ನ್ಯಾಯಾಲಯದಲ್ಲಿ ಮತ್ತೆ ಜಂಟಿ ಜೀವನಕ್ಕೆ ನಿರ್ಧರಿಸಿದ 12 ಜೋಡಿಗಳು; ಕೆಲ ಹೊತ್ತು ಮದ್ವೆ ಮನೆಯಾದ ದಾವಣಗೆರೆ ಕೌಟುಂಬಿಕ‌ ಕೋರ್ಟ್​ ಅಂಗಳ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 09, 2023 | 7:14 PM

ಅದೊಂದು ರೀತಿಯಲ್ಲಿ ಸಾಮೂಹಿಕ ವಿವಾಹದ ಸಂಭ್ರಮ ಮನೆ ಮಾಡಿತ್ತು. ಬಹುತೇಕರು ಕಪ್ಪು ಕೋಟ್ ಹಾಕಿಕೊಂಡು ಬಂದು ಶುಭ ಹಾರೈಸುತ್ತಿದ್ದರು. ನ್ಯಾಯ ನೀಡುವ ನ್ಯಾಯಮೂರ್ತಿಗಳು ಸಹ ಪಕ್ಕದಲ್ಲಿಯೇ ನಿಂತು ಮುಂದಿನ ಜೀವನ ಸಮೃದ್ಧಿಯಿಂದ ಸಾಗಲಿ ಎನ್ನುತ್ತಿದ್ದರೆ, ಕೆಲವರು ಭಾವುಕರಾಗಿದ್ದರು. ಹತ್ತಾರು ವರ್ಷ ಕಿತ್ತಾಡಿದ ಜೀವಗಳು ಒಂದಾದ ಅಪರೂಪದ ಗಳಿಗೆ ಇಲ್ಲಿದೆ.

ನ್ಯಾಯಾಲಯದಲ್ಲಿ ಮತ್ತೆ ಜಂಟಿ ಜೀವನಕ್ಕೆ ನಿರ್ಧರಿಸಿದ 12 ಜೋಡಿಗಳು; ಕೆಲ ಹೊತ್ತು ಮದ್ವೆ ಮನೆಯಾದ ದಾವಣಗೆರೆ ಕೌಟುಂಬಿಕ‌ ಕೋರ್ಟ್​ ಅಂಗಳ
ದಾವಣಗೆರೆ ಕೌಟುಂಬಿಕ ನ್ಯಾಯಾಲಯ
Follow us on

ದಾವಣಗೆರೆ, ಸೆ.09: ಇವರೆಲ್ಲ ಸಣ್ಣ ಮಕ್ಕಳನ್ನು ಕರೆದುಕೊಂಡು ಕೋರ್ಟ್​ ಆವರಣದಲ್ಲಿ ಸುತ್ತಾಡುವುದು ನೋಡಿದವರಿಗೆ, ಮನಸ್ಸಿಗೆ ಚುಚ್ಚುವಂತಹ ದೃಶ್ಯಗಳು. ಸಣ್ಣ ಮಕ್ಕಳಿದ್ದಾರೆ. ಪತಿ ಕೈ ಬಿಟ್ಟಿದ್ದಾನೆ. ಪಾಪ ಆ ತಾಯಿ ಎನು ಮಾಡಬೇಕು ಎಂಬ ಮಾತುಗಳು ಮಾಮೂಲು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು, ದಾವಣಗೆರೆ (Davanagere) ನಗರದ ಕೌಟುಂಬಿಕ ನ್ಯಾಯಾಲಯ (Family Court) ದ ಆವರಣದಲ್ಲಿ. ಹೌದು, ಒಂದು ರೀತಿಯಲ್ಲಿ ಸಾಮೂಹಿಕ ವಿವಾಹದ ಕಲ್ಯಾಣ ಮಂಟಪವಾಗಿತ್ತು. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿ ರಾಜೇಶ್ವರ ಎನ್ ಹೆಗಡೆ ಅವರೇ ಒಂದು ರೀತಿಯಲ್ಲಿ ಪ್ರಧಾನ ಪುರೋಹಿತರಾಗಿ ವಧು-ವರರಿಗೆ ಶುಭ ಹಾರೈಸುತ್ತಿದ್ದರು.

ಹೌದು, ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 12 ಜೋಡಿಗಳು ಮತ್ತೆ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರೆಲ್ಲ ಹತ್ತಾರು ವರ್ಷಗಳಿಂದ ಪತಿ, ಪತ್ನಿ ಮನಸ್ಥಾಪ ಮಾಡಿಕೊಂಡು ಪ್ರತ್ಯೇಕ ಆಗಿದ್ದರು. ಪರಸ್ಪರ ಯುದ್ಧಕ್ಕೆ ನಿಂತಿಂತೆ ವಕೀಲರ ಮೂಲಕ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತಿದ್ದರು. ಇಂದು(ಸೆ.09) ಇವರೆಲ್ಲ ಪತಿ ಪತ್ನಿಯ ನಡುವಿನ ಜಗಳ ಬಿಟ್ಟು ಮತ್ತೆ ಒಂದಾಗಿದ್ದಾರೆ. ಇದಕ್ಕೆ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯ ಮೂರ್ತಿಗಳಾದ ರಾಜೇಶ್ವರಿ ಎನ್ ಹೆಗಡೆ ಅವರು ಕಾರಣರಾಗಿದ್ದಾರೆ.

ಇದನ್ನೂ ಓದಿ:ಮದುವೆಯಾದ ಒಂದು ವರ್ಷದೊಳಗೆ ವಿಚ್ಚೇದನ ಕೋರಬಾರದೆಂಬ ನಿಯಮ ಕಡ್ಡಾಯವಲ್ಲ: ಹೈಕೋರ್ಟ್

ನ್ಯಾಯ ವಿಲೇವಾರಿಗೆ ತ್ವರಿತಗೊಳಿಸಲು ಆರಂಭಿಸಿದ್ದ ಲೋಕ ಅದಾಲತ್. ಈ ಲೋಕ ಅದಾಲತ್​ನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಐದು ಸಾವಿರ ಪ್ರಕರಣಗಳಿದ್ದವು. ಇವುಗಳಲ್ಲಿ 3600 ಪ್ರಕರಣಗಳು ಇತ್ಯರ್ಥವಾಗಿದ್ದು ವಿಶೇಷ. ಇವುಗಳ ಭಾಗವೇ ಈ ಹನ್ನೇರಡು ಜೋಡಿಗಳು ಮತ್ತೆ ತಮ್ಮ ಜೀವನಕ್ಕೆ ಹಿಂತಿರುಗಿದವು. ಈ ವೇಳೆ ಇನ್ನೂ ಕೆಲವರು ಭಾವುಕರಾಗಿ ಕಣ್ಣೀರು ತೆಗೆದರೇ, ಗಂಡ ಸರಿಯಿಲ್ಲ ಎಂದು ಹೇಳುವ ಬದಲು ಗಂಡನನ್ನೆ ಮಗನಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು. ಹೀಗಾಗಿ ಮತ್ತೆ ಹೊಸ ಜೀವನ ಆರಂಭಿಸಲು ನಿರ್ಧರಿಸಿದರು.

ಲೋಕ ಅದಾಲತ್ ವಿಚಾರದಲ್ಲಿ ಇತ್ತೀಚಿಗೆ ನ್ಯಾಯಾಲಯಗಳು ಕೆಲ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಇದಕ್ಕಾಗಿ ಕೆಲ ವಕೀಲರನ್ನು ನೇಮಕ ಮಾಡಿಕೊಂಡು ವಿಚ್ಚೇಧನಕ್ಕೆ ಮುಂದಾದ ಪತಿ ಪತ್ನಿಯರ ಜೊತೆ ಮಾತುಕತೆ ನಡೆಸುತ್ತಾರೆ. ಆದಷ್ಟು, ಇಬ್ಬರ ನಡುವೆ ಪ್ರೀತಿ ಬರುವಂತೆ ಮಾಡುತ್ತಾರೆ. ಎರಡು ಕಡೆಯ ಸಂಬಂಧಿಕರು ಬಂದರೆ, ಜಗಳ ಶುರುವಾಗುತ್ತದೆ. ಇದೇ ಕಾರಣಕ್ಕೆ ಕೇವಲ ಪತಿ ಪತ್ನಿಯನ್ನು ಕರೆಯಿಸಿ ಮಾತಾಡುತ್ತಾರೆ. ಪರಿಣಾಮ ಜಿಲ್ಲೆಯ ಹನ್ನೇರಡು ಜೋಡಿಗಳು ಅರ್ಧಕ್ಕೆ ನಿಂತ ಜೀವನವನ್ನು ಮರು ಆರಂಭಕ್ಕೆ ನಿರ್ಧರಿಸಿದ್ದು ವಿಶೇಷವಾಗಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Sat, 9 September 23