ಹಣಕ್ಕಾಗಿ ವೈದ್ಯನನ್ನು ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್; ವೈದ್ಯನ ಸ್ನೇಹಿತ ಸೇರಿ ಮೂವರನ್ನು ಬಂಧಿಸಿದ ಸಿಸಿಬಿ
ಡಾ.ಶಂಕರನ್ನು ಹನಿಟ್ರ್ಯಾಪ್ ಮಾಡಲಾಗುತ್ತಿತ್ತು. ಸದ್ಯ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗನ್ನು ಬಂಧಿಸಿದ್ದು ಡಾ.ಶಂಕರ್ ಸ್ನೇಹಿತ ನಾಗರಾಜ್ನಿಂದಲೇ ಹನಿಟ್ರ್ಯಾಪ್ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಕಲಬುರಗಿ ವೈದ್ಯನನ್ನು ಹನಿಟ್ರ್ಯಾಪ್(Honey Trap) ಮಾಡಿದ್ದ ಗ್ಯಾಂಗನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಮೂಲದವರಾದ ವೈದ್ಯ ಡಾ.ಶಂಕರನ್ನು ಹನಿಟ್ರ್ಯಾಪ್ ಮಾಡಲಾಗುತ್ತಿತ್ತು. ಸದ್ಯ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗನ್ನು ಬಂಧಿಸಿದ್ದು ಡಾ.ಶಂಕರ್ ಸ್ನೇಹಿತ ನಾಗರಾಜ್ನಿಂದಲೇ ಹನಿಟ್ರ್ಯಾಪ್ ನಡೆದಿರುವುದು ಬೆಳಕಿಗೆ ಬಂದಿದೆ.
2021ರಲ್ಲಿ ಪುತ್ರನಿಗೆ ಮೆಡಿಕಲ್ ಸೀಟ್ ಕೊಡಿಸಲು ಡಾ.ಶಂಕರ್, ನಾಗರಾಜ್ ಮೂಲಕ ಯತ್ನಿಸಿದ್ರು. ₹66 ಲಕ್ಷ ಪಡೆದು ಸೀಟ್ ಕೊಡಿಸುವುದಾಗಿ ನಾಗರಾಜ್ ಹೇಳಿದ್ದ. ಅದರಂತೆಯೇ ಶಂಕರ್ರಿಂದ ಹಂತಹಂತವಾಗಿ ₹66 ಲಕ್ಷ ಪಡೆದಿದ್ದ. ಆದ್ರೆ ಕೊನೆಗೆ ಸೀಟ್ ಕೊಡಿಸಲೇ ಇಲ್ಲ. ಹೀಗಾಗಿ ಪುತ್ರನಿಗೆ ಮೆಡಿಕಲ್ ಸೀಟ್ ಕೊಡಿಸದಿದ್ದರಿಂದ ಡಾ.ಶಂಕರ್ ಹಣ ಕೇಳಿದ್ದ. ಆಗ ನಾಗರಾಜ್ ಹಣ ಕೊಡುತ್ತೇನೆಂದು ಕರೆಸಿ ಬೆಂಗಳೂರಿನ ಉಪ್ಪಾರಪೇಟೆಯ ಲಾಡ್ಜ್ನಲ್ಲಿ ಬುಕ್ ಮಾಡಿ ಇರಿಸಿದ್ದ. ಇದೇ ವೇಳೆ ಡಾ.ಶಂಕರ್ ತಂಗಿದ್ದ ಲಾಡ್ಜ್ ರೂಮ್ಗೆ ಯುವತಿಯರು ಬಂದಿದ್ದಾರೆ. ಕೆಲಹೊತ್ತಿನ ಬಳಿಕ ಲಾಡ್ಜ್ ರೂಮ್ಗೆ ನಕಲಿ ಪೊಲೀಸರು ಕೂಡ ಭೇಟಿ ಕೊಟ್ಟಿದ್ದಾರೆ. ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ ಎಂದು ನಕಲಿ ಪೊಲೀಸರು ಡಾ.ಶಂಕರ್ಗೆ ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಕ್ರೀಡಾಂಗಣದಲ್ಲಿ ತರಬೇತಿ ನಿಲ್ಲಿಸಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಐಎಎಸ್ ಅಧಿಕಾರಿ ಲಡಾಖ್ಗೆ ವರ್ಗ, ಪತ್ನಿ ಅರುಣಾಚಲ ಪ್ರದೇಶಕ್ಕೆ
ನಿಮ್ಮ ವಿರುದ್ಧ ಕೇಸ್ ದಾಖಲಿಸದಿರಲು 50 ಲಕ್ಷ ಹಣ ನೀಡಬೇಕು ಎಂದು ಡಾ.ಶಂಕರ್ನಿಂದ 50 ಲಕ್ಷ ಹಣ ಪಡೆದಿದ್ದಾರೆ. ಮತ್ತೆ 50 ಲಕ್ಷ ಹಣ ನೀಡುವಂತೆ ವೈದ್ಯ ಡಾ.ಶಂಕರ್ಗೆ ಒತ್ತಾಯಿಸಿದ್ದಾರೆ. ಲಾಡ್ಜ್ನಲ್ಲಿ ನಿಮ್ಮ ಜತೆಗಿದ್ದ ಯುವತಿಯರ ಜಾಮೀನಿಗೆ ಹಣ ನೀಡಿ. 50 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆಗೆ ಯತ್ನಿಸಿದವರ ವಿರುದ್ಧ ಡಾ.ಶಂಕರ್ ಪ್ರಕರಣ ದಾಖಲಿಸಿದ್ದಾರೆ. ಡಾ.ಶಂಕರ್ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವೈದ್ಯ ಡಾ.ಶಂಕರ್ ಸ್ನೇಹಿತ ನಾಗರಾಜ್ ಸೇರಿದಂತೆ ಮೂವರ ಅರೆಸ್ಟ್ ಆಗಿದ್ದಾರೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ