ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!

26 ವರ್ಷದ ಯುವ ಬಾಡಿಬಿಲ್ಡರ್​ ಮನೆ ಮುಂದೆ ಕುಸಿದು ಬಿದ್ದು ಹೃದಯಾಘಾತದಿಂದ ಕೊನೆಯುಸಿರೆಳೆದಿರುವಂತಹ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಬಾಡಿಬಿಲ್ಡರ್ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮಗನನ್ನು ಕಳೆದುಕೊಂಡು ತಾಯಿ ಕಂಗಾಲಾಗಿದ್ದಾರೆ.

ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!
ಸುಶೀಲಕುಮಾರ್​​
Image Credit source: tv9 kannada
Edited By:

Updated on: Jun 17, 2026 | 4:11 PM

ದಾವಣಗೆರೆ, ಜೂನ್​ 17: ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದು ಹೆಸರು ಮಾಡಿದ್ದ 26 ವರ್ಷದ ಯುವ ಬಾಡಿ ಬಿಲ್ಡರ್ (Bodybuilder) ಜಿಮ್​ನಿಂದ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್​ ಕುಸಿದು ಬಿದ್ದು ಹೃದಯಾಘಾತದಿಂದ (heart attack) ಸಾವನ್ನಪ್ಪಿರುವಂತಹ ಆತಂಕಕಾರಿ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. ಸುಶೀಲಕುಮಾರ್​ ಮೃತ ಬಾಡಿ ಬಿಲ್ಡರ್​. ಸುಶೀಲಕುಮಾರ್​​ ಸಾವು ಸ್ನೇಹಿತರಿಗೆ ಅಚ್ಚರಿ​ ಮೂಡಿಸಿದೆ. ಕುಟುಂಬಸ್ಥರ ಮುಗಿಲು ಆಕ್ರಂದನ ಮುಟ್ಟಿದೆ.

ಮುಖ್ಯಾಂಶಗಳು

  • ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಯುವಕ ಹೃದಯಾಘಾತದಿಂದ ಸಾವು
  • ಕುಟುಂಬಸ್ಥರು, ಸ್ನೇಹಿತರಿಗೆ ಅಚ್ಚರಿ ಮೂಡಿಸಿದ ಬಾಡಿ ಬಿಲ್ಡರ್ ಸಾವು
  • ಮುಗಿಲು ಮುಟ್ಟಿದ ಕುಟುಂಬ ಸದಸ್ಯರ ಆಕ್ರಂದನ

ನಡೆದಿದ್ದೇನು?

ಬೆಳಿಗ್ಗೆ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಬಂದಿದ್ದ ಸುಶೀಲಕುಮಾರ್, ಸಂಜೆ ಎಂದಿನಂತೆ ಜಿಮ್‌ಗೆ ಹೊರಡಲು ಸಿದ್ಧರಾಗಿದ್ದರು. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ತಾಯಿಯನ್ನ ಕೆಲಸಕ್ಕೆ ಬಿಡಲು ಮುಂದಾಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಿದೆ. ಬಿಪಿ ಲೋ ಆಗಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸುಶೀಲಕುಮಾರ್ ಕೊನೆಯುಸಿರೆಳೆದಿದ್ದಾರೆ. ಹೆತ್ತ ತಾಯಿಯ ಕಣ್ಣೆದುರೇ ಮಗನ ಜೀವ ಹೋಗಿರುವುದು ಮಾತ್ರ ಎಂಥವರಿಗಾದರೂ ಕಣ್ಣೀರು ಬರುತ್ತವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೃದಯಾಘಾತ: ಇಂದು ಒಂದೇ ದಿನ 8 ಜನ ಸಾವು

ಸುಶೀಲಕುಮಾರ್​ಗೆ ಯಾವುದೇ ಒಂದು ಕೆಟ್ಟ ಹವ್ಯಾಸಗಳಿರಲಿಲ್ಲ. ಕಠಿಣ ಪರಿಶ್ರಮವನ್ನೇ ನಂಬಿದ್ದರು. ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ದಿನಕ್ಕೆ ಎರಡು ಸಲ ಜಿಮ್​ಗೆ ಹೋಗುತ್ತಿದ್ದರು. ತನ್ನ ಬಳಿ ತರಬೇತಿ ಪಡೆಯಲು ಬರುತ್ತಿದ್ದ ಯುವಕರಿಗೆ ಶಿಸ್ತಿನ ಪಾಠ ಮಾಡುತ್ತಿದ್ದರು. ದಾವಣಗೆರೆಯಲ್ಲಿ ಹೆಸರು ಮಾಡಿದ್ದ ಯುವಕ ಇಂದು ನೋಡುನೋಡುತ್ತಿದಂತೆ ಇಲ್ಲವಾಗಿರುವುದು ದುರದೃಷ್ಟಕರ.

ಇನ್ನು ಸುಶೀಲಕುಮಾರ್​ಗೆ ತಾಯಿ ಎಂದರೆ ಬಹಳ ಇಷ್ಟ. ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾಯಿ ಬಗ್ಗೆ ಅಪಾರ ಪ್ರೀತಿ ತೋರುವ ನೂರಾರು ವಿಡಿಯೋಗಳು ಇವೆ. ಆದರೆ ಎದೆಯೆತ್ತರಕ್ಕೆ ಬೆಳೆದ ಮಗ ತಮ್ಮ ಕಣ್ಣ ಮುಂದೆ ಸಾವನ್ನಪ್ಪಿರುವುದು ಕಂಡು ತಾಯಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಹಾಸನದ ಹೃದಯಾಘಾತದ ಪ್ರಾಥಮಿಕ ವರದಿ ಸಿದ್ಧ: ಇದುವೇ ಮುಖ್ಯ ಕಾರಣ ಅಂತಿದ್ದಾರೆ ತಜ್ಞರು!

ಇತ್ತೀಚಿನ ದಿನಗಳಲ್ಲಿ ಯುವಕರು ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಜಗಳೂರಿನಲ್ಲಿ 9 ವರ್ಷದ ಶಾಲಾ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದ. ಸುಶೀಲಕುಮಾರ್ ಅವರಂತಹ ಸದೃಢ ಯುವಕರ ಸಾವಿಗೆ ನಿಖರ ಕಾರಣ ಏನೆಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:09 pm, Wed, 17 June 26

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us