ದಾವಣಗೆರೆ: ಬಿಸಿ ಸಾಂಬಾರ್​ ಮೈ ಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 03, 2023 | 9:16 PM

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮನೆಯೊಂದರಲ್ಲಿ ದೇವಿ ಹಬ್ಬ ಹಿನ್ನಲೆ ಬಾಡೂಟ ಮಾಡಿ ಸೇವಿಸಿ ಪರಸ್ಪರ ಕಷ್ಟ-ಸುಖ ಮಾತನಾಡುತ್ತಾ ಇದ್ದರು. ಇನ್ನೇನು ಎಲ್ಲರದ್ದು ಊಟವಾಗಿತ್ತು. ಪಕ್ಕದ ಮನೆಯ ಅಜ್ಜಿಗೆ ಸಾಂಬಾರ್ ಕೊಟ್ಟು ಬಾ ಎಂದು ಮಗನಿಗೆ ತಾಯಿ ಹೇಳಿದ್ದಾಳೆ. ಹೀಗೆ ಮಗ ಸಾರು ಕೊಡಲು ಹೋಗಿ, ಎಡವಿ ಬಿದ್ದು, ಮೈ ಮೇಲೆ ಬಿಸಿ ಬಿಸಿ ಸಾಂಬಾರ್​ ಚಲ್ಲಿಕೊಂಡಿದ್ದಾನೆ. 

ದಾವಣಗೆರೆ: ಬಿಸಿ ಸಾಂಬಾರ್​ ಮೈ ಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು
ಮೃತ ಬಾಲಕ
Follow us on

ದಾವಣಗೆರೆ, ನ.03: ಜಿಲ್ಲೆಯ ಚನ್ನಗಿರಿ(Channagiri) ತಾಲೂಕಿನ ಯಲೋದಹಳ್ಳಿ ಗ್ರಾಮದ ರೈತ ಹನಮಂತಪ್ಪ ಎಂಬುವವರ ಮನೆಯಲ್ಲಿ ದೇವರ ಹಬ್ಬವಿತ್ತು. ದೇವರ ಹಬ್ಬ ಅಂದರೆ, ಇಲ್ಲಿ ದೇವಿಗೆ ಬಲಿಕೊಟ್ಟು ಭರ್ಜರಿ ಬಾಡೂಟ ಮಾಡಿ ಕುಟುಂಬಸ್ಥರೆಲ್ಲರೂ ಸೇರಿ ಸವಿಯುತ್ತಾರೆ. ಅದರಂತೆ ಎಲ್ಲರೂ ಸಂಭ್ರಮದಿಂದ ಬಾಡೂಟ ಮಾಡಿ, ಪರಸ್ಪರ ಕಷ್ಟ-ಸುಖ ಮಾತಾಡುತ್ತಿದ್ದರು. ಈ ವೇಳೆ ಮನೆಯಲ್ಲಿನ ತಾಯಿಗೆ ಪಕ್ಕದ ಮನೆ ಅಜ್ಜಿಗೆ ಸ್ಪಲ್ಪ ಸಾಂಬಾರ್​ ಕೊಟ್ಟು ಬರಲು ಮಗನಿಗೆ ಹೇಳಿದ್ದಳು. ಹೀಗೆ ಮಗ ಸಮರ್ಥ ಸಾರು ತೆಗೆದುಕೊಂಡು ಹೋಗುವಾಗಿ ಬಿದ್ದಿದ್ದಾನೆ. ಈ ವೇಳೆ ಬಿಸಿ ಸಾರು ಆತನ ಮೈ ಮೇಲೆ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸಿದೇ ಇದೀಗ ಬಾಲಕ ಮೃತನಾಗಿದ್ದಾನೆ.

ನರಳಿ ಪ್ರಾಣಬಿಟ್ಟ ಬಾಲಕ

ಇನ್ನು ಬಾಲಕ ಸುಟ್ಟುಕೊಂಡು ಚೀರಾಡಿದ್ದಾನೆ. ಧ್ವನಿ ಕೇಳಿ ಸಂಬಂಧಿಕರೆಲ್ಲ ಸೇರಿದ್ದಾರೆ. ಗಾಯವಾಗಿ ಒದ್ದಾಡುತತಿದ್ದ ಬಾಲಕನನ್ನು ತಕ್ಷಣಕ್ಕೆ ಆಸ್ಪತ್ರೆ ಸಾಗಿಸಿದ್ದಾರೆ. ಇದೀಗ ಚಿಕಿತ್ಸೆ ಫಲಿಸದೇ ಬಾಲಕ ನರಳಿ ಸಾವನ್ನಪ್ಪಿದ್ದಾನೆ. ಈ ಬಾಲಕನಿಗೆ ಸುಟ್ಟ ಗಾಯಗಳು ಅಲ್ಪ ಪ್ರಮಾಣದಲ್ಲಿ ಇದ್ದವು. ಆದ್ರೆ, ಎದೆಯ ಭಾಗದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಸುಟ್ಟಿತ್ತು. ಹೃದಯಕ್ಕೂ ತೊಂದರೆ ಆಗಿತ್ತು. ಮೇಲಾಗಿ ಆಸ್ಪತ್ರೆಗೆ ಸಾಗಿಸುವುದು ಸ್ವಲ್ಪ ವಿಳಂಭವಾಗಿದೆ.

ಇದನ್ನೂ ಓದಿ:ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ಪಿಡಿಒ ಅಮಾನತು, ಎಫ್​​ಐಆರ್​ ದಾಖಲು

ಆಸ್ಪತ್ರೆಗೆ ಸೇರಿಸುವುದು ತಡವಾದ ಹಿನ್ನಲೆ ಕೊನೆಯುಸಿರೆಳದನಾ ಬಾಲಕ?

ಹೌದು, ಘಟನೆ ನಡೆದ ತಕ್ಷಣ ಜಿಲ್ಲಾ ಆಸ್ಪತ್ರೆಯ ಸುಟ್ಟ ಗಾಯಾಳು ವಿಭಾಗಕ್ಕೆ ಸೇರ್ಪಡೆ ಮಾಡಿದ್ದರೇ, ಅಲ್ಲೊಂದು ವಿಶೇಷ ವ್ಯವಸ್ಥೆ ಇದೆ. ಇದಕ್ಕಾಗಿಯೇ ವಿಶೇಷ ಚಿಕಿತ್ಸಾ ವಿಭಾಗ ಕೂಡ ಇದೆ. ಇದರ ಬಗ್ಗೆ ಮಾಹಿತಿ ಇಲ್ಲದ ಹಿನ್ನಲೆ ಪಕ್ಕದ ಬಸವಾ ಪಟ್ಟಣ ಸೇರಿದಂತೆ ಕೆಲ ಕಡೆ ಚಿಕಿತ್ಸೆ ಕೊಡಿಸಿ, ಗಂಭೀರ ಸ್ಥಿತಿಗೆ ಬಂದ ಬಳಿಕ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಇದೇ ಒಂದು ರೀತಿಯಲ್ಲಿ ಬಾಲಕನ ಸಾವಿಗೆ ಕಾರಣವಾಯಿತಾ ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ, ಸಣ್ಣ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮೇಲಾಗಿ ಬಿಸಿ ಪಾದಾರ್ಥ ಕೊಡುವಾಗ ಎಚ್ಚರ ವಹಿಸಬೇಕು. ಕ್ಷಣಾರ್ಧದಲ್ಲಿ ಈ ದುರಂತ ಸಂಭವಿಸಿದೆ. ಬಾಳಿ ಬದುಕಬೇಕಾದ ಬಾಲಕ ಸಾವನ್ನಪ್ಪಿದ್ದು ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ