ದಾವಣಗೆರೆ: ಜಿಲ್ಲೆ ಚನ್ನಗಿರಿ ತಾಲೂಕಿನ ಮಲ್ಲಿಗೆರೆಯ ಉಮೇಶ್(24) ಎಂಬ ಯುವಕ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಆಯ್ಕೆ ಆಗಿದ್ದಾರೆ. ಉಮೇಶ್ 2019ರಲ್ಲಿ ಮೊದಲ ಸುತ್ತಿನಲ್ಲೇ 18,300 ಅಡಿ ಶಿಖರವೇರಿ ಮೊದಲ ಸುತ್ತಿನಲ್ಲೇ ಗೆದ್ದಿದ್ದರು. ಸದ್ಯ ಈಗ ಉಮೇಶ್ 2ನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.
ಇಂಡಿಯನ್ ಪರ್ವತಾರೋಹಣ ಸಂಘಟನೆಯಿಂದ ನಡೆಯುವ ಪರ್ವತಾರೋಹಣಕ್ಕೆ ಆಯ್ಕೆಯಾಗಿರುವ ಉಮೇಶ್ ಸಂತಸ ವ್ಯಕ್ತಪಡಿಸಿದ್ದು ಈ ವೇಳೆ ಆರ್ಥಿಕ ಸಹಾಯ ಕೇಳಿಕೊಂಡಿದ್ದಾರೆ. ಮೊದಲ ಸುತ್ತಿಗೆ ಹೋಗುವಾಗ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ದುಡ್ಡು ಕುಡಿಸಿಕೊಂಡು ಹೋಗಿದ್ದೆ. ಆದ್ರೆ ಈಗ ಎರಡನೇ ಸುತ್ತಿಗೆ ಹೋಗಲು 60 ರಿಂದ 70 ಸಾವಿರ ರೂಪಾಯಿ ಖರ್ಚಾಗುವ ಸಾದ್ಯತೆ ಇದೆ. ಹೀಗಾಗಿ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದೇನೆ. ಆಸಕ್ತರು ಸಹಾಯ ಮಾಡಿ ಎಂದು ಉಮೇಶ್ ಮನವಿ ಮಾಡಿಕೊಂಡಿದ್ದಾರೆ.
ಸಹಾಯ ಮಾಡುವವರಿಗಾಗಿ ಮಾಹಿತಿ
ಇದನ್ನೂ ಓದಿ: ಬಿಡದಿ: ಈಗಲ್ಟನ್ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ