ಸಖೇದಾಶ್ಚರ್ಯದ ಸಂಗತಿ: ನಿಮಿಷಾಂಭ ದೇಗುಲ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬೆಂಗಳೂರಿನ ಬಿಎಂಡಬ್ಲ್ಯೂ ಕಾರು ಪತ್ತೆ!

ಸಖೇದಾಶ್ಚರ್ಯದ ಸಂಗತಿ: ನಿಮಿಷಾಂಭ ದೇಗುಲ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ  ಬೆಂಗಳೂರಿನ ಬಿಎಂಡಬ್ಲ್ಯೂ ಕಾರು ಪತ್ತೆ!
ನಿಮಿಷಾಂಭ ದೇಗುಲ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬೆಂಗಳೂರಿನ ಬಿಎಂಡಬ್ಲ್ಯೂ ಕಾರು ಪತ್ತೆ!

ಪೊಲೀಸರ ವಿಚಾರಣೆ ವೇಳೆ ಸಖೇದಾಶ್ಚರ್ಯದ ವಿಚಾರವೊಂದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯ ಕೃತ್ಯ ಅದಾಗಿತ್ತು ಎಂಬುದು ದೃಢಪಟ್ಟಿದೆ. ತಾಯಿಯ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಬೆಂಗಳೂರಿನ ವ್ಯಕ್ತಿ ಈ ಕೃತ್ಯವೆಸಗಿದ್ದರು.

TV9kannada Web Team

| Edited By: sadhu srinath

May 27, 2022 | 4:03 PM

ಮಂಡ್ಯ: ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಕಾವೇರಿ ನದಿಯಲ್ಲಿ ಐಷಾರಾಮಿ ಕಾರನ್ನು ಮುಳುಗಿಸಿ ಹೋಗಿದ್ದಾರೆ. ಆ ಕಾರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮೀಪವಿರುವ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ನದಿಯಿಂದ ಕಾರು ಹೊರಗೆ ತೆಗೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರ ವಿಚಾರಣೆ ವೇಳೆ ಸಖೇದಾಶ್ಚರ್ಯದ ವಿಚಾರವೊಂದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯ ಕೃತ್ಯ ಅದಾಗಿತ್ತು ಎಂಬುದು ದೃಢಪಟ್ಟಿದೆ. ತಾಯಿಯ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ಬೆಂಗಳೂರಿನ ವ್ಯಕ್ತಿ ಈ ಕೃತ್ಯವೆಸಗಿದ್ದರು. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಿವಾಸಿ ರೂಪೇಶ್ ಎಂಬುವವರೇ ಈ ಕೃತ್ಯವೆಸಗಿದ್ದವರು. ರೂಪೇಶ್ ಅವರು ಶ್ರೀರಂಗಪಟ್ಟಣಕ್ಕೆ ಬಂದು ನದಿಯಲ್ಲಿ ಕಾರು ಮುಳುಗಿಸಿ ವಾಪಸ್ಸು ತೆರಳಿದ್ದರು. ಕಾರು ಪತ್ತೆ ಬಳಿಕ ಮಾಲೀಕನನ್ನು ಪೊಲೀಸರು ಪಟ್ಟಣ ಠಾಣೆಗೆ ಕರೆಸಿದ್ದರು. ಈ ವೇಳೆ ರೂಪೇಶ್ ಮನಬಂದಂತೆ ಹೇಳಿಕೆ ನೀಡುತ್ತಿದ್ದರು. ಹಾಗಾಗಿ ರೂಪೇಶ್ ಮಾನಸಿಕ ಖಿನ್ನತೆಗೆ ಒಳಗಾಗಿರೋ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳ್ತಿದ್ದ ಅಪ್ಪ, ಮಗ ಸಾವು

ಕೊಪ್ಪಳ: ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳ್ತಿದ್ದ ಅಪ್ಪ, ಮಗ ಅಸುನೀಗಿದ್ದಾರೆ. ಹುಲ್ಲೇಶಪ್ಪ(38) ಮತ್ತು ಮಂಜುನಾಥ್​(10) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಆದರೆ ಪತ್ನಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಹಾಪುರ ಗ್ರಾಮದ ಹುಲ್ಲೇಶಪ್ಪ ಕುಟುಂಬವು ದೇವಸ್ಥಾನದಿಂದ ಊರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮುನಿರಾಬಾದ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Also Read:

ಗುಬ್ಬಿ ಜೆಡಿಎಸ್ ಶಾಸಕ​​ಗೆ ಹೆಚ್​​ಡಿ ಕುಮಾರಸ್ವಾಮಿ ಫೋನ್ ಕಾಲ್, ಮನವೊಲಿಕೆ ಯತ್ನ: ಆದರೆ ಮಾರ್ಮಿಕ ಪ್ರಶ್ನೆ ಎತ್ತಿದ ಶ್ರೀನಿವಾಸ್

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಟ ರಿಷಭ್ ಶೆಟ್ಟಿ ಚಾಲನೆ; 3 ದಿನಗಳ ಕಾಲ ನಡೆಯುವ ಎಕ್ಸ್ಪೋಗೆ ಭೇಟಿ ಕೊಟ್ಟು ಚಿನ್ನ ಗೆಲ್ಲಿ

Follow us on

Related Stories

Most Read Stories

Click on your DTH Provider to Add TV9 Kannada