ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ವೇಣುಗೋಪಾಲ್ ಅಕ್ರಮವಾಗಿ 28 ಕೋಟಿ ಮೊತ್ತದ ಬಿಲ್‌ಗೆ ಅನುಮೋದನೆ ನೀಡಿದ್ದಾರೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ವೇಣುಗೋಪಾಲ್ ಅಕ್ರಮವಾಗಿ 28 ಕೋಟಿ ಮೊತ್ತದ ಬಿಲ್‌ಗೆ ಅನುಮೋದನೆ ನೀಡಿದ್ದಾರೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಶಿಕ್ಷಕೇತರ ಸಂಘ, ಸಂಶೋಧನಾ ವಿದ್ಯಾರ್ಥಿಗಳ ಸಂಘದಿಂದ ಧರಣಿ ನಡೆಯುತ್ತಿದೆ. ಬೆಂಗಳೂರು ವಿವಿಯ ಫೈನಾನ್ಸ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಹಣಕಾಸು ಕಚೇರಿಯತಲ್ಲಿದ್ದ ಅಧಿಕಾರಿ ಜಯಲಕ್ಷ್ಮೀರನ್ನು ಕಚೇರಿಯಿಂದ ಹೊರಗೆ ಕಳಿಸಿ ಪ್ರತಿಭಟನೆ ಮಾಡಿದ್ದಾರೆ. ಹಣಕಾಸು ಅಧಿಕಾರಿ ವಿವಿ ಬಿಟ್ಟು ತೊಲಗಲಿ ಎಂದು ಘೋಷಣೆ ಕೂಗಿದ್ದಾರೆ. ಹಣಕಾಸು ಅಧಿಕಾರಿ ಕಚೇರಿಗೆ ವಿದ್ಯಾರ್ಥಿಗಳು ಬೀಗ ಹಾಕಿಸಿದ್ದಾರೆ. ಬಳಿಕ ನಮ್ಮ ಪರವಾಗಿ ಧ್ವನಿ ಎತ್ತಿ ಅಂತ ಸಿಂಡಿಕೇಟ್ ಸದಸ್ಯರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿ: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ‘ಹೆಲ್ಮೆಟ್’ ಟ್ವೀಟ್ ವೈರಲ್
ನಿನ್ನೆ (ಮೇ 26) ಸುಮಾರು ಬರೋಬ್ಬರಿ 28 ಕೋಟಿ ಮೊತ್ತದ ಬಿಲ್ ಗೆ ವಿಸಿ ವೇಣುಗೋಪಾಲ್ ಅನುಮೋದನೆ ಮಾಡಿಕೊಂಡಿದ್ದಾರೆ. ಕಚೇರಿ ಅವಧಿ ಮುಗಿದ ಬಳಿಕವೂ ಉಪ ಕುಲಪತಿಗಳು ಅನುಮೋದನೆ ಪಡೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೇ ಸಿಂಡಿಕೇಟ್ ಸಭೆ ಮಾಡದೆ ಅನುಮೋದನೆ ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಜೂನ್ 11ಕ್ಕೆ ವಿಸಿ ಪ್ರೊ.ವೇಣುಗೋಪಾಲ್ ಅವಧಿ ಅಂತ್ಯವಾಗಲಿದೆ. ಈ ವೇಳೆ ಇಷ್ಟು ದೊಡ್ಡ ಮೊತ್ತ ಅನುಮೋದನೆ ಮಾಡಿಕೊಂಡಿರೋದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇದನ್ನು ಓದಿ: ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳು ಅದೆಷ್ಟು ಕಡಿಮೆ ಇವೆ ಗೊತ್ತೆ?
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Fri, 27 May 22