ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಟ ರಿಷಭ್ ಶೆಟ್ಟಿ ಚಾಲನೆ; 3 ದಿನಗಳ ಕಾಲ ನಡೆಯುವ ಎಕ್ಸ್ಪೋಗೆ ಭೇಟಿ ಕೊಟ್ಟು ಚಿನ್ನ ಗೆಲ್ಲಿ

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಟ ರಿಷಭ್ ಶೆಟ್ಟಿ ಚಾಲನೆ; 3 ದಿನಗಳ ಕಾಲ ನಡೆಯುವ ಎಕ್ಸ್ಪೋಗೆ ಭೇಟಿ ಕೊಟ್ಟು ಚಿನ್ನ ಗೆಲ್ಲಿ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಟ ರಿಷಭ್ ಶೆಟ್ಟಿ ಚಾಲನೆ

ಟಿವಿ9 ಪ್ರಸ್ತುತ ಪಡಿಸೋ ಟಿವಿ9 ಸ್ವೀಟ್ ಹೋಮ್‌ ಎಕ್ಸ್‌ಪೋ ಇಂದಿನಿಂದ ಶುರುವಾಗ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಎಕ್ಸ್ಪೋ ಶುರುವಾಗಿದೆ. ಪ್ರತೀ ಸಲ ಸಖತ್ ರೆಸ್ಪಾನ್ಸ್‌ ಮೇರೆಗೆ ಟಿವಿ9 12ನೇ ಬಾರಿಗೆ ಸ್ವೀಟ್‌ ಹೋಮ್‌ ರಿಯಲ್ ಎಸ್ಟೇಟ್‌ ಎಕ್ಸ್‌ಪೋ ಆಯೋಜಿಸಿದೆ.

TV9kannada Web Team

| Edited By: Ayesha Banu

May 27, 2022 | 2:35 PM


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಇರಬೇಕು. ಕನಸಿನ ಮನೆ ನನಸಾಗಿಸಿಕೊಳ್ಬೇಕು. ನಿಮ್ಮಿಷ್ಟದ ಮನೆಯನ್ನ ಅತ್ಯಂತ ಕಡಿಮೆ ಸಮಯದಲ್ಲಿ ಹೊಂದಬೇಕು ಅನ್ನೋ ಆಲೋಚನೆಯಲ್ಲಿರೋರಿಗೆ ಒಂದು ಗುಡ್ನ್ಯೂಸ್. ನಿಮ್ಮಿಷ್ಟದ ಮನೆ ನಿಮ್ಮದಾಗಿಸಲು ಇಂದಿನಿಂದ ಟಿವಿ9 ಸ್ವೀಟ್ ಹೋಂ ಎಕ್ಸ್ಪೋ(Tv9 Sweet Home Real Estate Expo 2022) ಶುರುವಾಗ್ತಿದೆ. ಅಷ್ಟೇ ಅಲ್ಲ. ಎಕ್ಸ್ಪೋದಲ್ಲಿ ಭಾಗಿಯಾದವರು ಗೋಲ್ಡ್ ಗೆಲ್ಲುವ ಅದೃಷ್ಟ ಕೂಡ ಇದೆ. ಇಂದಿನಿಂದ 3 ದಿನಗಳ ಕಾಲ ನಡೆಯುವ ರಿಯಲ್‌ ಎಸ್ಟೇಟ್‌ ಎಕ್ಸ್ಪೋಗೆ ಬಂದು ಚಿನ್ನ ಗೆಲ್ಲಿ. ಸದ್ಯ ಎಕ್ಸ್ಪೋಗೆ ಸ್ಯಾಂಡಲ್ವುಡ್ ನಟ ರಿಷಭ್ ಶೆಟ್ಟಿ ಚಾಲನೆ ನೀಡಿದ್ದಾರೆ.

ಇಂದಿನಿಂದ ಮೂರು ದಿನ ಟಿವಿ9 ಸ್ವೀಟ್ ಹೋಮ್‌ ಎಕ್ಸ್‌ಪೋ
ಟಿವಿ9 ಪ್ರಸ್ತುತ ಪಡಿಸೋ ಟಿವಿ9 ಸ್ವೀಟ್ ಹೋಮ್‌ ಎಕ್ಸ್‌ಪೋ ಇಂದಿನಿಂದ ಶುರುವಾಗ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಎಕ್ಸ್ಪೋ ಶುರುವಾಗಿದೆ. ಪ್ರತೀ ಸಲ ಸಖತ್ ರೆಸ್ಪಾನ್ಸ್‌ ಮೇರೆಗೆ ಟಿವಿ9 12ನೇ ಬಾರಿಗೆ ಸ್ವೀಟ್‌ ಹೋಮ್‌ ರಿಯಲ್ ಎಸ್ಟೇಟ್‌ ಎಕ್ಸ್‌ಪೋ ಆಯೋಜಿಸಿದೆ. ಸ್ವೀಟ್ ಹೋಮ್‌ ರಿಯಲ್ ಎಸ್ಟೇಟ್‌ ಎಕ್ಸ್ ಪೋಗೆ ಬಂದು ನೀವು ಚಿನ್ನ ಗೆಲ್ಲಬಹುದು. ಇನ್ನು, ಟಿವಿ9 ಸ್ವೀಟ್ ಹೋಂ ಎಕ್ಸ್ಪೋಗೆ ಉಚಿತ ಪ್ರವೇಶ ಇರಲಿದ್ದು, ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಎಕ್ಸ್‌ಪೋ ಬಂದವರು ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದ್ರೆ ಚಿನ್ನದ ನಾಣ್ಯ ಗೆಲ್ಲುವ ಸುವರ್ಣವಕಾಶ ಇದೆ.

ಎಕ್ಸ್ಪೋದಲ್ಲಿ ನಿಮ್ಮ ಕನಸಿನ ಮನೆ ಖರೀದಿಗೆ ನೆರವಾಗಲು ಬೆಸ್ಟ್‌ ರೇಟ್‌ನಲ್ಲಿ ಸೈಟ್‌ ಪ್ರಾಜೆಕ್ಟ್‌ ಮಾಡ್ತಿರುವ ನೂರಾರು ಬಿಲ್ಡರ್ಸ್ ಇರಲಿದ್ದಾರೆ. ಹಣಕಾಸಿನ ಕೊರತೆ ಇದ್ರೆ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡುವ ಬ್ಯಾಂಕರ್ಸ್‌ ಕೂಡ ನಿಮಗಾಗಿ ಕಾಯುತ್ತಿರುತ್ತಾರೆ.

ಒಟ್ನಲ್ಲಿ, ಇಂದಿನಿಂದ ಟಿವಿ9 ಸ್ವೀಟ್‌ ಹೋಮ್‌ ರಿಯಲ್ ಎಸ್ಟೇಟ್‌ ಎಕ್ಸ್ಪೋ ನಡೆಯಲಿದೆ. ತಮಗಿಷ್ಟವಾದ ಮನೆ, ಸೈಟ್ ಗಳನ್ನ ನಿಖರವಾದ ಬೆಲೆಗೆ ಖರೀದಿ ಮಾಡಲು ಇದೊಂದು ಸುವರ್ಣವಾಕಾಶ. ಹೀಗಾಗಿ, ಫ್ರೀ ಮಾಡ್ಕೊಂಡು ಎಕ್ಸ್ಪೋಗೆ ಭೇಟಿ ಕೊಡಿ. ಚಿನ್ನ ಗೆಲ್ಲುವ ಗೆಲ್ಲುವ ಗೋಲ್ಡನ್ ಅಪಾರ್ಚುನಿಟಿಯನ್ನ ನಿಮ್ಮದಾಗಿಸಿಕೊಳ್ಳಿ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು


Follow us on

Related Stories

Most Read Stories

Click on your DTH Provider to Add TV9 Kannada