ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ತಾರಕ್ಕೇರಿದೆ. ನಾಡಿನ ಪ್ರಮುಖ ಸಾಹಿತಿಗಳ ಬರಹಗಳನ್ನು ಕೈಬಿಟ್ಟು ಹೆಗ್ಡೇವಾರ್, ಚಕ್ರವರ್ತಿ ಸೂಲಿಬೆಲೆಯವರ ಲೇಖನ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸದ್ಯ ಪಠ್ಯ ಪುಸ್ತಕ ವಾರ್ನಿಂದ ಖಾಸಗಿ ಶಾಲೆಗಳು ಕಂಗಾಲಾಗಿವೆ. ಶಿಕ್ಷಣ ಸಚಿವ ಬಿಸಿ ನಾಗೇಶ್ಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ ಬರೆದಿದೆ.
ರಾಜ್ಯದಲ್ಲಿ ಪಠ್ಯ ಕೇಸರಿಕರಣ, ಕಾಂಗ್ರೆಸಿಕರಣ ವಿವಾದ ಜೋರಾಗುತ್ತಿರುವ ಹಿನ್ನಲೆ ಯಾವ ಪಠ್ಯ ಬೋಧನೆ ಮಾಡಬೇಕು. ಯಾವುದು ಮಾಡಬಾರದು ಅನ್ನೊ ಗೊಂದಲದಲ್ಲಿ ಶಾಲೆಗಳಿವೆ. ಹೀಗಾಗಿ ಖಾಸಗಿ ಶಾಲೆಗಳು, ಶಿಕ್ಷಣ ಸಚಿವರು ಹಾಗೂ ಇಲಾಖೆಗೆ ತಮ್ಮ ಮನವಿ ಸಲ್ಲಿಸಿದ್ದಾರೆ. ಸದ್ಯ ವಿವಾದದಲ್ಲಿರುವ ಪಠ್ಯ ಯಾವುದು ಅದನ್ನು ಹೊರತುಪಡಿಸಿ ಮಕ್ಕಳ ಹಿತದೃಷ್ಟಿಯಿಂದ ಇತರೆ ಪಠ್ಯ ಅಭ್ಯಸಮಾಡಲು ವಿಶೇಷ ಆದೇಶ ಮಾಡವಂತೆ ಮನವಿ ಸಲ್ಲಿಸಿದ್ದಾರೆ. ಗೊಂದಲದ ಪಠ್ಯವನ್ನ ಬದಿಗಿಟ್ಟು ಉಳಿದ ಪಠ್ಯವನ್ನು ಶಿಕ್ಷಕರು ಪಾಠಕ್ಕೆ ಅವಕಾಶ ಮಾಡಿಕೊಡಬೇಕು. ಪ್ರತ್ಯೇಕವಾದ ಆದೇಶ ಹೊರಡಿಸಿ ವಿವಾದ ಎಲ್ಲವು ಇತ್ಯರ್ಥದ ಬಳಿಕ ಉಳಿದ ಪಾಠ ಅಧ್ಯಯನ ಹಾಗೂ ಕೈಬಿಡುವ ಬಗ್ಗೆ ಆದೇಶ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ; ನಿಮ್ಮ ಸಂಗಾತಿ ಜೊತೆ ಈ ವಿಚಾರಗಳನ್ನ ಮಾತನಾಡಲೇಬೇಡಿ
ಮಕ್ಕಳ ಮನಸ್ಸಿನ ಮೇಲೆ ಪಠ್ಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡದಂತೆ ಆದಷ್ಟು ಬೇಗ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪತ್ರ ಬರೆದು ಮನವಿ ಮಾಡಿವೆ. ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಜ್ಯಾದ್ಯಂತ ಶಾಲೆ ಆರಂಭವಾದ್ರೂ ಪಠ್ಯ ಪುಸ್ತಕ ತಲುಪಿಲ್ಲ. ಪಠ್ಯಪುಸ್ತಕ ತಲುಪದೇ ಇರುವುದು ತುಂಬಲಾರದ ನಷ್ಟ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಪಠ್ಯಪುಸ್ತಕ ಶಾಲೆಗಳಿಗೆ ತಲುಪುವಂತೆ ಮಾಡಬೇಕು. ಪಠ್ಯಪುಸ್ತಕದ ವಿವಾದದಿಂದ ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ, ಮಕ್ಕಳ ಹಕ್ಕು ಉಲ್ಲಂಘನೆಯಾಗಂದತೆ ಎಚ್ಚರ ವಹಿಸಲು ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ