ಮಂಗಳೂರು: ಹಿಜಾಬ್ (Hijab) ವಿವಾದದ ಬೆನ್ನಲ್ಲೇ ಮತ್ತೆ ಮಂಗಳೂರಿನ ಹಂಪನಕಟ್ಟೆ ಬಳಿಯಿರುವ ಮಂಗಳೂರು ವಿವಿ (Mangalore) ಕಾಲೇಜು ಮತ್ತೆ ಸುದ್ದಿಯಾಗಿದೆ. ವಿವಿಯ ಕಾಲೇಜಿನ್ ಕ್ಲಾಸ್ ರೂಮ್ನಲ್ಲಿ ಸಾವರ್ಕರ್ (Savarkar) ಫೋಟೋ ಅಳವಡಿಸಲಾಗಿತ್ತು. ಈ ವಿಷಯವನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದ ನಂತರ ಪ್ರಾಂಶುಪಾಲರು ಸಾವರ್ಕರ್ ಫೋಟೋವನ್ನು ತೆರವುಗೊಳಿಸಿದ್ದಾರೆ. ಕ್ಲಾಸ್ ರೂಮ್ನಲ್ಲಿ ಸಾವರ್ಕರ್ ಫೋಟೋ ಇರುವ ವಿಡಿಯೋ ವೈರಲ್ ಆಗಿದೆ. ಕಾಲೇಜಿನ ವಾಣಿಜ್ಯ ವಿಭಾಗದ ಕೆಲವು ವಿದ್ಯಾರ್ಥಿಗಳಿಂದ ಈ ಕೃತ್ಯ ಎಸಗಲಾಗಿದೆ. ಈ ಸಂಬಂಧ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ.
ಇದನ್ನು ಓದಿ: ಮಂಗಳೂರಿನಲ್ಲಿ ಕಾಲೇಜಿಗೆ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲೆ
ಮಂಗಳೂರು ವಿವಿಯಲ್ಲಿ ನಡೆದ ಹಿಜಾಬ್ ವಿವಾದ
ಮಂಗಳೂರಿನ ಹಂಪನಕಟ್ಟೆ ಬಳಿಯಿರುವ ವಿವಿ ಕಾಲೇಜಿಗೆ (ಮೇ28) ರಂದು ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದರು. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದ್ದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದರು.
ಇದನ್ನು ಓದಿ: ಮಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿ ಅಮಾನತು
ಇಷ್ಟಾದರು ಮಾತು ಕೇಳದ ವಿದ್ಯಾರ್ಥಿನಿಯರು (ಜೂನ್ 4) ರಂದು ಮತ್ತೆ ಹಿಜಾಬ್ ಧರಿಸಿ ಬಂದಿದ್ದರು. ಹೀಗಾಗಿ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದರು. ಕಾಲೇಜಿನ ಶಿಸ್ತು ಉಲ್ಲಂಘಿಸಿ, ಘನತೆಗೆ ಧಕ್ಕೆ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ. ಗೌಸಿಯಾ ಸೇರಿದಂತೆ ಕೆಲ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಬಳಿಕವೂ ನಿಯಮ ಮೀರಿದರೆ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಇದಾದ ನಂತರ ವಿದ್ಯಾರ್ಥಿನಿಯರಿಗೆ (ಜೂನ್ 8) ಇಂದಿನವರೆಗು ಅಮಾನತು ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 pm, Wed, 8 June 22