ದಾವಣಗೆರೆ, ಸೆ.21: ನಗರದ ಶಾಮನೂರಿನ ಜೆಎಚ್ ಪಟೇಲ್ ಬಡಾವಣೆ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು(ಶನಿವಾರ) ವಿದ್ಯಾರ್ಥಿಗಳು ದಾವಣಗೆರೆ(Davanagere) ನಗರದ ಎಂಸಿಸಿ ಎ ಬ್ಲಾಕ್ನಲ್ಲಿ ಇರುವ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಹಾಸ್ಟೆಲ್ ವಾರ್ಡನ್ ಬಗ್ಗೆ ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿ, ‘ನೀರಲ್ಲಿ ಹುಳು ಬಿದ್ದ ವಿಚಾರ ಹೇಳಿದ್ರೆ ಚಿಕನ್, ಮಟನ್ ತಿಂತೀರಾ ನಿಮಗೆ ಹುಳು ಯಾವ ಲೆಕ್ಕ ಎಂದು ವಾರ್ಡನ್ ಕೇಳುತ್ತಾರೆ.
ಅಷ್ಟೇ ಅಲ್ಲ, ವಿದ್ಯಾರ್ಥಿನಿಯರ ನಡತೆ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಇದರ ಜೊತೆಗೆ ಮೂರು ತಿಂಗಳಿಂದ ಕುಡಿಯುವ ನೀರು ಹಾಗೂ ಬಳಸಲು ನೀರಿಲ್ಲ. ಊಟದ ವ್ಯವಸ್ಥೆ ಕೂಡ ಸರಿಯಿಲ್ಲ ಎಂದು ಆರೋಪಿಸಿದರು. ಇನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಸುಡುಬಿಸಿಲಿನಲ್ಲಿ ಗಂಟೆಗಳಿಂದ ಹೋರಾಟ ಮಾಡುತ್ತಿದ್ದರೂ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಸತಿ ನಿಲಯದ ವಾರ್ಡನ್ನಿಂದ ಸ್ವಚ್ಚತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಕೊಲೆ ಮಾಡುವುದಾಗಿ ಬೆದರಿಕೆ
ಕೊಪ್ಪಳ: ಕಾಲೇಜಿನ ಶುಲ್ಕದಲ್ಲಿ ಹೆಚ್ಚಳ ಖಂಡಿಸಿ ಇಂದು ಕಾನೂನು ಪದವೀಧರ ವಿದ್ಯಾರ್ಥಿಗಳು ಕೊಪ್ಪಳ ನಗರದ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಈ ಮೊದಲು ವಾರ್ಷಿಕ 22 ಸಾವಿರ ಶುಲ್ಕವಿತ್ತು. ಆದರೆ ಈ ವರ್ಷ ದಿಢೀರನೆ 8 ಸಾವಿರ ರೂ. ಹೆಚ್ಚಳ ಮಾಡಿ, 30 ಸಾವಿರಕ್ಕೆ ತಂದಿದ್ದಾರೆ. ಈ ಹಿನ್ನಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಗಿಳಿದರು. ಈ ವೇಳೆ ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Sat, 21 September 24