ಮುಖ್ಯಮಂತ್ರಿ ಬದಲಾವಣೆ ಬಗ್ಗೆ ದಲಿತ ನಾಯಕರ ನಡುವೆ ಮಾತುಕತೆ ನಡೆಯಲಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾವಣೆ ಮಾತು ಬಂದಾಗಲೆಲ್ಲ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗುತ್ತಿರೋದು ಯಾಕೆ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್, ಈ ಪ್ರಶ್ನೆಯನ್ನು ಅವರನ್ನೇ ಕೇಳೋದು ಒಳಿತು ಎಂದು ಹೇಳಿದರು. ತಮ್ಮ ಮೈಸೂರು ಭೇಟಿಯ ಕಾರಣವನ್ನೂ ಅವರು ವಿವರಿಸಿದರು.
ಮೈಸೂರು: ನಿನ್ನೆ ರಾತ್ರಿ ರಾಜ್ಯ ಕಾಂಗ್ರೆಸ್ ದಲಿತ ನಾಯಕರು ಸಚಿವ ಹೆಚ್ ಸಿ ಮಹದೇವಪ್ಪನವರ ಮನೆಯಲ್ಲಿ ರಾತ್ರಿಯೂಟಕ್ಕೆ ಸೇರಿದ ಸುದ್ದಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಒಂದು ಸಿದ್ಧಾಂತಕ್ಕೆ ಒಗ್ಗಿಕೊಂಡಿರುವ ದಲಿತ ನಾಯಕರು ಆಗಾಗ್ಗೆ ಸೇರುತ್ತಿರುತ್ತೇವೆ, ಅದರಲ್ಲಿ ವಿಶೇಷವೇನೂ ಇಲ್ಲ, ಸಿದ್ದರಾಮಯ್ಯನವರನ್ನು ಬದಲಾಯಿಸುವ ಬಗ್ಗೆ ಮಾತುಕತೆಯೇನೂ ನಡೆದಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಾಯ್ ಪೇ ಚರ್ಚಾದ ಹಾಗೆ ಕಾಫೀ ಹೀರುತ್ತಾ ನಾವು ಚರ್ಚಿಸಿದರೆ ತಪ್ಪೇನು? ಜಿ ಪರಮೇಶ್ವರ್
Latest Videos