ರಾಜ್ಯದ ಪಠ್ಯಪುಸ್ತಕ ವಿವಾದಕ್ಕೆ ಕೇಂದ್ರ ಸಚಿವರೂ ಸ್ಪಷ್ಟನೆ, ಪ್ರತಿಕ್ರಿಯೆ ನೀಡುವಂತಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮುಗಿದ ಅಧ್ಯಾಯ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಿಷ್ಕಲ್ಮಶ ಮನಸಿನ ಶಾಲಾ ಮಕ್ಕಳು ಇತಿಹಾದದ ಬಗ್ಗೆ ತಮ್ಮ ಪಠ್ಯ ಪುಸ್ತಕಗಳಿಂದ ತಿಳಿಯಬೇಕಾಗಿರುವುದು ಇಷ್ಟೊಂದು ಗೋಜಲು, ಗೊಂದಲಕ್ಕೆ ತುತ್ತಾಗಿರುವುದು ಭವಿಷ್ಯದ ದೃಷ್ಟಿಯಿಂದ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಇನ್ನು, ಹೊಸ ಪಠ್ಯಪುಸ್ತಕಕ್ಕೆ ವಿರೋಧ ಹಿನ್ನೆಲೆ ಶಿಕ್ಷಣ ತಜ್ಞರು, ಸಾಹಿತಿಗಳು ಧಾರವಾಡದಲ್ಲಿ ಪಠ್ಯಪುಸ್ತಕ ವಿರೋಧಿಸಿ ಸಭೆ ನಡೆಸಿದ್ದಾರೆ. ತಮ್ಮ ಈ ಹೋರಾಟಕ್ಕೆ ‘ನಾವು ಕನ್ನಡಿಗರು ವಿಚಾರ ವೇದಿಕೆ’ಯೊಂದನ್ನೂ ಸ್ಥಾಪನೆ ಮಾಡಿಕೊಂಡಿದ್ದಾರೆ. ಶಿಕ್ಷಣ ಕಾಶಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಭೆ ನಡೆದಿದ್ದು ಪರಿಷ್ಕೃತ ಪಠ್ಯ ವಾಪಸ್‌ಗೆ 15 ದಿನಗಳ ಗಡುವು ಸಹ ನೀಡಿದ್ದಾರೆ. ಅಲ್ಲಿಗೆ ಶಾಲಾ ಪಠ್ಯ ವಿಚಾರ ವಿಕೋಪಕ್ಕೆ ಹೋಯ್ತಾ? ‘ನಾವು ಕನ್ನಡಿಗರು ವಿಚಾರ ವೇದಿಕೆ’ ಡಾ. ಹೆಡ್ಗೇವಾರ್, ಸೂಲಿಬೆಲೆ ಪಠ್ಯ ತೆಗೆಯುವಂತೆ ಆಗ್ರಹಿಸಿದ್ದು ರೋಹಿತ್ ಚಕ್ರತೀರ್ಥರನ್ನು ಸಮಿತಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದು ವಿವಾದದ ತಿರುಳು. ಜೊತೆಗೂ ಇನ್ನೂ ಕೆಲ ವಿಷಯಗಳನ್ನು ಮುಂದಿಟ್ಟುಕೊಂಡು ಭಾರೀ ಹೋರಾಟವೂ ನಡೆದಿದೆ.
ಸಿಲೆಬಸ್ ರಾದ್ಧಾಂತ:
ರಾಜ್ಯದಲ್ಲಿ ಪಠ್ಯ ಕೇಸರಿಕರಣ, ಕಾಂಗ್ರೆಸಿಕರಣ ವಿವಾದ ಜೋರಾಗುತ್ತಿರುವ ಹಿನ್ನೆಲೆ ಯಾವ ಪಠ್ಯ ಬೋಧನೆ ಮಾಡಬೇಕು. ಯಾವುದು ಮಾಡಬಾರದು ಅನ್ನೊ ಗೊಂದಲವುಂಟಾಗಿದ್ದು ಶಾಲೆಗಳನ್ನು ಧರ್ಮ ಸಂಕಟದಲ್ಲಿ ಸಿಲುಕಿಸಿವೆ. ಹಿಂದೆ ಪಠ್ಯಪುಸ್ತಕದಲ್ಲಿದ್ದ ವಿಚಾರಗಳು ಮಾತ್ರ ಮಕ್ಕಳ ಓದಿಗೆ ಸಿಗುತ್ತಿದ್ದವು. ಇಂಟರ್ನೆಟ್ ಬಂದಮೇಲೆ ಮಕ್ಕಳು ಎಲ್ಲ ವಿಚಾರಗಳನ್ನು ಮೊಬೈಲ್ನಲ್ಲಿಯೇ ಓದಬಲ್ಲರು. ಅಲ್ಲಿ ಸಿಗುವುದು ನಿಜ ಅಂತ ಹೇಗೆ ನಿರ್ಧರಿಸುವುದು? ಇದೇ ಹೊತ್ತಿನಲ್ಲಿ ಪೊಲಿಟಿಕಲಿ ಕರೆಕ್ಟ್ ಆಗಿರುವ ಪಠ್ಯಕ್ರಮ ಕೊಟ್ಟು ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿಸುವ ರಾಜಕಾರಣಿಗಳ ನಡೆ ಇವತ್ತಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಸರಿ?
ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ ಬುರಲಿ ಇಂದಿನ ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದದಿಂದ ಕಂಗಾಲಾದ ಖಾಸಗಿ ಶಾಲೆಗಳು; ಗೊಂದಲದ ಪಠ್ಯ ಬಿಟ್ಟು ಉಳಿದ ಪಠ್ಯ ಬೋಧನೆಗೆ ಮನವಿ ಮಾಡಿ ಪತ್ರ ಬರೆದ ಒಕ್ಕೂಟ