Bharat Bandh: ನಾನು ಚಡ್ಡಿ ಹಾಕುವಾಗ 50 ಪೈಸೆಗೆ ಲೀಟರ್​ ಪೆಟ್ರೋಲ್ ಸಿಗ್ತಿತ್ತು: ಪ್ರತಿಭಟನೆ ವಿರುದ್ಧ ಸಂಸದ ಸಿದ್ದೇಶ್ವರ್ ಉಡಾಫೆ ಮಾತು

| Updated By: ಸಾಧು ಶ್ರೀನಾಥ್​

Updated on: Sep 27, 2021 | 12:14 PM

GM Siddeshwar: ದಾವಣಗೆರೆಯಲ್ಲಿ ಸುದ್ದಿಗಾರರು ಬೆಲೆಯೇರಿಕೆ ವಿರೋಧಿಸಿ ನಡೆದಿರುವ ಭಾರತ್ ಬಂದ್​ ಬಗ್ಗೆ ಕೇಳಿದಾಗ ಸಂಸದ ಸಿದ್ದೇಶ್ವರ ಅವರು ಕಾಲ ಬದಲಾದಂತೆ ವಸ್ತುಗಳ ಬೆಲೆ ಸಹ ಬದಲಾಗುತ್ತದೆ. ನಾವು ಕೂಡಾ ರೈತರ ಕಲ್ಯಾಣಕ್ಕೆ ಹತ್ತಾರು ಯೋಜನೆ ರೂಪಿಸಿದ್ದೇವೆ. ರೈತರು ಬಂದ್ ಮಾಡುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದರು.

Bharat Bandh: ನಾನು ಚಡ್ಡಿ ಹಾಕುವಾಗ 50 ಪೈಸೆಗೆ ಲೀಟರ್​ ಪೆಟ್ರೋಲ್ ಸಿಗ್ತಿತ್ತು: ಪ್ರತಿಭಟನೆ ವಿರುದ್ಧ ಸಂಸದ ಸಿದ್ದೇಶ್ವರ್ ಉಡಾಫೆ ಮಾತು
ಸಂಸದ ಜಿಎಂ ಸಿದ್ದೇಶ್ವರ (ಸಂಗ್ರಹ ಚಿತ್ರ)
Follow us on

ದಾವಣಗೆರೆ: ಒಂದೆಡೆ ಇಡೀ ದೇಶದಲ್ಲಿ ರೈತರು ಕೇಂದ್ರ ಸರ್ಕಾರದ ರೈತ ನೀತಿಗಳನ್ನು ವಿರೋಧಿಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ರಾಜ್ಯದ ಬಿಜೆಪಿ ಸಂಸದರೊಬ್ಬರು ರೈತರ ಪ್ರತಿಭಟನೆಯನ್ನು ಟೀಕಿಸುವ ಭರದಲ್ಲಿ ಸಂವೇದನೆ ಕಳೆದುಕೊಂಡು ಉಡಾಫೆಯಾಗಿ ಮಾತನಾಡಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸಂಸದ ಸಿದ್ದೇಶ್ವರ್ ಉಡಾಫೆ ಮಾತನಾಡಿದ್ದು ‘ನಾನು ಚಡ್ಡಿ ಹಾಕುವಾಗ 30 ಕ್ವಿಂಟಾಲ್ ಗೋಧಿ ಜೋಳ ಸಿಗ್ತಿತ್ತು. ಐವತ್ತು ಪೈಸೆಗೆ ಕೂಲಿ ಕೆಲಸಕ್ಕೆ ಜನರು ಬರುತ್ತಿದ್ದರು. ಐವತ್ತು ಪೈಸೆಗೆ ಒಂದು ಲೀಟರ್​​ ಪೆಟ್ರೋಲ್ ಕೂಡ ಸಿಗುತ್ತಿತ್ತು ಎಂದು ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ್ ಬೆಲೆ ಏರಿಕೆಗೆ ಸಮರ್ಥನೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರು ಬೆಲೆಯೇರಿಕೆ ವಿರೋಧಿಸಿ ನಡೆದಿರುವ ಭಾರತ್ ಬಂದ್​ ಬಗ್ಗೆ ಕೇಳಿದಾಗ ಸಂಸದ ಸಿದ್ದೇಶ್ವರ ಅವರು ಕಾಲ ಬದಲಾದಂತೆ ವಸ್ತುಗಳ ಬೆಲೆ ಸಹ ಬದಲಾಗುತ್ತದೆ. ನಾವು ಕೂಡಾ ರೈತರ ಕಲ್ಯಾಣಕ್ಕೆ ಹತ್ತಾರು ಯೋಜನೆ ರೂಪಿಸಿದ್ದೇವೆ. ರೈತರು ಬಂದ್ ಮಾಡುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದರು. ನಿರ್ದಿಷ್ಟವಾಗಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೇಳುತ್ತಿದ್ದಂತೆ ಸಿದ್ದೇಶ್ವರ ಸ್ಥಳದಿಂದ ಕಾಲು ಕಿತ್ತರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಜೊತೆಗೆ ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದ ಪ್ರಶ್ನೆಗೆ ನಗುತ್ತಲೇ ಇದ್ದ ಸಂಸದ ಸಿದ್ದೇಶ್ವರ ಇದ್ದಕ್ಕಿಂತೆ ಸ್ಥಳದಿಂದ ಕಣ್ಮರೆಯಾದರು.

Also Read:
Bharat Bandh: ಭಾರತ್ ಬಂದ್ ದಿನ ನಡೆಯಬೇಕಿದ್ದ ಬೆಂಗಳೂರು ನಗರ ವಿವಿಯ ಎಲ್ಲ ಪರೀಕ್ಷೆ ಮುಂದೂಡಿಕೆ
Also Read:
Bharat Bandh Live: ಕೃಷಿ ಕಾಯ್ದೆ- ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಏನಿದೆ ಪರಿಸ್ಥಿತಿ? ಇಲ್ಲಿದೆ ವಿವರ

(bjp mp GM Siddeshwar on bharat bandh in davangere)

Published On - 12:08 pm, Mon, 27 September 21