ವೈದ್ಯೋ ನಾರಾಯಣೋ ಹರಿ: ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಡಾ. ಬಸವಂತಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ
Dr M Basavanthappa: ನೀತಿಗೆರೆಯಲ್ಲಿ ಪಾಥಮಿಕ ಶಿಕ್ಷಣ, ಸಿರಿಗೆರೆಯಲ್ಲಿ ಹೈಸ್ಕೂಲು, ಶಿವಮೊಗ್ಗದಲ್ಲಿ ಪಿಯುಸಿ, ಮೈಸೂರಿನಲ್ಲಿ ಎಂಬಿಬಿಎಸ್ ಮುಗಿಸಿ ಸಂತೆಬೆನ್ನೂರಿನಲ್ಲಿ ರೋಗಿಗಳ ಪರೀಕ್ಷೆಗೆ 3 ರೂಪಾಯಿ ಫೀಸ್ ನೊಂದಿಗೆ ಸಿದ್ದೇಶ್ವರ್ ಕ್ಲಿನಿಕ್ ತೆರೆದವರು ಡಾ. ಬಸವಂತಪ್ಪ
ವೈದ್ಯರು ಇಂದ್ರೆ ಇತ್ತೀಚಿಗೆ ಥಟ್ ಅಂತಾ ತಲೆಗೆ ಬರುವುದು ಸುಲಿಗೆ ಮಾಡುವ ಜನಾ ಅಂತಾ. ಆಸ್ಪತ್ರೆಗೆ ಹೋದ್ರೆ ಸಾಕು ಶುರುವಾಗುತ್ತದೆ ಸುಲಿಗೆ ಎಂಬ ಮಹಾ ಮೋಸ. ಆದ್ರೆ ವೈದ್ಯರನ್ನ ಅನಾದಿಕಾಲದಿಂದಲೂ ನಿರಂತರವಾಗಿ ದೇವರು ಅಂತಲೇ ಜನ ನಂಬಿದ್ದಾರೆ. ಕಾಲ ಬದಲಾದರೂ ವೈದ್ಯರ ವಿಷಯದಲ್ಲಿ ಜನರ ನಂಬಿಕೆ ಅಚಲವಾಗಿದೆ. ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಅಂದರೆ… ಬಡವರ ಪಾಲಿನ ವೈದ್ಯರಾದ ದೇವರು ಸಂತೆಬೆನ್ನೂರು ಡಾ. ಬಸವಂತಪ್ಪ (Dr M Basavanthappa). ಇಂತಹ ವೈದ್ಯನಿಗೆ ನಮ್ಮ ಸರ್ಕಾರವೂ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಅವರ ಸೇವೆಯನ್ನು ಗೌರವಿಸಿದೆ.
ವೈದ್ಯೋ ನಾರಾಯಣೋ ಹರಿ ಎಂಬುದು ಇವರಿಗೆ ಅಕ್ಷರಶಃ ಹೊಂದುತ್ತದೆ, ಅದಕ್ಕೆ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿದೆ!
ದಾವಣಗೆರೆ ಅಂದ್ರೆ ವೈದ್ಯಕೀಯ ಶಿಕ್ಷಣಕ್ಕೆ ಹೇಳಿ ಮಾಡಿಸಿದ ಸ್ಥಳ. ವೈದ್ಯೋ ನಾರಾಯಣೋ ಹರಿ ಎಂಬುದು ಕೆಲ ವೈದ್ಯರಿಗೆ ಅಕ್ಷರಶಃ ಹೊಂದುತ್ತದೆ. ಅಂತಹ ವೈದ್ಯರಲ್ಲಿ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಡಾ ಬಸವಂತಪ್ಪ ಒಬ್ಬರು (Santhebennur Doctor). ಇವರು ಬಡವರ ಪಾಲಿನ ಬಂಧು ಅಶ್ವಿನಿ ದೇವರೂ ಹೌದು. ಎರಡು ರೂಪಾಯಿ ವೈದ್ಯರೆಂದೇ ಚಿರಪರಿಚಿತರಾದ ಈ ವೈದ್ಯರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ (Kannada Rajyotsava Award).
ಡಾ ಬಸವಂತಪ್ಪ ಅದಕ್ಕೆ ಅರ್ಹರಾಗಿದ್ದು ಅವರ ಅಭಿಮಾನಿಗಳಾದ ಸಂತೇಬೆನ್ನೂರು ನಾಗರಿಕರಲ್ಲಿ ಹರ್ಷವನ್ನುಂಟು ಮಾಡಿದೆ. ಪ್ರತಿಯೊಬ್ಬರಿಗೂ ಉತ್ತಮ ಸಾಧನೆಯ ಕನಸು, ಗುರಿ ಇರುತ್ತದೆ. ಆ ಗುರಿ ಮುಟ್ಟುವವರು ಕೆಲವೇ ಜನ. ಅದರಲ್ಲಿಯೂ ಎಂಬಿಬಿಎಸ್ ಮುಗಿಸಿ ವೈದ್ಯ ಪದವಿ ಬಂದ ತಕ್ಷಣ ನಗರ ಸೇರಿ ಹಣ ಸಂಪಾದನೆ ಮಾಡಿ ಕಾಸು ಗುಡ್ಡೆ ಹಾಕುವವರೆ ಹೆಚ್ಚು. ಆದ್ರೆ ಡಾ ಬಸವಂತಪ್ಪ ಅವರು ಅದಕ್ಕೆ ತದ್ವಿರುದ್ಧ. ಹೊನ್ನೆಮರದಹಳ್ಳಿಯ ವೈದ್ಯ ಡಾ ಬಸವಂತಪ್ಪ ಕಳೆದ 32 ವರ್ಷಗಳಿಂದ ತಮ್ಮ ವಿದ್ಯೆ ಮತ್ತು ಸೇವೆಯನ್ನು ಗ್ರಾಮಸ್ಥರಿಗೆ ಮೀಸಲಿರಿಸಿದ್ದಾರೆ. ಬಡ ರೋಗಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ.
ನೀತಿಗೆರೆಯಲ್ಲಿ ಪಾಥಮಿಕ ಶಿಕ್ಷಣ.. ಅದಕ್ಕೆ ಭದ್ರಬುನಾದಿ!
ನೀತಿಗೆರೆಯಲ್ಲಿ ಪಾಥಮಿಕ ಶಿಕ್ಷಣ, ಸಿರಿಗೆರೆಯಲ್ಲಿ ಹೈಸ್ಕೂಲು, ಶಿವಮೊಗ್ಗದಲ್ಲಿ ಪಿಯುಸಿ, ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಸಂತೆಬೆನ್ನೂರಿನಲ್ಲಿ ಸಿದ್ದೇಶ್ವರ್ ಕ್ಲಿನಿಕ್ ತೆರೆದು, ತಮ್ಮ ವೃತ್ತಿ ಜೀವನ ಆರಂಭಿಸಿದರು. ರೋಗಿಗಳ ಪರೀಕ್ಷೆಗೆ 3 ರೂಪಾಯಿ ಫೀಸ್ ನೊಂದಿಗೆ ಪ್ರಾರಂಭ ಮಾಡಿದರು. ನಂತರದ ದಿನಗಳಲ್ಲಿ 5 ರೂ. ರೂ. 20 ರೂ.ಗಳು. ಈಗ ಅವರ ಸೇವಾಶುಲ್ಕ 30 ರೂ.ಗೆ ಹೆಚ್ಚಿಸಿದ್ದಾರೆ.
ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಮಹಾಶಯ
ಇನ್ನು, ಮಾತ್ರೆ ಕೊಳ್ಳಲಾರದ ಬಡವರಿಗೆ ಉಚಿತವಾಗಿ ಬರುವ ಸ್ಯಾಂಪಲ್ ಮಾತ್ರೆಗಳನ್ನು ಕೊಟ್ಟು ಬಡವರಿಗೆ ರೋಗ ಗುಣಪಡಿಸಿರುವ ಎಷ್ಟೋ ಉದಾಹರಣೆಗಳಿವೆ. ದಿನಲೂ ಈ ವೈದ್ಯರು ಬೆಳಗ್ಗೆಯೇ ಬಂದಿದ್ದರೂ ತಡರಾತ್ರಿಗೆ ಮನೆಗೆ ಹೊರಡುತ್ತಾರೆ. ಕೆಲವು ಸಲ 80 ದಿಂದ 90 ರೋಗಿಗಳನ್ನು ನೋಡುತ್ತಾರೆ. ಇವರ ಈ ಸೇವಾ ಕಾರ್ಯಕ್ಕೆ ಪತ್ನಿ ಸುಜಾತ ಕೂಡ ಸಾಥ್ ನೀಡಿದ್ದಾರೆ. ಕಳೆದ 32 ವರ್ಷಗಳಿಂದ ಗ್ರಾಮೀಣ ಸೇವೆ ಮಾಡುತ್ತಿರುವ ಡಾ ಬಸವಂತಪ್ಪ ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಮಹಾಶಯ (ವರದಿ -ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
ವೈದ್ಯ ವೃತ್ತಿ ಎನ್ನುವುದು ಜೀವಗಳನ್ನು ಬದುಕಿಸುವ ಪುಣ್ಯದ ವೃತ್ತಿ, ಈ ಭಾಗದಲ್ಲಿ ಯಾವ ಹಳ್ಳಿಗೆ ಹೋದರೂ ‘ನಮ್ಮ ಡಾಕ್ಟರೂ’ ಎಂದು ಜನ ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ. ನನಗೆ ವೃತ್ತಿ ಜೀವನ ತೃಪ್ತಿ ತಂದಿದೆ. ವೈದ್ಯರ ಸಾಧನೆಗೆ ಮೆಚ್ಚುಗೆಯ ಸುರಿಮಳೆ ಶುರುವಾಗಿದೆ.
ಡಾ ಬಸವಂತಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕೊರೊನಾದಲ್ಲಿ ವೈದ್ಯ ಬಸವಂತಪ್ಪನವರು ಅವಿರತ ಸೇವೆ ಸಲ್ಲಿಸಿದ್ದಾರೆ. ಸುತ್ತಮುತ್ತ 40 ಹಳ್ಳಿಗಳಲ್ಲೇ ಅವರ ಸೇವೆ ಗಣನೀಯವಾದುದು. ಅವರು ನಮ್ಮ ಊರಿನ ಹೆಮ್ಮೆ ನಮ್ಮ ಡಾಕ್ಟರ್ ಎಂದು ಪ್ರಸಿದ್ದಿ. ಅವರಿಂದ ಇನ್ನಷ್ಟು ಸಮಾಜ ಮುಖಿ ಕೆಲಸ ವಾಗಲಿ ಎಂದು ಶುಭ ಹಾರೈಸಿದ್ದಾರೆ ಸಂತೆಬೆನ್ನೂರ ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ ಮರಳುಸಿದ್ದೇಶ್.