ಹೆಚ್ಚುತ್ತಿರುವ ಧರ್ಮ ಸಂಘರ್ಷದ ಮಧ್ಯೆ ದಾವಣಗೆರೆಯಲ್ಲೊಂದು ಭಾವೈಕ್ಯತೆಯ ಉರುಸ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 11, 2022 | 11:08 AM

ರಾಜ್ಯದಲ್ಲಿ ಹೆಚ್ಚುತ್ತಿರುವ ಧರ್ಮ ಸಂಘರ್ಷದ ಮಧ್ಯೆ ದಾವಣಗೆರೆಯಲ್ಲಿ ಭಾವೈಕ್ಯತೆಯ ಉರುಸ್ ನಡೆದಿದೆ.ಇಲ್ಲಿ ಎಲ್ಲ ಧರ್ಮಿಯರಿಗೂ ವ್ಯಾಪಾರ ಮಾಡಲು ಮುಕ್ತ ಅವಕಾಶಯ ನೀಡಲಾಗಿತ್ತು.

ಹೆಚ್ಚುತ್ತಿರುವ ಧರ್ಮ ಸಂಘರ್ಷದ ಮಧ್ಯೆ ದಾವಣಗೆರೆಯಲ್ಲೊಂದು ಭಾವೈಕ್ಯತೆಯ ಉರುಸ್​
ಚಮನ್ ಷಾ ವಲಿ ದರ್ಗಾ ದಾವಣಗೆರೆ
Follow us on

ದಾವಣಗೆರೆ: ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ಸತತ ಏಳು ವಾರಗಳ ಕಾಲ ನಡೆಯುವ ಚಮನ್ ಷಾ ವಲಿ ದರ್ಗಾದ ಉರುಸ್​ನಲ್ಲಿ​ ಗ್ರಾಮದ ಪ್ರತಿಯೊಂದು ಕೋಮಿನವರಿಗೆ ಸ್ಟಾಲ್ ಹಾಕಲು ಮುಕ್ತ ಅವಕಾಶ ನೀಡಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಬಾಬಾ ಚಮನ್ ಷಾ ವಲಿಯವರ ದರ್ಗಾಕ್ಕೆ ಹಿಂದೂ ಮುಸ್ಲಿಂ ಭಕ್ತರು ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುವುದು ವಿಶೇಷ. ಸಾಕಷ್ಟು ಜನ ಹಿಂದೂ ವ್ಯಾಪಾರಿಗಳು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಚಮನ್ ಷಾ ವಲಿ ದರ್ಗಾದ ಉರುಸ್​ನಲ್ಲಿ ತಮ್ಮ ಸ್ಟಾಲ್​ಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಇಲ್ಲಿ ಸ್ಟಾಲ್ ಹಾಕಲು ಯಾರದೇ ಅನುಮತಿ ಕೂಡ ಪಡೆಯುವ ಅವಶ್ಯಕತೆ ಇಲ್ಲವಂತೆ.

ರಾಜ್ಯದಲ್ಲಿ ಪ್ರಸ್ತುತ ದಿನಗಳಲ್ಲಿ ಧರ್ಮ ದಂಗಲ್ ಜೋರಾಗಿದೆ. ಇದರ ನಡುವೆ ದಾವಣಗೆರೆಯಲ್ಲಿ ಭಾವೈಕ್ಯತೆಯ ಉರುಸ್ ನಡೆಸುವ ಮೂಲಕ ಸಂದೇಶವನ್ನ ನೀಡಿದ್ದಾರೆ. ಏಳು ವಾರಗಳ ಕಾಲ ಜರಗುವ ಉರುಸ್​ನಲ್ಲಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳಿ ಗೌಡರ ಮನೆಯಿಂದ ಗಂಧ ಬಂದಾದ ನಂತರ ಮುಸ್ಲಿಂ ಮನೆಗಳಿಂದ ಗಂಧ ಬರುವುದು ಇಲ್ಲಿನ ವಾಡಿಕೆ. ಇದಲ್ಲದೆ ಈ ದರ್ಗಾಕ್ಕೆ ಮುಸ್ಲಿರೊಂದಿಗೆ ಹಿಂದೂಗಳಿಗೆ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ದರ್ಗಾವನ್ನು ನೋಡಿಕೊಳ್ಳುವರಾದ ಸೈಯ್ಯದ್ ಸಾದೀಕ್ ಚಿಸ್ತಿ ಹೇಳಿದ್ದಾರೆ.

ಚಮನ್ ಷಾ ವಲಿ ಬಾಬಾರ ಪವಾಡಕ್ಕೆ ತಲೆ ಬಾಗಿದವರಿಲ್ಲ. ಇಲ್ಲಿ ನಡೆಯುವ ಪವಾಡಕ್ಕೆ ತಲೆಬಾಗಿರುವ ಸಾಕಷ್ಟು ಹಿಂದೂ ಭಕ್ತರು ತಮ್ಮದೇ ರೀತಿಯಲ್ಲಿ ಬೇಡಿಕೊಂಡ ಇಷ್ಟಾರ್ಥಗಳು ಸಿದ್ಧಿಯಾದಾಗ ತಮ್ಮದೇ ರೀತಿಯಲ್ಲಿ ಹರಕೆಗಳನ್ನು ತೀರುಸುತ್ತ ಬಂದಿದ್ದಾರೆ. 5 ಗುರುವಾರ ಇಲ್ಲಿ ಹರಕೆ ಕಟ್ಟಿಕೊಂಡರೇ ಅವರ ಹರಕೆ ಪೂರ್ತಿಯಾಗುತ್ತದೆ ಎಂಬುದು ಇಲ್ಲಿನ ಪ್ರತೀತಿ. ಇನ್ನು ಇಲ್ಲಿಗೆ ಹುಬ್ಬಳ್ಳಿಧಾರವಾಡ, ಬೆಂಗಳೂರು, ಹಾವೇರಿ, ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಸೇರಿದ್ದಂತೆ ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ, ಬಿಹಾರದಿಂದ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ತಮ್ಮದೆ ರೀತಿಯಲಿ ಹರಕೆ ತೀರಿಸುವುದು ವಿಶೇಷ.

ಇನ್ನು ಇಲ್ಲಿನ ವಿಶೇಷ ಅಂದರೆ 1787 ರಲ್ಲಿ ಚಮನ್ ಷಾ ವಲಿ ಬಾಬಾರವರೆ ನಿರ್ಮಿಸಿದ ಬಾವಿ ಈ ಬಾವಿಯಲ್ಲಿ ದೊರೆಯುವ ನೀರಿನಿಂದ ರೋಗಗಳು ಪರಿಹಾರ ಆಗುತ್ತದೆಯಂತೆ. ಇದು 250 ವರ್ಷ ಪುರಾತನ ಬಾವಿಯಾಗಿದ್ದು, ಈ ಬಾವಿಯಲ್ಲಿ ದೊರೆಯುವ ತೀರ್ಥಕ್ಕೆ ಪ್ರತಿಯೊಂದು ರೋಗ ವಾಸಿಯಾಗುವ ಶಕ್ತಿಯಿದೆ. ಇನ್ನು ಯಾವುದೇ ರೋಗಗಳಿದ್ದರೆ ಇಲ್ಲಿ ದೊರೆಯುವ ತೀರ್ಥವನ್ನು ಬಾಬಾ ಚಮನ್ ಷಾ ವಲಿ ದರ್ಗಾದ ಬಳಿ ಇಟ್ಟು ಬೇಡಿಕೊಂಡು ದಿನದಲ್ಲಿ ಎರಡು ಬಾರಿ ಸೇವಿಸಿದರೆ ಪ್ರತಿಯೊಂದು ಸಮಸ್ಯೆಗಳು ದೂರ ಆಗುತ್ತದೆ.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಧರ್ಮ ಸಂಘರ್ಷ; ಮದರಸಾ ಶಾಲೆ V/S ಕೇಸರಿ ಶಾಲೆಗಳ ಫೈಟ್

ಒಟ್ಟಾರೆ ಇಲ್ಲಿ ದೊರೆಯುವ ತೀರ್ಥ ಹಾಗೂ ಬಾಬ ಚಮನ್ ಷಾವಲಿಯವರ ಪವಾಡಕ್ಕೆ ಜನ ಮನಸೋತಿದ್ದಾರೆ. ಸಾಕಷ್ಟು ಭಕ್ತರು ದೂರದಿಂದ ಆಗಮಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುವುದು ಇಂದಿಗು ನಾವು ಕಾಣಬಹುದಾಗಿದೆ. ಅದೇನೆ ಆಗಲಿ ಭಾವೈಕ್ಯತೆಯನ್ನು ಸಾರುವ ಈ ದರ್ಗಾ ಇಂದಿಗು ಧರ್ಮ ಧರ್ಮಗಳ ಮಧ್ಯೆ ನಡೆಯುವ ಸಂಘರ್ಷಗಳಿಂದ ಮುಕ್ತವಾಗಿದ್ದು, ಪ್ರತಿಯೊಬ್ಬರನ್ನು ಈ ಚಮನ್ ಷಾ ವಲಿ ಕಾಯುತ್ತಿದ್ದಾರೆಂಬುದು ಪ್ರತಿಯೊಬ್ಬರ ನಂಬಿಕೆಯಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ