ದಾವಣಗೆರೆ, ಡಿ.27: ಮಕ್ಕಳಿಗೆ ಪಾಠ ಮಾಡುವಾಗ ರಾಷ್ಟ್ರ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಸರ್ಕಾರಿ ಕಾಲೇಜು ಉಪನ್ಯಾಸಕನ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ. ಹರಿಹರ(Harihara) ತಾಲೂಕಿನ ಮಲೇಬೆನ್ನೂರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ಎಂ ಬಿ ಎನ್ನುವವರ ಮೇಲೆ ವಿದ್ಯಾರ್ಥಿಗಳ ಪಾಲಕರು ದೂರು ದಾಖಲಿಸಿದ್ದರು. ಪಿಯು ವಿಜ್ಞಾನ ವಿಭಾಗದ ಮಕ್ಕಳಿಗೆ ‘ವೋಟರ್’ ಎಂಬ ಪಾಠ ಮಾಡುವಾಗ ಸಂವಿಧಾನ, ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಆಗಿ ನಿಂದನೆಯ ಜೊತೆಗೆ ಮಕ್ಕಳಿಗೆ ಬೇರೆ ಬೇರೆ ಕೋಮುಗಳೆಂದು ಪಾಠ ಮಾಡಿದ್ದರಂತೆ.
ಇನ್ನು ರಾಷ್ಟ್ರ ನಾಯಕರ ಬಗ್ಗೆ ಅವಹೇಳನಕಾರಿ ಪಾಠ ಕೇಳಿದ ವಿದ್ಯಾರ್ಥಿಗಳು, ಮನೆಗೆ ಬಂದು ಪೋಷಕರಿಗೆ ಹೇಳಿದ್ದಾರೆ. ಈ ಹಿನ್ನಲೆ ಆಕ್ರೋಶಗೊಂಡ ಪಾಲಕರಲ್ಲಿ ಒಬ್ಬರಾದ ಬಿ.ಸೌಖತ್ ಅಲಿ ಎಂಬುವವರು ‘ಉಪನ್ಯಾಸಕ ಮಲ್ಲಿಕಾರ್ಜುನ್ ಅವರ ಪಾಠ ಕೇಳಿ ಮನೆಗೆ ಬಂದ ನನ್ನ ಮಗ, ಘಟನೆ ಕುರಿತು ಹೇಳಿದ್ದ.
ಇದನ್ನೂ ಓದಿ:ಮುಸ್ಲಿಂ ಮಹಿಳೆಯರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್
ಈ ಕುರಿತು ಇತರ ವಿದ್ಯಾರ್ಥಿಗಳನ್ನು ಸಹ ವಿಚಾರಿಸಿದಾಗ ಘಟನೆ ನಡೆದಿದ್ದು ನಿಜವಾಗಿದೆ. ಈ ಹಿನ್ನಲೆ ದೂರು ನೀಡಲಾಗಿದೆ. ಈ ಮೂಲಕ ಇಂತಹ ಕೋಮು ಭಾವನೆ ಕೇರಳಿಸುವ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಐಪಿಸಿ ಕಲಂ 505(2) ಅಡಿ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಮಲೇಬೆನ್ನೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Wed, 27 December 23