ನನ್ನ ಮಗನನ್ನ ಚಿತ್ರ ಹಿಂಸೆ ಕೊಟ್ಟು ಕಗ್ಗೊಲೆ ಮಾಡಿದ್ದಾರೆ, ಪೊಲೀಸರ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ -ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶ

| Updated By: ಸಾಧು ಶ್ರೀನಾಥ್​

Updated on: Nov 05, 2022 | 1:19 PM

MP Renukacharya: ರೇಣುಕಾಚಾರ್ಯ ಯಥಾಸ್ಥಿತಿಗೆ ಮರಳುತ್ತಾನೆ. ನನ್ನ ತಾಳ್ಮೆ ಪರೀಕ್ಷೆ ಮಾಡ್ಬೇಡಿ. ರೇಣುಕಾಚಾರ್ಯ ಯಾವತ್ತೂ ಹಿಂದಿರುಗಿ ನೋಡಿದವನೇ ಅಲ್ಲ. ಯಾರಾದರೂ ಒಂದು ಹೆಜ್ಜೆ ಮುಂದೆ ಇಟ್ರೆ ನಾನು ನೂರು ಹೆಜ್ಜೆ ಮುಂದಿಡುತ್ತೇನೆ.

ನನ್ನ ಮಗನನ್ನ ಚಿತ್ರ ಹಿಂಸೆ ಕೊಟ್ಟು ಕಗ್ಗೊಲೆ ಮಾಡಿದ್ದಾರೆ, ಪೊಲೀಸರ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ -ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶ
ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ
Follow us on

ದಾವಣಗೆರೆ: ತಮ್ಮ ತಮ್ಮನ ಮಗ ಚಂದ್ರಶೇಖರ್​ ನಿಗೂಢ ಸಾವಿನ ಬಗ್ಗೆ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ (Honnali MLA MP Renukacharya) ತಮ್ಮ ನಿವಾಸದಿಂದ ಟಿವಿ 9 ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಪುತ್ರನ ಕಳೆದುಕೊಂಡು ಶೋಕದಲ್ಲಿರುವ ರೇಣುಕಾಚಾರ್ಯ ಅವರು ಇದೊಂದು (ಚಂದ್ರಶೇಖರ್​ ಸಾವು) ಪ್ರೀ ಪ್ಲಾನ್ಡ್ ಕಗ್ಗೊಲೆಯಾಗಿದೆ. ನನ್ನ ಮಗನನ್ನ ಚಿತ್ರ ಹಿಂಸೆ ಕೊಟ್ಟು ಕ್ರೂರವಾಗಿ ಕೊಂದಿದ್ದಾರೆ. ಇಲ್ಲಿ ಪೊಲೀಸ್ ಇಲಾಖೆಯ (Davanagere Police) ನಿರ್ಲಕ್ಷ್ಯತನ (Negligence) ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಓರ್ವ ಶಾಸಕರ ಮಗನಿಗೆ ಇವರು ರಕ್ಷಣೆ ಕೊಟ್ಟಿಲ್ಲ ಅಂದ್ರೆ ಸಾಮಾನ್ಯರ ಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನನ್ನ ಮುಖಂಡರು, ಕಾರ್ಯಕರ್ತರು ಅವರುಗಳೇ ಡ್ರೋನ್ ಕ್ಯಾಮರಾ ಬಳಸಿದ್ದಾರೆ. ಕೊನೆಗೂ ಅವರೇ ಚಂದ್ರು ಕಾರನ್ನು ಸಹ ಪತ್ತೆ ಹಚ್ಚಿದ್ದಾರೆ. ಇಷ್ಟೆಲ್ಲಾ ಮಾಡಿದ್ದು ನನ್ನ ಕ್ಷೇತ್ರದ ಜನರೇ ಹೊರತು, ಪೊಲೀಸರಲ್ಲ. ಇದನ್ನ ನಾನು ಹೇಳ್ತಾಯಿಲ್ಲ, ಜನ ಮಾತಾಡುತ್ತಿದ್ದಾರೆ. ಈ ರೇಣುಕಾಚಾರ್ಯ ಮತ್ತೆ ಹಳೆ ರೀತಿಯಾಗಿ ಬರ್ತೀನಿ, ಆಗ ಮಾತಾಡ್ತೀನಿ. ಅವರು ಒಂದು ಹೆಜ್ಜೆ ಮುಂದೆ ಇಟ್ರೆ, ನಾನು ನೂರು ಹೆಜ್ಜೆ ಇಡುತ್ತೇನೆ.

ಚಂದ್ರು ಆತ್ಮಕ್ಕೆ ಶಾಂತಿ ಸಿಗಬೇಕಿದ್ರೆ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕಿದೆ. ಚಂದ್ರು ನನ್ನ ಉತ್ತರಾಧಿಕಾರಾಯಾಗಿ ಬೆಳೆಯುತ್ತಿದ್ದ. ಚಂದ್ರು ಜೊತೆ ಕೊನೆಯದಾಗಿ ಇದ್ದಿದ್ದು ಕಿರಣ್ ಎಂಬಾತ. ಆ ಕಿರಣನನ್ನು ನಮ್ಮ ಜೊತೆಯಲ್ಲಿದ್ದವರೇ ಕರೆದು ಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸತ್ಯಾಂಶವನ್ನ ಹೊರಗಡೆ ತರಲೇ ಬೇಕು. ನಾನು ತಾಳ್ಮೆಯಿಂದ ಇದ್ದೇನೆ, ಹಾಗೆಯೇ ಇರುತ್ತೇನೆ. ನನ್ನ ಸ್ಟೈಲ್ ಬೇರೆ. ನಾನು ಸೋತಾಗ ಕುಗ್ಗಿಲ್ಲ ಬಗ್ಗಿಲ್ಲ. ಯಾರು ಬಂದು ಶೂಟ್ ಮಾಡ್ತೀನಿ ಅಂದರೂ ನಾ ತಲೆ ಕೆಡಿಸಿ ಕೊಂಡಿಲ್ಲ. ಸೋತಾಗಲೂ ನಾನು ತಲೆ ಕೆಡಿಸಿಕೊಂಡವನಲ್ಲ. ಇದು ನನ್ನ ಬದ್ದತೆ.

ರೇಣುಕಾಚಾರ್ಯ ಯಥಾಸ್ಥಿತಿಗೆ ಮರಳುತ್ತಾನೆ. ನನ್ನ ತಾಳ್ಮೆ ಪರೀಕ್ಷೆ ಮಾಡ್ಬೇಡಿ. ರೇಣುಕಾಚಾರ್ಯ ಯಾವತ್ತೂ ಹಿಂದಿರುಗಿ ನೋಡಿದವನೇ ಅಲ್ಲ. ಯಾರಾದರೂ ಒಂದು ಹೆಜ್ಜೆ ಮುಂದೆ ಇಟ್ರೆ ನಾನು ನೂರು ಹೆಜ್ಜೆ ಮುಂದಿಡುತ್ತೇನೆ. ನನಗೆ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಬಂದು ಒಂದು ವರ್ಷ ಆಯ್ತು. ಸ್ಥಳೀಯ ಪೊಲೀಸರ ಜೊತೆ 40 ನಿಮಿಷ ಮಾತಾಡಿದ್ದೇನೆ. ಪೊಲೀಸರು ಕರೆಸಿ ತನಿಖೆ ಮಾಡ್ಬೇಕಿತ್ತು, ಆದ್ರೆ ಮಾಡಿಲ್ಲ. ಹೆಚ್ಚಿನ ಭದ್ರತೆ ಕೊಡ್ಬೇಕಿತ್ತು. ಆದರೂ ಭದ್ರತೆ ಕೊಟ್ಟಿಲ್ಲ. ಇದಕ್ಕೆಲ್ಲಾ ಹೆದರಿ ನಾನು ಮನೆಯಲ್ಲಿ ಕೂರೋಲ್ಲ ಎಂದು ರೇಣುಕಾಚಾರ್ಯ ತಮ್ಮ ಆಕ್ರೋಶ, ಅಸಮಾಧಾನ ಹೊರಹಾಕಿದ್ದಾರೆ.

ಬೇರೆಲ್ಲೋ ಕೊಲೆ ಮಾಡಿ ಶವ ತಂದು ಇಲ್ಲಿ ಹಾಕಿದ್ದಾರೆ:

ಈ ಮಧ್ಯೆ, ಶಾಸಕ ರೇಣುಕಾಚಾರ್ಯ ತಮ್ಮ ವಾಟ್ಸಾಪ್​​ ಗ್ರೂಪ್​​ನಲ್ಲಿ ಕೆಲ ವಿಡಿಯೋ ಶೇರ್​ ಮಾಡಿದ್ದಾರೆ. ಅಪಘಾತದಿಂದ ಚಂದ್ರಶೇಖರ್​ ಸಾವು ಸಂಭವಿಸಿಲ್ಲ. ಇದು ಕೊಲೆ, ಬೇರೆಲ್ಲೋ ಕೊಲೆ ಮಾಡಿ ಶವ ತಂದು ಇಲ್ಲಿ ಹಾಕಿದ್ದಾರೆ ಎಂದು ವಿಡಿಯೋ ಶೇರ್​ ಮಾಡಿ ಶಾಸಕ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. ತಮ್ಮ ಸಹೋದರನ ಪುತ್ರ ಚಂದ್ರಶೇಖರನ‌ ಕೈಗೆ ಹಗ್ಗ ಕಟ್ಟಲಾಗಿದೆ ಎಂದು ಕೆಲ‌ ವಿಡಿಯೋ ಹಾಕಿದ್ದಾರೆ ರೇಣುಕಾಚಾರ್ಯ.

ಇನ್ನು, ನವೆಂಬರ್ 3ರಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ನಾಲೆಯಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಶವ ಸಿಕ್ಕ ಬಳಿಕ ಕುಟುಂಬಸ್ಥರಿಂದ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ನಾಪತ್ತೆ ಎಂದು ದೂರು ದಾಖಲಿಸಿದ್ದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ನ್ಯಾಮತಿ, ಮಾದನಬಾವಿ, ಆರುಂಡಿ, ಕೆಂಚಿಕೊಪ್ಪದಿಂದ ಬಂದಿದ್ದ ಮಹಿಳೆಯರು ತಿಂಡಿ ತುತ್ತು ತಿನ್ನಿಸಿದರು. ಸಾಂತ್ವನ ಹೇಳಿದರು. ಶಾಸಕರಿಗಾಗೀ ಇಡ್ಲಿ, ಪಡ್ಡು, ರೊಟ್ಟಿ, ಗಿಣ್ಣ ಮಾಡಿಕೊಂಡು ಬಂದಿದ್ದರು. ಮಾತೆಯರಿಂದ ತುತ್ತು ತಿಂದ ರೇಣುಕಾಚಾರ್ಯ ಮಹಿಳೆಯರಿಗೆ ನಮಸ್ಕರಿಸಿದರು. ತಮ್ಮನ ಮಗ ಚಂದ್ರುವಿನ ಸಾವಿನಿಂದ ಆತಂಕಕ್ಕೆ ಒಳಗಾಗಿರುವ ರೇಣುಕಾಚಾರ್ಯ ಕುಟುಂಬಕ್ಕೆ ವಿವಿಧ ಗ್ರಾಮದ ಮುಖಂಡರು

ಚಂದ್ರಶೇಖರ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳ ಹುತ್ತ:

ಈ ಮಧ್ಯೆ, ಚಂದ್ರಶೇಖರ್ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದುನಿಂತಿದೆ. ಅಪಘಾತವಾದ ಚಂದ್ರು ಕಾರ್ ಟಾಪ್ ಎಂಡ್ ಮಾಡಲ್. ಚಂದ್ರಶೇಖರ್ ಕಾರ್ ನಲ್ಲಿ ಆರು ಎರ್ ಬ್ಯಾಗ್ ಇವೆ. ಆರು ಏರ್ ಬ್ಯಾಗ್ ನಲ್ಲಿ ಎರಡು ಎರ್ ಬ್ಯಾಗ್ ಮಾತ್ರ ಓಪನ್ ಆಗಿದೆ. ಒಂದು ಸೀಟ್ ಗೆ ಮಾತ್ರ ಸೀಟ್ ಬೆಲ್ಟ್‌ ಹಾಕಲಾಗಿದೆ. ಒಂದು ಸೀಟ್ ಬೆಲ್ಟ್ ಹಾಕಿದ್ದರೂ ಮುಂಭಾಗದ ಎರಡು ಏರ್ ಬ್ಯಾಗ್ ಓಪನ್ ಆಗಿರೋದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಥಳೀಯ ಪೊಲೀಸರು ಕಾರ್ ಎಕ್ಸ್ಪರ್ಟ್ ಗಳ ಜೊತೆ ಮಾತುಕತೆ ನಡೆಸಿದ್ದು, ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಾವಣಗೆರೆ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ:

ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣದಲ್ಲಿ ದಾವಣಗೆರೆ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸ್ತಿಲ್ಲ ಅಂತಾ ಕಿಡಿಕಾರಿದ್ದಾರೆ. ಎಲ್ಲಾ ಸಾಕ್ಷ್ಯಗಳನ್ನ ಪೋಲಿಸರಿಗೆ ಹುಡುಕಿ ಕೊಟ್ಟಿದ್ದು ನಾವು. ಡ್ರೋನ್ ಬಳಸಿ ಕಾರ್ ಎಲ್ಲಿದೆ ಅಂತ ಪತ್ತೆ ಮಾಡಿದ್ದು ನಾವು. ಆದ್ರೆ ಪೋಲಿಸರು ನಾವು ಕಾರ್ ಪತ್ತೆ ಮಾಡಿದ್ದು ಅಂತ ಹೇಳುತ್ತಿದ್ದಾರೆ. ಪೋಲಿಸರು ಸರಿಯಾದ ಹಂತದಲ್ಲಿ ಪತ್ತೆ ಮಾಡಿಲ್ಲ. ಹಿರಿಯ ಪೊಲೀಸ್​ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಅವರು ಕಾರ್ ಓವರ್ ಸ್ಪೀಡ್ ನಿಂದ ಚಾನಲ್ಗೆ ಬಿದ್ದಿದೆ ಅಂತಾ ಹೇಳುತ್ತಿದ್ದಾರೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದಿಂದ ರಾತ್ರಿ 10 ಗಂಟೆಯಲ್ಲಿ 10 ನಿರಂತರ ಕರೆ ಬಂದಿವೆ:

ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣದಲ್ಲಿ ಚಂದ್ರು ಕಾಣೆಯಾದ ದಿನ ಅಕ್ಟೋಬರ್​ 30ರಂದು ರಾತ್ರಿ 10 ಗಂಟೆಯಿಂದ ಒಂದೇ ನಂಬರ್​​ನಿಂದ 10 ಬಾರಿ ನಿರಂತರ ಕರೆ ಬಂದಿದೆ. ಚಿಕ್ಕಮಗಳೂರಿನ ಕೊಪ್ಪ ಲೊಕೇಷನ್​ನಿಂದ ಬಂದಿರುವ ಕರೆ ಅದಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಲ್​ ಡಿಟೇಲ್ಸ್​ ರಿಕಾರ್ಡ್​ ತೆಗೆಸಿ ನೋಡಿದಾಗ ಈ ಮಾಹಿತಿ ಸಿಕ್ಕಿದೆ.

ಎಫ್​ಎಸ್​ಎಲ್​ ತಜ್ಞರು ಹೇಳೋದೇನು?

ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣದಲ್ಲಿ ಮೃತ ಚಂದ್ರಶೇಖರ್​ ಕಾರು ಅತಿವೇಗವಾಗಿ ಚಾಲನೆಯಲ್ಲಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಕಾರಿನ ಕೆಲ ಬಿಡಿ ಭಾಗಗಳು ಸಿಕ್ಕಿವೆ. ಕಾರಿನ ಎಡಭಾಗದ ಎರಡು ಟೈಯರ್​​ಗಳು ಬ್ಲಾಸ್ಟ್ ಆಗಿವೆ. ಚಂದ್ರು ಕಾರಿನ ಎಡಭಾಗದಲ್ಲಿ ಸಾಕಷ್ಟು ಡ್ಯಾಮೇಜ್ ಆಗಿದೆ ಎಂದು ಟಿವಿ 9 ಗೆ ವಿಧಿವಿಜ್ಞಾನ ತಜ್ಞ ಡಾ. ಫಣೀಂದ್ರ ಮಾಹಿತಿ ನೀಡಿದ್ದಾರೆ.

Published On - 12:08 pm, Sat, 5 November 22