updated By:

Updated on: Jun 02, 2020 | 7:26 AM

ಮಂಗಳೂರು: ಹಿಂದಿನಿಂದಲೂ ವಿವಿಧ ರೀತಿಯ ಅವ್ಯವಹಾರಗಳಿಗೆ ಹೆಸರಾಗಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ವಂಚನಾ ಜಾಲವು ಇದೀಗ ಸುದ್ದಿಯಾಗಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದಲ್ಲಿ 129 ಹೆಕ್ಟರ್ ಪ್ರದೇಶದಲ್ಲಿರುವ ರಬ್ಬರ್ ನಿಗಮದ ತೋಟದಲ್ಲಿ ಸುಮಾರು 27 ಬ್ಲಾಕ್​ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಸಿಂಪಡಿಸದೆ ನಿಗಮಕ್ಕೆ ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಔಷಧಿ ಸಿಂಪಡಣೆ ಹಾಗೂ ಇತರ ಕಾಮಗಾರಿಗಳಲ್ಲಿ ನಿಗಮದ ಅಧಿಕಾರಿಗಳಿಂದ ವಂಚನೆ ನಡೆಯುತ್ತಿರುವ ಬಗ್ಗೆ ಆರೋಪಗಳು ವ್ಯಕ್ತವಾಗುತ್ತಿದೆ. ಕೋಟಿಗಟ್ಟಲೆ ಹಣದ ಕಾಮಗಾರಿ ಇದ್ದರೂ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಒಳ ಒಪ್ಪಂದದಿಂದಾಗಿ ನಿಗಮಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ಎಂಬವರು ಹಾಗೂ ಇಲ್ಲಿನ ಇತರ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸುವ ಕಾಮಗಾರಿಯನ್ನು ಕೇರಳದ ಬಿಜು ಎಂಬವರಿಗೆ ನೀಡಿದ್ದು ಇವರು ರಬ್ಬರ್ ಬ್ಲಾಕ್​ಗಳಲ್ಲಿ ಹಲವು ಕಡೆಗಳಲ್ಲಿ ಔಷಧಿ ಸಿಂಪಡಿಸದೆ ತೆರಳಿದ್ದಾರೆ. ಇದರಲ್ಲಿ ಕೆಎಫ್​ಡಿಸಿಯ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳು ನುಣುಚಿಕೊಳ್ಳಲು ಯತ್ನ: ಔಷಧಿ ಸಿಂಪಡಣೆ ಮಾಡದೆ ವಂಚನೆ ಮಾಡಿರುವ ಸುದ್ದಿ ಸಾರ್ವಜನಿಕವಾಗಿ ಬಹಿರಂಗವಾಗುತ್ತಿದ್ದಂತೆ ಪ್ರಭಾರ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ನೇತೃತ್ವದ ಅಧಿಕಾರಿಗಳ ತಂಡ ತಮ್ಮ ತಪ್ಪನ್ನು ತೋಟದ ಮೇಸ್ತ್ರಿಗಳ ತಲೆಗೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ.

ಸರಿಯಾದ ರೀತಿಯಲ್ಲಿ ಔಷಧಿ ಸಿಂಪಡಿಸದಿದ್ದರೆ ಮರದ ಎಲೆಗಳು ಉದುರಿ ರಬ್ಬರ್ ಹಾಲು ಕಡಿಮೆಯಾಗುತ್ತದೆ. ಒಂದು ವೇಳೆ ಎಲೆ ಉದುರಿ ರಬ್ಬರ್ ಹಾಲು ಕಡಿಮೆಯಾದರೆ ಅದರ ನಷ್ಟಕ್ಕೆ ಕಾರ್ಮಿಕರನ್ನು ಹೊಣೆಗಾರರನ್ನಾಗಿ ಮಾಡುವ ಅಧಿಕಾರಿಗಳು ತಮ್ಮ ಅವ್ಯವಹಾರವನ್ನು ಈ ಹಿಂದಿನಿಂದಲೂ ಮುಚ್ಚಿಡುತ್ತಲೇ ಬಂದಿದ್ದಾರೆ. ಇಲ್ಲಿ ಕೇವಲ ರಬ್ಬರ್ ಮಾಫಿಯಾ ಅಷ್ಟೆ ಅಲ್ಲ, ಬದಲಾಗಿ ಸಮೀಪದ ನದಿಯಿಂದ ಅಕ್ರಮ ಮರಳು ಸಾಗಾಟವು ನಡೆಯುತ್ತಿದೆ.

ಇನ್ನು ಔಷಧ ಸಿಂಪಡಣೆ ಅವ್ಯವಹಾರ ಬಗ್ಗೆ ಕೆಎಫ್​ಡಿಸಿ ಅಧಿಕಾರಿ ಮಸ್ತಾನ್ ಅವರನ್ನು ಮಾತನಾಡಿದ್ದು, ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದನ್ನು ತಡೆಹಿಡಿಯಲಾಗಿದೆ ಎಂದಿದ್ದಾರೆ. ಅವ್ಯವಹಾರ ಮಾಡಿ ಬಿಲ್ ತಡೆಹಿಡಿದು ಪ್ರಕರಣವನ್ನು ಇಲ್ಲಿಗೆ ಮುಚ್ಚಿಹಾಕುವಂತಾಗಬಾರದು ಎಂಬುದು ಸ್ಥಳೀಯ ಕಾರ್ಮಿಕರ ಮತ್ತು ಸಾರ್ವಜನಿಕರ ಅಭಿಪ್ರಾಯ.

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ