ದಾವಣಗೆರೆಯಲ್ಲಿ ಭೀಕರ ಸರಣಿ ಅಪಘಾತ; ಓರ್ವ ಮಹಿಳೆ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 15, 2023 | 8:15 AM

ಕಾರಿನ ಟೈರ್ ಬ್ಲಾಸ್ಟ್​ ಆಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಎಸ್​.ಎಸ್​ ಆಸ್ಪತ್ರೆ ಬಳಿ ತಡರಾತ್ರಿ ನಡೆದಿದೆ. ಸ್ಕೂಟರ್​ನಲ್ಲಿದ್ದ ಶೋಭಾ(49) ಮೃತ ಮಹಿಳೆ.

ದಾವಣಗೆರೆಯಲ್ಲಿ ಭೀಕರ ಸರಣಿ ಅಪಘಾತ; ಓರ್ವ ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Follow us on

ದಾವಣಗೆರೆ: ಕಾರಿನ ಟೈರ್ ಬ್ಲಾಸ್ಟ್​ ಆಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ(Davanagere) ನಗರದ ಎಸ್​.ಎಸ್​ ಆಸ್ಪತ್ರೆ ಬಳಿ ತಡರಾತ್ರಿ ನಡೆದಿದೆ. ಸ್ಕೂಟರ್​ನಲ್ಲಿದ್ದ ಶೋಭಾ(49) ಮೃತ ಮಹಿಳೆ. ಇನ್ನು ಕಾರಿನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮೃತ ಮಹಿಳೆಯ ಸಂಬಂಧಿಕರು ಚಿಕಿತ್ಸೆಗೆಂದು S.S.ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನಲೆ ಮಹಿಳೆ ಅವರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರಿನ ಟಾಯರ್​ ಬ್ಲಾಸ್ಟ್​ ಆಗಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಕಾರುಗಳು, ಸ್ಕೂಟಿ ಸಂಪೂರ್ಣ ಜಖಂ ಆಗಿದ್ದು, ದಾವಣಗೆರೆ ಸಂಚಾರಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೆ ಸಾವು

ಸಾವು ಮನುಷ್ಯನಿಗೆ ಹೇಗೆ ಬರುತ್ತದೆಯೋ ಗೊತ್ತಾಗುವುದಿಲ್ಲ, ಎಷ್ಟೇ ಟೆಕ್ನಾಲಜಿ ಮುಂದುವರೆದರೂ ಸದಾವು ಹೇಗೆ ಎಂಬುದು ತಿಳಿಯದ್ದಾಗಿದೆ. ಹೌದು ಅದರಂತೆ ಹೆದ್ದಾರಿಯಲ್ಲಿ ನಡೆದು‌ಕೊಂಡು ಬರುತ್ತಿದ್ದ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ನಡೆದಿದೆ. ಇದೇ ತಾಲೂಕಿನ ಬಂಗಾರಕ್ಕನಹಳ್ಳಿ ನಿವಾಸಿ ಕುಮಾರ (45) ಸಾವನ್ನಪ್ಪಿದ ವ್ಯಕ್ತಿ. ಕೆಲಸದ ನಿಮಿತ್ಯ ನಡೆದುಕೊಂಡು ಪಕ್ಕದ ಹಳ್ಳಿಗೆ ಹೋಗುತ್ತಿದ್ದ ಕುಮಾರ್​ಗೆ ಅಪರಿಚಿತ ವಾಹನವೊಂದು ಬಂದು ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್ ವೇಯಲ್ಲಿ ತಪ್ಪಿತು ಭಾರೀ ದುರಂತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

ಮೈಸೂರಿನಲ್ಲಿ ರೈತನ ಮೇಲೆ ಚಿರತೆ ದಾಳಿ ಪ್ರಕರಣ; ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಮೈಸೂರು: ಹುಣಸೂರು ತಾಲ್ಲೂಕಿನ ರಾಮೇನಹಳ್ಳಿಯಲ್ಲಿ ನಿನ್ನೆ ರೈತ ಅನಿಲ್ ಎಂಬಾತನ ಮೇಲೆ ರಾತ್ರಿ ಸ್ನೇಹಿತರ ಜೊತೆ ಜಾತ್ರೆ ಮಾಳದ ಬಳಿ ಇದ್ದಾಗ ಚಿರತೆ ದಾಳಿ ಮಾಡಿತ್ತು. ಈ ವೇಳೆ ಭುಜ ಕಾಲಿಗೆ ಗಾಯವಾಗಿದ್ದು, ಗಾಯಗೊಂಡಿದ್ದ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು. ಇದರಿಂದ ರಾತ್ರಿಯೆಲ್ಲ ಹುಡುಕಿದರೂ ಚಿರತೆ ಸಿಕ್ಕಿಲ್ಲ, ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಸ್ಥಳದಲ್ಲಿ ಚಿರತೆ ಸೆರೆಗೆ ಬೋನು ಹಿಡಿಯುವಂತೆ ಒತ್ತಾಯ ಮಾಡಲಾಗಿದೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ