ಶಾಸಕರ ಹುಟ್ಟು ಹಬ್ಬಕ್ಕೆಂದು ಸಾಮೂಹಿಕ ರಜೆ ಹಾಕಿ ಊರು ಬಿಟ್ಟ ಅಧಿಕಾರಿಗಳು

| Updated By: ರಮೇಶ್ ಬಿ. ಜವಳಗೇರಾ

Updated on: Jul 03, 2024 | 7:11 PM

ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅಂತಾರೆ. ಸಾರ್ವಜನಿಕರ ಕೆಲಸ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳು ಜನ ಪ್ರತಿನಿಧಿಗಳ ದಾಸರಾಗಿದ್ದಾರೆ. ತಾಲೂಕಿನಲ್ಲಿ ಕೆಲಸ ಮಾಡ್ರಪ್ಪ ಅಂದರೆ ಇಲ್ಲ ಸಾರ್ ನಾವು ಶಾಸಕರ ಸೇವೆ ಮಾಡ್ತಿವಿ ಅಂತಾರೆ. ಇಂತಹ ಅಧಿಕಾರಿಗಳ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಅಲ್ಲದೆ ಇಂತಹ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅಗ್ರಹಿಸಿದ್ದಾರೆ..

ಶಾಸಕರ ಹುಟ್ಟು ಹಬ್ಬಕ್ಕೆಂದು ಸಾಮೂಹಿಕ ರಜೆ ಹಾಕಿ ಊರು ಬಿಟ್ಟ ಅಧಿಕಾರಿಗಳು
ಅಧಿಕಾರಿಗಳು
Follow us on

ದಾವಣಗೆರೆ, (ಜುಲೈ 03):  ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಕೆಸಲವನ್ನ ದೇವರ ಕೆಸಲವೆಂದು ಮಾಡಿಕೊಡಬೇಕು ಅನ್ನೋ ಮಾತು ಹಳೇಯದು. ಈಗೇನಿದ್ದರೂ ಶಾಸಕರ ಸೇವೆ ಮಾಡಬೇಕು, ಅವರಿಗೆ ಗುಲಾಮರಾಗಿರಬೇಕು ಎಂಬಂತಿದೆ. ಹೌದು, ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಶಾಸಕ ಶಿವಗಂಗಾ ಬಸವರಾಜ್ ಜನ್ಮ ದಿನಕ್ಕೆಂದು ಸಾಮೂಹಿಕವಾಗಿ ರಜೆ ತೆಗೆದುಕೊಂಡು ಶಾಸಕರ ಜೊತೆ ತಿರುಪತಿಗೆ ಹೋಗಿದ್ಧಾರೆ. ತಾಲೂಕು ಮಟ್ಟದ 20 ಕ್ಕೂ ಹೆಚ್ಚು ಗ್ರೇಡ್ 1 ಹಾಗೂ ಗ್ರೇಡ್ 2 ಅಧಿಕಾರಿಗಳು ಅಧಿಕಾರಿಗಳು ಸಾಮೂಹಿಕವಾಗಿ ರಜೆ ಹಾಕಿಕೊಂಡು ಶಾಸಕ ಬಸವರಾಜ ಶಿವಗಂಗಾ ಅವರ ಜನ್ಮದಿನ ಆಚರಣೆ ಮಾಡಲು ತಿರುಪತಿಗೆ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ.

ಹೌದು….ಶುಕ್ರವಾರ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಅವರ ಜನ್ಮದಿನವನ್ನು ತಿರುಪತಿಯ ಸಮೀಪದ ಒಂದು ರೆಸಾರ್ಟ್​​ವೊಂದರಲ್ಲಿ ಆಚರಿಸಲು ಎಲ್ಲಾ ಪ್ರಮುಖ ಹಿರಿಯ ಅಧಿಕಾರಿಗಳು ರಜೆ ಹಾಕಿ ಅಲ್ಲಿಗೆ ತೆರಳಿದ್ದರು. ಅಧಿಕಾರಿಗಳು ಗುರುವಾರ, ಶುಕ್ರವಾರ ಎರಡು ದಿನ ರಜೆ ಹಾಕಿದ್ದು, ಇಡೀ ತಾಲೂಕು ಆಡಳಿತ ಎರಡು ದಿನ ಅಧಿಕಾರಿಗಳು ಇಲ್ಲದೇ ಬಿಕೋ ಎಂದಿದೆ.

ಇದನ್ನೂ ಓದಿ: ವರ್ಗಾವಣೆಗೊಂಡ ಚಿಕ್ಕಬಳ್ಳಾಪುರ ಎಸ್ಪಿಗೆ ಪುಷ್ಪ ಮಳೆಗೈದು, ಜೈಕಾರ ಹಾಕಿ ವಿಶೇಷ ಬೀಳ್ಕೊಡುಗೆ

ಇನ್ನೊಂದೆಡೆ ಸಾರ್ವಜನಿಕರು 2 ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ, ಅಲೆದಾಡಿ ಹಿಡಿ ಶಾಪ ಹಾಕಿ ಮನೆಗೆ ವಾಪಸ್ ಆಗಿದ್ದಾರೆ. ಅಲ್ಲದೇ  ಜನರ ಸೇವೆಗೆಂದು ಬಂದಿರುವ ಅಧಿಕಾರಿಗಳು ಶಾಸಕ ಬಾಲ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ಯಾವೊಬ್ಬ ಅಧಿಕಾರಿಯಾದರೂ ಅವರದ್ದೇ ಆಗಿರುವ ವೈಯಕ್ತಿಕ ಜೀವನ ಇರುತ್ತದೆ. ಆದರೆ ಒಂದೇ ದಿನ ತಹಶೀಲ್ದಾರ್ ಮಟ್ಟದ ಅಧಿಕಾರಿಗಳಿಂದ ಹಿಡಿದು ಎಲ್ಲಾ ಅಧಿಕಾರಿಗಳ ಒಂದೇ ಬಾರಿ ಸಾಮೂಹಿಕ ವಾಗಿ ರಜೆ ಹಾಕಿ ಯಾರನ್ನೋ ಮೆಚ್ಚಿಸಲು ತಿರುಪತಿಗೆ ಹೋದರೆ ಹೇಗೆ ಅದ್ದರಿಂದ ಅಂತಹ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡ ಮಾಜಿ ಸಿಎಂ ಪುತ್ರ ತೇಜಸ್ವಿ ಪಾಟೀಲ್ ಪತ್ರ ಬರೆದಿದ್ದಾರೆ.

ಇಲ್ಲಿ ಅಧಿಕಾರಿಗಳು ರಜೆ ಹಾಕಿ ತಮ್ಮ ವೈಯಕ್ತಿಕ ಕೆಲಸಕ್ಕೆ ಹೋಗಿದ್ದರೆ. ಇಲ್ಲ ಕರ್ತವ್ಯ ನಿಮಿತ್ತ ಹೋಗಿದ್ಧಾರಾ ಅನ್ನೋ ಪ್ರಶ್ನೆಗಿಂತ ಶಾಸಕರ ಮೆಚ್ಚಿಸಲು ಎಲ್ಲ ಅಧಿಕಾರಿಗಳು ಸಾಮೂಹಿಕವಾಗಿ ಹೋಗಿರೋದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ರಜೆ ಹಾಕಿ ಹೋಗಿರುವ ಅಧಿಕಾರಿಗಳು ಸರ್ಕಾರಿ ಕಾರುಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೋಗಿದ್ಧಾರೆ. ಜೊತೆಗೆ ವಾಪಸ್ ಬರುವಾಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಾಹನ ಕರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಸರ್ಕಾರಿ ವಾಹನ ದುರುಪಯೋಗ ಮಾಡಿಕೊಂಡಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿಗಳು ಸಮಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಹೋಗುವುದು ನಿಯಮ. ಹೀಗಿರುವಾಗ ತಹಸೀಲ್ದಾರ್ ಸೇರಿಂದರೆ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೂ ತಾರದೆ ಹೋಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದೆ.. ಇದನ್ನು ಜಿಲ್ಲಾಧಿಕಾರಿಗಳನ್ನು ಕೇಳಿದರೆ ಈ ಘಟನೆಯ ಮಾಹಿತಿ ತಿಳಿದು ಬಂದಿದ್ದು, ಜಿಲ್ಲಾ ಪಂಚಾಯತ್ ಸಿಇಒ‌ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ ಇದನ್ನ ಸ್ವತಹ ಶಾಸಕರೇ ಸಮರ್ಥಿಸಿಕೊಳ್ಳುತ್ತಾರೆ.

ಒಟ್ಟಾರೆಯಾಗಿ ಸಾರ್ವಜನಿಕರ ಸೇವೆ ಮಾಡಬೇಕಾದ ಅಧಿಕಾರಿಗಳು ಕರ್ತವ್ಯ ಮರೆತು ಶಾಸಕರ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೊಡಗಿ ಸಾರ್ವಜನಿಕರಿಗೆ ದ್ರೋಹ ಮಾಡುತ್ತಿರುವುದಂತೂ ಸತ್ಯ ಸೂಕ್ತ ರೀತಿಯಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕು. ಇಡಿ ತಾಲೂಕಿನ 20ಕ್ಕೂ ಹೆಚ್ಚು ಅಧಿಕಾರಿಗಳು ಎರಡು ದಿನ ತಿರುಪತಿಗೆ ದೇವಸ್ಥಾನಕ್ಕೆ ಹೋಗಿದ್ದು. ನಿಜಕ್ಕೂ ಇದೊಂದು ನಿಯಮ ಗಾಳಿಗೆ ತೂರಿದ ಪ್ರಕರಣ ಈ ಬಗ್ಗೆ ಸೂಕ್ತ ಕ್ರಮ ಆಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.