Halloween -ಮರಣವೇ ಮಹಾನವಮಿ: ದಾವಣಗೆರೆ ಯುವತಿಯರಿಂದ ಭರ್ಜರಿ ಹ್ಯಾಲೋವೀನ್‌ ಸಂಭ್ರಮಾಚರಣೆ!

| Updated By: ಸಾಧು ಶ್ರೀನಾಥ್​

Updated on: Nov 01, 2022 | 7:34 PM

Davangere Halloween: ನಮ್ಮ ನಾಡಿನ ಶರಣರು ಹೇಳಿದಂತೆ ಮರಣವೇ ಮಹಾನವಮಿ ಎನ್ನುವಂತೆ ಸಾವನ್ನು ಸಂಭ್ರಮಿಸುವ ಕ್ಷಣದಂತಿತ್ತು ಅದು. ವಿಚಿತ್ರವಾದ ಮುಖ ವಾಡಗಳನ್ನ ಸಿದ್ಧಪಡಿಸಿ, ದೆವ್ವದ ರೀತಿಯಲ್ಲಿ ಮುಖದ ಮೇಲೆ ಚಿತ್ರಗಳನ್ನ ಬಿಡಿಸಿಕೊಂಡಿದ್ದರು. ಅದೊಂದು ರೀತಿಯಲ್ಲಿ ದೆವ್ವದ ಮನೆ. ಸ್ಮಶಾನ, ಶವಗಳನ್ನ ತೂಗು ಹಾಕಿದ ದೃಶ್ಯಗಳು.

Halloween -ಮರಣವೇ ಮಹಾನವಮಿ: ದಾವಣಗೆರೆ ಯುವತಿಯರಿಂದ ಭರ್ಜರಿ ಹ್ಯಾಲೋವೀನ್‌ ಸಂಭ್ರಮಾಚರಣೆ!
ಮರಣವೇ ಮಹಾನವಮಿ: ದಾವಣಗೆರೆ ಯುವತಿಯರಿಂದ ಭರ್ಜರಿ ಹ್ಯಾಲೋವೀನ್‌ ಸಂಭ್ರಮಾಚರಣೆ!
Follow us on

ದಾವಣಗೆರೆ: ಅಲ್ಲಿದ್ದವರೆಲ್ಲಾ ಒಮ್ಮಿಂದ ಒಮ್ಮೆಲೇ ವಿಚಿತ್ರವಾಗಿ ವರ್ತಿಸುತ್ತಿದ್ದರು. ಜೊತೆಯಲ್ಲೇ ಇದ್ದ ಚಂದ ಚಂದದ ಮುಖಗಳು ಮೇಕಪ್ ಮಾಡಿಕೊಂಡು ದೆವ್ವಗಳಾಗಿದ್ದರು! ಜೊತೆಗೆ ಅಲ್ಲಿ ಸ್ಮಶಾನವೂ ಇತ್ತು. ಇದೇನು ಉಕ್ಕಡಗಾತ್ರಿ ಅಜ್ಜಯ್ಯನ ಗದ್ದಿಗೆ ಬಂದೇವಾ ಎಂಬ ಭಾವನೆ ಕಾಡುತ್ತಿತ್ತು. ಪಾಶ್ಚಿವಾತ್ಯ ದೇಶಗಳಿಂದ ನಮ್ಮ ನೆಲದಲ್ಲಿ ಕಾಲಿಡುತ್ತಿರುವ ಹ್ಯಾಲೋವೀನ್‌ (Halloween Clebration) ಎಂಬ ಸಾವನ್ನು ಸಂಭ್ರಮಿಸುವ ಉತ್ಸವ ಅಲ್ಲಿ ಸಮಾಧಿಸದೃಶವಾಗಿ ನೆಲೆಸಿತ್ತು. ಇದು ಕಂಡುಬಂದಿದ್ದು ಬೆಣ್ಣೆ ನಗರಿ ದಾವಣಗೆರೆಯಲ್ಲಿ (Davangere Halloween ).

ಇದಕ್ಕೆ ಹ್ಯಾಲೋವೀನ್ ಎಂದು ಹೆಸರು. ನಮ್ಮ ನಾಡಿನ ಶರಣರು ಹೇಳಿದಂತೆ ಮರಣವೇ ಮಹಾನವಮಿ ಎನ್ನುವಂತೆ ಸಾವನ್ನು ಸಂಭ್ರಮಿಸುವ ಕ್ಷಣದಂತಿತ್ತು ಅದು. ವಿಚಿತ್ರವಾದ ಮುಖ ವಾಡಗಳನ್ನ ಸಿದ್ಧಪಡಿಸಿ, ದೆವ್ವದ ರೀತಿಯಲ್ಲಿ ಮುಖದ ಮೇಲೆ ಚಿತ್ರಗಳನ್ನ ಬಿಡಿಸಿಕೊಂಡಿದ್ದರು. ಅದೊಂದು ರೀತಿಯಲ್ಲಿ ದೆವ್ವದ ಮನೆ. ಸ್ಮಶಾನ, ಶವಗಳನ್ನ ತೂಗು ಹಾಕಿದ ದೃಶ್ಯಗಳು.

ಒಂದು ರೀತಿಯಲ್ಲಿ ಭಯ ಪಡುವಂತಹ ಅಂಶಗಳು. ನೋಡುತ್ತಿರುವುದು ದಾವಣಗೆರೆ ನಗರದ ರಾಂಡಕೋ ಸರ್ಕಲ್ ಬಳಿ ಇರುವ ಸ್ವಟ್ ಪಾರ್ಕ್​​ನಲ್ಲಿ. ದಾವಣಗೆರೆ ನಗರದ ಪ್ರತಿಷ್ಠಿತ ಮನೆತನಗಳ ನೂರಾರು ಯುವತಿಯರು ಈ ಪಾರ್ಕ್ ನ ಸದಸ್ಯರಾಗಿದ್ದಾರೆ. ಇಂತಹ ಪಾರ್ಕ್​ನಲ್ಲಿ ಈ ವರ್ಷ ವಿಶೇಷವಾದ ರೀತಿಯಲ್ಲಿ ಹ್ಯಾಲೋವಿನ್ ಉತ್ಸವ ನಡೆಯಿತು. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)

ಇದೊಂದು ರೀತಿ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆದು ಬಂದ ಸಂಪ್ರದಾಯ. ಹೆಚ್ಚಾಗಿದು ಅಕ್ಟೋಬರ್ 31ರೊಳಗಾಗಿ (Monday, 31 October) ನಡೆಯುವ ಹ್ಯಾಲೋವಿನ್ ಉತ್ಸವ. ನಮ್ಮಲ್ಲಿ ನಡೆಯುವ ಹೋಳಿ, ಭೂತಾರಾಧನೆ ಸೇರಿದಂತೆ ಹತ್ತಾರು ಆಚರಣೆಗಳು ಇವೆ. ಅವು ನಿರಂತರವಾಗಿ ನಡೆಯುತ್ತವೆ. ಇದೇ ವೇಳೆ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದ ಮಹಿಳೆಯರು ಮಸ್ತ ಮಜಾ ಮಾಡಿದ್ರು.

ಕೇವಲ ಅಮೆರಿಕಾ, ಇಂಗ್ಲೆಂಡ್ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಪ್ರಸಿದ್ಧಿ ಪಡೆದ ಈ ಉತ್ಸವ ಅಥವಾ ಸಂಪ್ರದಾಯ ಈಗ ಬೆಣ್ಣೆನಗರಿ ಜನರ ಗಮನ ಸೆಳೆದಿದೆ. ಎಲ್ಲಿ ನೋಡಿದಲ್ಲಿ ಮಹಿಳೆಯರು ಸಂಭ್ರಮಿಸಿದ್ರು. ಜೊತೆಗೆ ಸ್ಮಶಾನ, ಶವ ನೇತಾಕಿದ್ದು ಸಹಜವಾಗಿ ಎಂಬಂತೆ ಕಂಡು ಬಂದಿದ್ದು ವಿಶೇಷವಾಗಿತ್ತು.