ನಾಟಿಗೆ ತಂದಿಟ್ಟ ಅಡಕೆ ಸಸಿಗಳನ್ನು ನಾಶ ಮಾಡಿದ ದುಷ್ಕರ್ಮಿಗಳು, ಎಂತಹ ಹೊಟ್ಟೆಕಿಚ್ಚಿನ ಜನ ಇದ್ದಾರೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Sep 08, 2023 | 10:10 AM

ಎಂತಹ ಹೊಟ್ಟೆಕಿಚ್ಚಿನ ಜನ ಇರುತ್ತಾರೆ ಅಂದರೆ ನಾಟಿ ಮಾಡಲು ತಂದಿಟ್ಟ ಅಡಿಕೆ ಸಸಿಗಳನ್ನು ನಾಶ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ದಾವಣಗೆರೆ, (ಸೆಪ್ಟೆಂಬರ್ 08): ಎಂತಹ ಹೊಟ್ಟೆಕಿಚ್ಚಿನ ಜನ ಇರುತ್ತಾರೆ ಅಂದರೆ ನಾಟಿ ಮಾಡಲು ತಂದಿಟ್ಟ ಅಡಿಕೆ ಸಸಿಗಳನ್ನು ನಾಶ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಯರಲಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪರಮೇಶ್ವರಪ್ಪ ಎನ್ನುವ ರೈತ ನಾಟಿ ಮಾಡಲು 2 ಸಾವಿರ ಅಡಕೆ ಸಸಿಗಳನ್ನು ತಂದಿದ್ದ. ಆದ್ರೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿ ಸಸಿಗಳನ್ನು ನಾಶಪಡಿಸಿದ್ದಾರೆ. ಇದರಿಂದ ರೈತ ಪರಮೇಶ್ವರಪ್ಪಗೆ ಒಂದು ಲಕ್ಷ ರೂಪಾಯಿ ನಷ್ಟವಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Sep 08, 2023 09:37 AM