ದಾವಣಗೆರೆ: ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ ಶುರುವಾಗಿದೆ. ಈರುಳ್ಳಿ ಕಟಾವು ಮಾಡಿ ತಿಪ್ಪೆಗೆ ಎಸೆಯುವಂತ ಪರಿಸ್ಥಿತಿ ರೈತರಿಗೆ ಬಂದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಲೋಲೇಶ್ವರ ಸೇರಿದಂತೆ ಸುತ್ತಮತ್ತ 10 ಗ್ರಾಮಗಳ ರೈತರಿಗೆ ಸಂಕಷ್ಟ ಎದುರಾಗಿದೆ.
ತಾವು ಬೆಳೆದ ಈರುಳ್ಳಿ ಬೆಳೆಯಲ್ಲಿ ಕೊಳೆ ರೋಗ ಕಂಡು ಬರುತ್ತಿದೆ. ಲೋಲೇಶ್ವರ ಗ್ರಾಮದ ಬಸವರಾಜಪ್ಪ, ರಾಜಪ್ಪಗೌಡ್ರು, ಪಂಪಾಪತಿ ಸೇರಿದಂತೆ ಹತ್ತಾರು ರೈತರು ಸುಮಾರು 1,500 ಎಕರೆ ಪ್ರದೇಶದಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದಾರೆ. ಬೆಳೆ ಕಟಾವು ಮಾಡಿ ತಿಪ್ಪೆಗೆ ಎಸೆದಿದ್ದಾರೆ. ಅಲ್ಪ ಸ್ವಲ್ಪ ಉಳಿದ ಗುಣಮಟ್ಟದ ಈರುಳ್ಳಿ ಸಹ ಸೂಕ್ತ ಬೆಲೆ ಇಲ್ಲದ ಕಾರಣ. ಮಾರುಕಟ್ಟೆ ತೆಗೆದುಕೊಂದು ಹೋಗಲು ರೈತರು ಹಿಂದೇಟು ಹಾಕಿದ್ದಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದು ರೈತರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಆಗ್ರಹಿಸಿದ್ದಾರೆ.
ಏನಿದು ಕೊಳೆರೋಗ?
ಕೊಳೆರೋಗ ಒಂದು ಮಾದರಿಯ ಶಿಲೀಂದ್ರ ರೋಗ. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಈರುಳ್ಳಿ ಬೆಳೆಗೆ ಈ ರೋಗ ಬರುತ್ತೆ. ಇನ್ನು ಸಾಮಾನ್ಯವಾಗಿ ಪ್ಯುಸೇರಿಯಂ ಕೊಳೆರೋಗ, ಫೈಥಿಯಂ ಮತ್ತು ಆಲ್ಟರ್ನೇರಿಯಾ ಕೊಳೆರೋಗಗಳು ಈರುಳ್ಳಿಗೆ ಬರುತ್ತವೆ. ಈರುಳ್ಳಿ ಬೆಳೆಗಳು ಕೊಳೆತು ಹೋಗುತ್ತವೆ.
ಇದನ್ನೂ ಓದಿ: ಬಾಗಲಕೋಟೆ: ರೈತರಲ್ಲಿ ಆತಂಕ ಸೃಷ್ಟಿಸಿದ ಮೋಡ ಕವಿದ ವಾತಾವರಣ; ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ
Published On - 9:26 am, Fri, 17 September 21