ದಾವಣಗೆರೆ: ಮದುವೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ; ಜೆಡಿಎಸ್ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ವಿರುದ್ಧ ಆರೋಪ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಊಟ ಮಾಡುತ್ತಿದ್ದ ದಿಟೂರು ನಿರಂಜನನ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರಂತೆ.
ದಾವಣಗೆರೆ: ಮದುವೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಜೆಡಿಎಸ್ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ವಿರುದ್ಧ ಆರೋಪ ಕೇಳಿಬಂದಿದೆ. ಗುರುಪೀಠದ ಕಲ್ಯಾಣ ಮಂಟಪದಲ್ಲಿ ನಿನ್ನೆ (ಡಿಸೆಂಬರ್ 8) ರಾತ್ರಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಊಟ ಮಾಡುತ್ತಿದ್ದ ದಿಟೂರು ನಿರಂಜನನ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರಂತೆ. ಕಿವಿ, ಎದೆ ನೋವಿನಿಂದ ನಿರಂಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲೆ ಆರೋಪಿ ಬಂಧಿನ ತುಮಕೂರು: ಬಿ.ಕೆ.ಹಳ್ಳಿ ಬಳಿ ಪ್ರಸನ್ನ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರವಿಕುಮಾರ್ನ(35) ಪೊಲೀಸರು ಬಂಧಿಸಿದ್ದಾರೆ. ತಿರುಮಣಿ ಠಾಣೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಡಿಸೆಂಬರ್ 7ರಂದು ಕೊಲೆ ನಡೆದಿತ್ತು. ಪ್ರಸನ್ನ ಕುಮಾರ್ ಅಣ್ಣನ ಮಗಳು ಮೌನಿಕಾಳನ್ನ ರವಿಕುಮಾರ್ ಮದುವೆಯಾಗಿದ್ದ. ಮೌನಿಕಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಪ್ರಸನ್ನ ವಾಪಸ್ ತವರು ಮನೆಗೆ ಕರೆಸಿಕೊಂಡಿದ್ದ. ಕೋರ್ಟ್ನಲ್ಲಿ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿತ್ತು. ಇದಕ್ಕೆ ಕಾರಣ ಪ್ರಸನ್ನ ಎಂದು ಕೊಲೆ ಮಾಡಿದ್ದ ರವಿಕುಮಾರ್ ಕೊಲೆ ಮಾಡಿದ್ದಾನೆ. ಕಳೆದ ಮಂಗಳವಾರ ಸಂಜೆ ಈ ಘಟನೆ ನಡೆದಿತ್ತು.
ಪೂಜೆ ಮಾಡುವ ನೆಪದಲ್ಲಿ ವಂಚನೆ ಪೂಜೆ ಮಾಡುವ ನೆಪದಲ್ಲಿ ಚಿನ್ನ ಪಡೆದು ವಂಚನೆ ಮಾಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪೊಲೀಸರು ಬಂಡೆಪ್ಪ, ಭೀಮರಾವ್, ಗಣೇಶ ಶಾಸ್ತ್ರಿ ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 6.80 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ವಂಚಕರು ದೇವಿ ಪೂಜೆ ನೆಪದಲ್ಲಿ ಚಿನ್ನಾಭರಣ ಪಡೆಯುತ್ತಿದ್ದರು. ಚಳ್ಳಕೆರೆಯ ಓರ್ವ ಯುವತಿಗೆ ನಂಬಿಸಿ ಚಿನ್ನಾಭರಣ ದೋಚಿದ್ದರು. ಉದ್ಯೋಗ, ಶುಭ ಯೋಗ, ಕಂಕಣ ಭಾಗ್ಯದ ಬಗ್ಗೆ ನಂಬಿಕೆ ಹುಟ್ಟಿಸಿ ವಂಚನೆ ಮಾಡಿದ್ದರು. ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಸೆಳೆಯುತ್ತಿದ್ದರು. ಸದ್ಯ ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ
ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡರಾ ಮೈಸೂರಿನ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್!
ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಕೇಂದ್ರ ಒಪ್ಪಿಗೆ; ಪ್ರತಿಭಟನೆ ಅಂತ್ಯಗೊಳಿಸುವ ಬಗ್ಗೆ ಸಂಜೆ ನಿರ್ಧಾರ ಸಾಧ್ಯತೆ