ಪೆಟ್ರೋಲ್ ಬಗ್ಗೆ ಕೇಳಿ ನನ್ನನ್ನು ಟ್ರೋಲ್ ಮಾಡಬೇಡಿ: ಸಂಸದ ಜಿ ಎಂ ಸಿದ್ದೇಶ್ವರ ಸಿಡಿಮಿಡಿ
ಪದೇಪದೆ ಪೆಟ್ರೋಲ್ ಬಗ್ಗೆ ಕೇಳಿ ಟ್ರೋಲ್ ಮಾಡಬೇಡಿ. ನಮ್ಮ ಸಾಧನೆಗಳ ಬಗ್ಗೆ ಕೇಳಿ ಎಂದು ಅವರು ಮನವಿಯನ್ನೂ ಮಾಡಿದ್ದಾರೆ.
ದಾವಣಗೆರೆ: ಪೆಟ್ರೋಲ್ ಬಗ್ಗೆ ಕೇಳಿ ಕೇಳಿ ನನ್ನ ಟ್ರೋಲ್ ಮಾಡಬೇಡಿ ಎಂದು ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಸಿಡಿಮಿಡಿಗೊಂಡಿದ್ದಾರೆ. ಹಣಕಾಸು ಸಚಿವರ ಜಿಎಸ್ಟಿ ಸಭೆ ನನಗೆ ಗೊತ್ತೇ ಇಲ್ಲ. ಅದರಲ್ಲೂ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವುದು ಗೊತ್ತಿಲ್ಲ. ಎಲ್ಲಾ ರಾಜ್ಯಗಳು ಒಪ್ಪಿದರೆ ಈ ಕೆಲಸ ಆಗಬಹುದು. ಆದರೆ ಕೊವಿಡ್ ಇರುವುದರಿಂದ ಈ ಕೆಲಸ ಅಸಾಧ್ಯ. ಪದೇಪದೆ ಪೆಟ್ರೋಲ್ ಬಗ್ಗೆ ಕೇಳಿ ಟ್ರೋಲ್ ಮಾಡಬೇಡಿ. ನಮ್ಮ ಸಾಧನೆಗಳ ಬಗ್ಗೆ ಕೇಳಿ ಎಂದು ಅವರು ಮನವಿಯನ್ನೂ ಮಾಡಿದ್ದಾರೆ.
ಈಹಿಂದೆ ಪೆಟ್ರೋಲ್ ಕೊಡಿಸುವುದಾಗಿ ತಿಳಿಸಿದ್ದ ಸಂಸದ ಪದೇಪದೆ ಪೆಟ್ರೋಲ್ ದರ ಏರಿಕೆಯ ಬಗ್ಗೆ ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಜಿ.ಎಂ.ಸಿದ್ದೇಶ್ವರ್ ಆಗಸ್ಟ್ 8ರಂದು ಮಾಧ್ಯಮದವರಿಗೆ ಕೈಮುಗಿದು ಮನವಿ ಮಾಡಿದ್ದರು. ಪೆಟ್ರೋಲ್ ಬೆಲೆ ಅಂತರಾಷ್ಟ್ರೀಯ ವಿಚಾರ. ಸಾರ್ವಜನಿಕರು ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ಆಕ್ರೋಶಗೊಂಡಿಲ್ಲ. ಪೆಟ್ರೋಲ್ ಬೆಲೆ ಹೆಚ್ಚಳದಿಂದ (Petrol Price Hike) ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಕೊರೊನಾ ಸಂಕಷ್ಟ ಕಾಲ ಮುಗಿದ ಮೇಲೆ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತದೆ. ಬರೀ ಪೆಟ್ರೋಲ್ ಬಗ್ಗೆ ಕೇಳಿ ನನ್ನ ಹೇಳಿಕೆ ವೈರಲ್ ಆಗುವಂತೆ ಮಾಡಬೇಡಿ. ನಿಮಗೆ ಯಾರಿಗಾದ್ರು ಪೆಟ್ರೋಲ್ ಕಷ್ಟ ಇದ್ರೆ ವೈಯಕ್ತಿಕವಾಗಿ ನಾನೇ ಕೊಡಿಬಹುದು ಎಂದು ಅವರು ವಿನಂತಿಯನ್ನೂ ಸಹ ಮಾಡಿಕೊಂಡಿದ್ದರು.
ಇತ್ತೀಚಿಗೆ ಪೆಟ್ರೋಲ್ ಬೆಲೆ ಹೆಚ್ಚುತ್ತಿರುವ ಕುರಿತು ಬಿಜೆಪಿ ಸಂಸದರಾದ ಅವರಿಗೆ ಸಹಜವಾಗಿಯೇ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಆದರೆ ಪೆಟ್ರೋಲ್ ಬೆಲೆ ಹೆಚ್ಚಳದ ಕುರಿತು ಉತ್ತರಿಸುವುದು ಪೇಚಿಗೀಡು ಮಾಡಬಹುದು ಅಂತನಿಸಿ ಸಂಸದ ಜಿ ಎಂ ಸಿದ್ದೇಶ್ವರ ಅವರು ನುಣುಚಿಕೊಳ್ಳಲು ಯತ್ನಿಸಿದರು. ಜತೆಗೆ ಪತ್ರಕರ್ತರಿಗೆ ಪೆಟ್ರೋಲ್ ಅಗತ್ಯವಿದ್ದಲ್ಲಿ ತಾವೇ ಸ್ವತಃ ಕೊಡಿಸುವುದಾಗಿಯೂ ಹೇಳಿದ್ದರು.
ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಸೇರಿ ಸಂಸತ್ ಅಧಿವೇಶನ ನಡೆಸಲು ಬಿಡುತ್ತಿಲ್ಲ. ಸಂಸತ್ ಅಧಿವೇಶನದಲ್ಲಿ ದೇಶದ ವಿಚಾರ ಚರ್ಚೆ ಆಗಬೇಕು. ಆದರೆ ವಿಪಕ್ಷಗಳು ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಕೃಷಿ ಕಾಯ್ದೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಆಗಲಿ. ಬೇಕಿದ್ದ ಕೃಷಿ ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲ ಬದಲಾವಣೆ ತರಬಹುದು. ಆದರೆ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಸಹ ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದರು.
ಇದನ್ನೂ ಓದಿ:
ನನ್ನ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿದೆ: ಸಂಸದ ಜಿ ಎಂ ಸಿದ್ದೇಶ್ವರ
Mount Everest Climbing: ಮೌಂಟ್ ಎವರೆಸ್ಟ್ ಪರ್ವತಾ ರೋಹಣಕ್ಕೆ ದಾವಣಗೆರೆ ಯುವಕ ಆಯ್ಕೆ, ಹಣಕಾಸು ನೆರವಿಗೆ ಮನವಿ
(MP GM Siddeshwara requested do not ask about Petrol and do not troll him)