ಅಪರೂಪದ ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆ ನೀಡಿ ಬಾಣಂತಿಗೆ ಜೀವದಾನ ಮಾಡಿದ ದಾವಣಗೆರೆ ವೈದ್ಯರು

| Updated By: ಸಾಧು ಶ್ರೀನಾಥ್​

Updated on: Mar 03, 2021 | 5:30 PM

ಸಾವನ್ನು ಗೆದ್ದು ಬಂದಿರುವ ಮಹಿಳೆಯ ಹೆಸರು ಸಿದ್ದಮ್ಮ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕನಕಟ್ಟೆ ಗ್ರಾಮದ ಮಹಿಳೆ. ಈಕೆಗೆ 18 ವರ್ಷಕ್ಕೆ ಮದುವೆಯಾಗಿದ್ದು, ಮೊದಲ ಹೆರಿಗೆಯನ್ನು ಹೊಳಲ್ಕೆರೆ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ.

ಅಪರೂಪದ ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆ ನೀಡಿ ಬಾಣಂತಿಗೆ ಜೀವದಾನ ಮಾಡಿದ ದಾವಣಗೆರೆ ವೈದ್ಯರು
ವೈದ್ಯ ಮೋಹನ್ ಕುಮಾರ್
Follow us on

ದಾವಣಗೆರೆ: ಆಸ್ಪತ್ರೆಗಳು ಎಂದರೆ ಸುಲಿಗೆಗೆ ಇನ್ನೊಂದು ಹೆಸರು ಎನ್ನುವಂತೆ ವೈದ್ಯಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ಧನದಾಹ ಎದ್ದು ಕಾಣುತ್ತದೆ. ಸೇವೆ ಹೆಸರಿನಲ್ಲಿ ಕುಟುಂಬಗಳ ಸರ್ವನಾಶ ಮಾಡುವ ಕೆಲ ಆಸ್ಪತ್ರೆಗಳೂ ಇವೆ. ಆದರೆ ದಾವಣಗೆರೆಯ ವೈದ್ಯರೊಬ್ಬರು ಮಾನವೀಯತೆಗೆ ಇನ್ನೊಂದು ಹೆಸರು ಎನ್ನುವಂತಿದ್ದಾರೆ. ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಬಡ ಕುಟುಂಬದ ಮಹಿಳೆಯ ಜೀವ ಉಳಿಸಿದ್ದಾರೆ.

ಸಾವನ್ನು ಗೆದ್ದು ಬಂದಿರುವ ಮಹಿಳೆಯ ಹೆಸರು ಸಿದ್ದಮ್ಮ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕನಕಟ್ಟೆ ಗ್ರಾಮದ ಮಹಿಳೆ. ಈಕೆಗೆ 18 ವರ್ಷಕ್ಕೆ ಮದುವೆಯಾಗಿದ್ದು, ಮೊದಲ ಹೆರಿಗೆಯನ್ನು ಹೊಳಲ್ಕೆರೆ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ.

ಆದರೆ ಶಸ್ತ್ರಚಿಕಿತ್ಸೆ ಮಾಡುವಾಗ ಅಲ್ಲಿನ ವೈದ್ಯರು ಎಡವಟ್ಟು ಮಾಡಿದ್ದು, ಅ ಮಹಿಳೆಯ ಮೂತ್ರಕೋಶದ ನರವನ್ನು ಕತ್ತರಿಸಿದ್ದರು ಎನ್ನಲಾಗಿದೆ. ಇದರಿಂದ ಅಧಿಕ ರಕ್ತದೊತ್ತಡ ಹಾಗೂ ಮೂತ್ರಕೋಶದ ವೈಫಲ್ಯವಾಗಿತ್ತು. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಈಕೆ ಉಳಿಯುವುದು ಕಷ್ಟ. ಇನ್ನು 24 ಗಂಟೆಗಳು ಮಾತ್ರ ಕಾಲಾವಕಾಶವಿದೆ ಎಂದು ಹೇಳಿದ್ದರು.

ಕಡು ಬಡವರಾದ ಸಿದ್ದಮ್ಮನ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿ ಇದ್ದರು. ಆಗಿದ್ದು ಆಗಲಿ ಎಂದು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಕರೆತಂದರು. ಅಲ್ಲದೆ ತಾಯಿಯನ್ನು ಬಿಟ್ಟು ಹಸುಗೂಸು ಬೇರೆ ಕಡೆ ಇದ್ದು, ನರಕವನ್ನು ಅನುಭವಿಸಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿಯಾಗಿ ಕಷ್ಟ ಅನುಭವಿಸಿದ್ದ ಮಹಿಳೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ.ಮೋಹನ್ ಆರ್ ಮತ್ತು ಅವರ ತಂಡ ಜೀವದಾನ ಮಾಡಿದ್ದಾರೆ. ಮಾತ್ರವಲ್ಲದೇ ವೈದ್ಯರು ಹಣವನ್ನು ಪಡೆಯದೇ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ.

ಸಾವನ್ನು ಗೆದ್ದು ಬಂದ ಸಿದ್ದಮ್ಮ

ಅಪರೂಪದ ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆ (plasmapheresis Treatment )
ವೈದ್ಯರಾದ ಮೋಹನ್ ಹಾಗೂ ಅವರ ತಂಡಕ್ಕೆ ಈ ಕೇಸ್ ಒಂದು ಸವಾಲಾಗಿ ಪರಿಣಮಿಸಿದ್ದು, ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಯನ್ನು ಪ್ಲಾಸ್ಮಾ ಫೆರೆಸಿಸ್ ಎಂಬ ಅಪರೂಪದ ಚಿಕಿತ್ಸೆಯ ಮೂಲಕ ಜೀವ ಉಳಿಸಿದ್ದಾರೆ. ವಿಪರೀತ ರಕ್ತದೊತ್ತಡ ಸಹಿತ ಹಲವು ಬದಲಾವಣೆಗಳು ಹೆರಿಗೆ ಸಂದರ್ಭದಲ್ಲಿ ಉಂಟಾಗಿತ್ತು.

ಇದರಿಂದ ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿದ್ದರಿಂದ ಮಹಿಳೆ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ವೈದ್ಯರು ರಕ್ತದಲ್ಲಿರುವ ಪ್ಲಾಸ್ಮಾವನ್ನೇ ತೆಗೆದು ಬೇರೆ ಪ್ಲಾಸ್ಮಾ ನೀಡುವ ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆಯನ್ನು ನೀಡಲಾಯಿತು. ಈ ಚಿಕಿತ್ಸೆಯನ್ನು ಈ ಮಹಿಳೆಗೆ ಐದು ಬಾರಿ ಮಾಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗಿದ್ದಾರೆ ಎಂದು ಮೂತ್ರಪಿಂಡ ತಜ್ಞರಾದ ಡಾ.ಮೋಹನ್ ಆರ್ ತಿಳಿಸಿದ್ದಾರೆ.

ತನ್ನ ಕುಟುಂಬದೊಂದಿಗೆ ಸಿದ್ದಮ್ಮ

ಇದನ್ನೂ ಓದಿ

ಹಾವೇರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ: ಜನರ ಪರದಾಟ

ಕೊರೊನಾ ಹಿಮ್ಮೆಟ್ಟಿಸುವ ಪ್ರಯೋಗ ಮೊದಲು ಶುರುಮಾಡಿದ್ದೇ ಭಾರತೀಯ ವೈದ್ಯರು