ದಾವಣಗೆರೆ, ಮೇ 25: ಚನ್ನಗಿರಿ (Channagiri) ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣಕ್ಕೆ (Lockup Death Case) ಸಂಬಂಧಿಸಿದ್ದಂತೆ ಮೃತ ಆದಿಲ್ ಅಪ್ಪ ಖಲೀಮುಲ್ಲಾ ಇದೀಗ ಉಲ್ಟಾ ಹೊಡೆದಿದ್ದಾರೆ. ಬೆಳಗ್ಗೆ ಲೋ ಬಿಪಿಯಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಇದು ಲಾಕಪ್ ಡೆತ್ ಡೆತ್ ಆಗಿದೆ ಎಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ನನಗೆ ಗಾಬರಿಯಿಂದ ಏನೇನೋ ಹೇಳಿದೆ ಎಂದಿದ್ದಾರೆ.
ನನ್ನ ಮಗ ಮಟ್ಕಾ ಆಡುತ್ತಿರಲಿಲ್ಲ. ಪೊಲೀಸರಿಗೆ ಕಮಿಷನ್ ಕೂಡ ಕೊಡುತ್ತಿರಲಿಲ್ಲ. ನನ್ನ ಸೊಸೆ ನೋವಿನಿಂದ ಏನೇನೋ ಹೇಳಿಕೆ ಕೊಡುತ್ತಿದ್ದಾಳೆ. ಕಾರ್ಪೆಂಟರ್ ಕೆಲಸ ಮಾಡಿಕೊಂಡು 2 ಸಾವಿರ ರೂ. ಹಣ ತರುತ್ತಿದ್ದ. ಅಂತವನನ್ನು ಪೊಲೀಸರು ಕರೆದುಕೊಂಡು ಹೋಗಿ ಸಾಯಿಸಿದ್ದಾರೆ ಎಂದು ಆದಿಲ್ ತಂದೆ ಖಲೀಂಮುಲ್ಲಾ ಹೇಳಿದ್ದಾರೆ. ಆದಿಲ್ ಸಾವಿಗೆ ಪೊಲೀಸರೇ ಕಾರಣ, ಆತನಿಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ ಅಂತಾ ಆದಿಲ್ ಚಿಕ್ಕಪ್ಪ ಮಹಬೂಬ್ ಅಲಿ ಆರೋಪಿಸಿದ್ದರು.
ಆದಿಲ್ ಪತ್ನಿ ಹೀನಾ ಖೈಸರ ಪ್ರತಿಕ್ರಿಯಿಸಿದ್ದು, ನನ್ನಪತಿಯನ್ನು ಪೊಲೀಸರೇ ಕರೆದುಕೊಂಡು ಹೋಗಿ ಹೊಡೆದು ಹಾಕಿದ್ದಾರೆ. ನನಗೆ ಮೂರು ಜನ ಸಣ್ಣ ಮಕ್ಳಳಿದ್ದಾರೆ ಹೀಗೆ ಬದುಕಲಿ. ಈ ಸಣ್ಣ ಮಕ್ಕಳನ್ನಇಟ್ಟುಕೊಂಡು ಹೇಗೆ ಜೀವನ ನಡೆಸಲಿ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪತಿಯ ಶವದ ಮುಂದೆ ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ: ಚನ್ನಗಿರಿ ಲಾಕಪ್ ಡೆತ್ ಕೇಸ್: ಆದಿಲ್ ಅಪ್ಪ, ಚಿಕಪ್ಪ ದ್ವಂದ್ವ ಹೇಳಿಕೆ
ನಿನ್ನೆ ಸಂಜೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸರು, ಆದಿಲ್ ಎಂಬಾತನನ್ನ ವಶಕ್ಕೆ ಪಡೆದಿದ್ದರು. ಚನ್ನಗಿರಿಯ ಟಿಪ್ಪು ನಗರ ನಿವಾಸಿ ಯಾಗಿದ್ದ ಆದಿಲ್, ಮಟ್ಕಾ ಆಡಿಸುತ್ತಿದ್ದ ಆರೋಪ ಎದುರಿಸುತ್ತಿದ್ದ. ಹೀಗಾಗಿ ಸಂಜೆ ಠಾಣೆಗೆ ಕರೆತಂದ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಆದರೆ ಠಾಣೆಗೆ ಬರ್ತಿದ್ದಂತೆ ಬಿಪಿ ಲೋ ಆಗಿದೆಯಂತೆ. ಕೂಡಲೇ ಆತನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೇ ಆದಿಲ್ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ.
ಸಾವಿನ ವಿಷಯ ಗೊತ್ತಾಗುತ್ತಿದ್ದಂತೆ ರೊಚ್ಚಿಗೆದ್ದ ಆತನ ಕಡೆಯವರು ಧುತ್ತನೇ ಠಾಣೆಗೆ ನುಗ್ಗಿ ಬಂದಿದ್ದಾರೆ. ಕೈಗೆ ಸಿಕ್ಕ ಕಲ್ಲೆಸೆದು ಇಡೀ ಠಾಣೆಯನ್ನ ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ, 11 ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂ
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ಆದಿಲ್ ಠಾಣೆಯಲ್ಲಿ ಆರೇಳು ನಿಮಿಷ ಕೂಡ ಇರಲಿಲ್ಲ. ಆತ ಹೇಗೆ ಸತ್ತ ಅಂತಾ ಆತನ ಕುಟುಂಬಸ್ಥರಿಗೂ ನಾವು ಕನ್ವಿನ್ಸ್ ಮಾಡಿದ್ದೇವೆ. ಆದರೆ ಅಲ್ಲಿದ್ದ ಬೇರೆ ಗುಂಪೊಂದು ಠಾಣೆ ಮೇಲೆ ದಾಳಿ ಮಾಡಿದೆ ಅಂತಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.