ದಾವಣಗೆರೆ, ಸೆ.25: ಹೆರಿಗೆ ವೇಳೆ ಮಗು ಬದುಕಿ ತಾಯಿ ಸಾವನ್ನಪ್ಪಿದ ದಾರುಣ ಘಟನೆ ಜಗಳೂರು(Jagaluru) ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ತೊರೆಸಾಲು ಸಿದ್ದಿಹಳ್ಳಿ ಗ್ರಾಮದ ಮಹಿಳೆ ಸುಚಿತ್ರಾ (23) ಮೃತ ರ್ದುದೈವಿ. ಇನ್ನು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ಸಂಬಂಧಿಕರು, ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ಸೆ.15 ರಂದು ಭಾನುವಾರ ಹೆರಿಗೆಗಾಗಿ ಜಗಳೂರು ಆಸ್ಪತ್ರೆಗೆ ಬಂದಿದ್ದರು. ಅದರಂತೆ ಇಂದು(ಬುಧವಾರ) ಹೆರಿಗೆ ವಿಳಂಭವಾಗಿ ಮಹಿಳೆ ತೀವ್ರ ರಕ್ತ ಶ್ರಾವದಿಂದ ಬಳಲಿದ್ದಾರೆ. ಈ ಹಿನ್ನಲೆ ವೈದ್ಯರು ಅಲ್ಲಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಮಗು ಬದುಕಿದ್ದು, ತಾಯಿ ಕೊನೆಯುಸಿರೆಳೆದಿದ್ದಾರೆ. ಜಗಳೂರು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿಳಂಬದಿಂದ ಸುಚಿತ್ರಾ ಸಾವಾಗಿದೆ ಎಂದು ಸಂಬಂಧಿಕರು ಆರೋಪಿಸಿ, ಜಗಳೂರು ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ. ಇನ್ನು ಮಹಿಳೆ ಸಂಬಂಧಿಕರು ಹಾಗೂ ದಲಿತ ಸಂಘಟನೆಗಳ ಪ್ರಮುಖರು ಸೇರಿ ಜಗಳೂರು ತಾಲೂಕಾ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಹೆರಿಗೆ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ ವೈದ್ಯ: ಕುಟುಂಬಸ್ಥರಿಂದ ಪ್ರತಿಭಟನೆ
ರಾಮನಗರ: ಕನಕಪುರ ರಸ್ತೆಯ ಸೋಮನಹಳ್ಳಿ ಗೇಟ್ ಬಳಿ ರಸ್ತೆ ಕ್ರಾಸ್ ಮಾಡುವಾಗ ಎರಡು ಬೈಕ್ ಮಧ್ಯೆ ಅಪಘಾತವಾಗಿದ್ದು, ಸ್ಕೂಟಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಹಿಳೆ ಸ್ಥಿತಿ ಗಂಭೀರವಾಗಿದೆ. ಪತ್ನಿ ಜಯಂತಿ ಬಾಯಿ ಕೆಲಸಕ್ಕೆ ಬಿಡಲು ಪತಿ ತೆರಳಿದ್ದ. ಈ ವೇಳೆ ಹಿಮಾಲಯ ಬೈಕ್ಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಿಮಾಲಯ ಬೈಕ್ ಸವಾರ ಹೆಲ್ಮೆಟ್ ಹಾಕಿದ್ದ ಪರಿಣಾಮ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಜಯಂತಿ ಬಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Wed, 25 September 24