ಮಂಗಳೂರಿನಲ್ಲಿ ಬೆಳಕಿಗೆ ಬಂದ ತ್ರಿವಳಿ ತಲಾಖ್ ಕೇಸ್ ಮದ್ವೆಯಾದ ಆರೇ ತಿಂಗಳಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಗೆ ತಲಾಖ್

|

Updated on: May 30, 2023 | 12:13 PM

ತ್ರಿವಳಿ ತಲಾಖ್​ ನಿಷೇಧಿಸಲ್ಪಟ್ಟಿದ್ದರೂ. ಇದೀಗ ಮತ್ತೆ ಮಂಗಳೂರಿನಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹೌದು ಮದುವೆಯಾದ ಆರೇ ತಿಂಗಳಲ್ಲಿ ಪತ್ನಿಗೆ ಮಾರಣಾಂತಕ ಹಲ್ಲೆ ನಡೆಸಿ ತಲಾಖ್ ನೀಡಿ ಮನೆಯಿಂದ ಹೊರದಬ್ಬಿದ್ದಾನೆ.

ಮಂಗಳೂರಿನಲ್ಲಿ ಬೆಳಕಿಗೆ ಬಂದ ತ್ರಿವಳಿ ತಲಾಖ್ ಕೇಸ್ ಮದ್ವೆಯಾದ ಆರೇ ತಿಂಗಳಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಗೆ ತಲಾಖ್
ನೊಂದ ಮಹಿಳೆ, ಪತಿ
Follow us on

ಮಂಗಳೂರು: ತ್ರಿವಳಿ ತಲಾಖ್​(Triple Talaq) ನಿಷೇಧಿಸಲ್ಪಟ್ಟಿದ್ದರೂ. ಇದೀಗ ಮತ್ತೆ ಮಂಗಳೂರಿ(Mangalore)ನಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹೌದು ಮದುವೆಯಾದ ಆರೇ ತಿಂಗಳಲ್ಲಿ ಪತ್ನಿಗೆ ಮಾರಣಾಂತಕ ಹಲ್ಲೆ ನಡೆಸಿ ತಲಾಖ್ ನೀಡಿ ಮನೆಯಿಂದ ಹೊರದಬ್ಬಿದ್ದಾನೆ. ಹಲ್ಲೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಮಹಿಳೆ ಶಬಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ತಿಂಗಳ ಹಿಂದೆ ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್​ ಶಬಾನಾ ಎಂಬವರನ್ನು ಮದುವೆಯಾಗಿದ್ದ. ಇದೀಗ ಆಕೆಯ ಮೇಲೆ ಹಲ್ಲೆ ನಡೆಸಿ ತಲಾಖ್ ಕೊಟ್ಟು, ಮನೆಯಿಂದ ಹೊರದಬ್ಬಿದ್ದಾನೆ.

ತ್ರಿವಳಿ ತಲಾಖ್ ನಿಷೇಧವಾದರೂ ಮಂಗಳೂರಿನಲ್ಲಿ ಬೆಳಕಿಗೆ

ಇನ್ನು ತಲಾಖ್ ನೀಡಿದ ಗಂಡ ಮಹಮ್ಮದ್ ಹುಸೇನ್​ ಹಣ್ಣು ತರಕಾರಿ ವ್ಯಾಪಾರಿಯಾಗಿದ್ದಾನೆ. ತ್ರಿವಳಿ ತಲಾಖ್ ನಿಷೇಧವಾದರೂ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದೀಗ ಗಂಡನ ಅನ್ಯಾಯಕ್ಕೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೌದು ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇನ್ನು ಪತಿರಾಯ ಶಬಾನಾ ಎಂಬುವವರನ್ನು ಎರಡನೇ ಮದುವೆಯಾಗಿದ್ದ. ಮೊದಲ ಮದುವೆಯಿಂದ 2 ಮಕ್ಕಳನ್ನು ಹೊಂದಿದ್ದ ಹುಸೇನ್​ ಆಕೆಯಿಂದ ಹಣ ಪೀಕಿಸಿ ಬಳಿಕ ತಲಾಖ್​ ನೀಡಿದ್ದ. ನಂತರ ಶಬಾನಾ ಅವರನ್ನ ಮದುವೆಯಾಗಿ 8 ದಿನದಲ್ಲಿ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಪೀಕಿಸಿದ್ದ.

ಇದನ್ನೂ ಓದಿ: Viral News: ತ್ರಿವಳಿ ತಲಾಖ್​ನಿಂದ ಬೇಸತ್ತು ಗಂಡನ ಹಿಂದೂ ಗೆಳೆಯನನ್ನೇ ಮದುವೆಯಾದ ಮಹಿಳೆ

ಅಳಲು ತೋಡಿಕೊಂಡ ನೊಂದ ಮಹಿಳೆ

ಇನ್ನು ಪತ್ನಿ ಗರ್ಭಿಣಿಯಾದ ಬಳಿಕ ಒತ್ತಾಯ ಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿದ್ದ ಪಾಪಿ ಪತಿರಾಯ. ಇದೀಗ ಹಣಕ್ಕಾಗಿ ಪೀಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ತಲಾಖ್​ ನೀಡಿದ್ದಾನೆ. ಈ ಹಿಂದೆ ಇದ್ದ ಪತ್ನಿಗೂ ಕೂಡ ಹಣಕ್ಕಾಗಿ ಪೀಡಿಸಿ ಕೊನೆಗೆ ಹುಸೇನ್ ತಲಾಖ್ ನೀಡಿದ್ದ. ಇದೀಗ ಎರಡನೇ ಪತ್ನಿ ಶಬಾನಾಗೂ ತಲಾಖ್ ನೀಡಿ ಎರಡು ಮಕ್ಕಳೊಂದಿಗೆ ಅವರನ್ನು ಮನೆಯಿಂದ ಹೊರದಬ್ಬಿದ್ದಾನೆ. ನೊಂದ ಮಹಿಳೆ ನನಗೆ ನ್ಯಾಯ ಕೊಡಿಸಿ, ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದೆಂದು ಅಳಲು ತೋಡಿಕೊಳ್ಳುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ತ್ರಿವಳಿ ತಲಾಖ್​ ಉಲ್ಲಂಘನೆಗೆ ಶಿಕ್ಷೆ ಏನು?

ಈ ಕಾಯಿದೆ ಅಡಿಯಲ್ಲಿ ತ್ರಿವಳಿ ತಲಾಕ್‌ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಾತಿನ ಮೂಲಕ, ಬರಹದ ಮೂಲಕ, ಮೆಸೇಜ್‌, ಇ-ಸಂದೇಶಗಳ ಮೂಲಕ ತಲಾಖ್ ನೀಡಲಾಗುತ್ತಿತ್ತು. ಇನ್ನು ಈ ನಿಯಮ ಉಲ್ಲಂಘಿಸಿದರೆ, ಗರಿಷ್ಠ 3 ವರ್ಷದವರೆಗೆ ಜೈಲು ಹಾಗೂ ದಂಡವಿದೆ. ಅಲ್ಲದೆ ತ್ರಿವಳಿ ತಲಾಕ್‌ ಸಂತ್ರಸ್ತೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ