ಬೆಣ್ಣೆ ನಗರಿ ದಾವಣಗೆರೆಯಲ್ಲಿಂದು ಬಿಜೆಪಿ ಶಕ್ತಿ ಪ್ರದರ್ಶನ, ಜನಸಂಕಲ್ಪ ಸಮಾವೇಶಕ್ಕೆ ಸಿದ್ಧವಾಯ್ತು ಬೃಹತ್ ವೇದಿಕೆ

| Updated By: ಆಯೇಷಾ ಬಾನು

Updated on: Nov 23, 2022 | 7:04 AM

ಇಂದು ಜಗಳೂರಿನ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಜನ ಸಂಕಲ್ಪ ಕಾರ್ಯಕ್ರಮಕ್ಕೆ 35 ಸಾವಿರ ಜನ ಕೂರಲು ಬೇಕಾಗುವಂತಹ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

ಬೆಣ್ಣೆ ನಗರಿ ದಾವಣಗೆರೆಯಲ್ಲಿಂದು ಬಿಜೆಪಿ ಶಕ್ತಿ ಪ್ರದರ್ಶನ, ಜನಸಂಕಲ್ಪ ಸಮಾವೇಶಕ್ಕೆ ಸಿದ್ಧವಾಯ್ತು ಬೃಹತ್ ವೇದಿಕೆ
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ: ಬಿಜೆಪಿಯ(BJP Karnataka) ಭದ್ರಕೋಟೆ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ಜಗಳೂರು & ಹರಿಹರದಲ್ಲಿ ಇಂದು ಬಿಜೆಪಿ ಸಂಕಲ್ಪ ಯಾತ್ರೆ(Jana Sankalpa Yatra) ಕೈಗೊಂಡಿದೆ. ಇಂದು ಬೆಳಿಗ್ಗೆ 11.15ಕ್ಕೆ ಜಗಳೂರಲ್ಲಿ ಜನ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಧ್ಯಾಹ್ನ 2.30ಕ್ಕೆ ಹರಿಹರದಲ್ಲಿ ಜನ ಸಂಕಲ್ಪ ಸಭೆ ಇರಲಿದೆ. ಯಾತ್ರೆಯಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ(Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಸೇರಿದಂತೆ ಪಕ್ಷದ ಹಿರಿಯ‌ ಮುಖಂಡರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮಕ್ಕೆ ಸಿದ್ಧವಾದ ಬೃಹತ್ ವೇದಿಕೆ

ಇಂದು ಜಗಳೂರಿನ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಜನ ಸಂಕಲ್ಪ ಕಾರ್ಯಕ್ರಮಕ್ಕೆ 35 ಸಾವಿರ ಜನ ಕೂರಲು ಬೇಕಾಗುವಂತಹ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಎಂ ಸಿದ್ದೇಶ್ವರ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಅನೇಕ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಚಳ್ಳಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹೊಣೆಯನ್ನು ನಾನೇ ಹೊರುತ್ತೇನೆ: ಸಿಎಂ ಬೊಮ್ಮಾಯಿ

ಇನ್ನು ಮುಂಬರುವ ವಿಧಾನ ಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಗೆ ಸೆಡ್ಡು ಹೊಡೆದು ರಾಜ್ಯದಾದ್ಯಂತ ಜನ ಸಂಕಲ್ಪ ಯಾತ್ರೆ ಮಾಡಲು ತೀರ್ಮಾನಿಸಿದ್ದು ಕಳೆದ ತಿಂಗಳಿಂದ ಈಗಾಗಲೇ ರಾಜ್ಯದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಯ ಮೂಲಕ ತಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಡುತ್ತಿದೆ.

ಹೆಲಿಕಾಪ್ಟರ್ ಮೂಲಕ ಇಂದು 11.15ಕ್ಕೆ ಜಗಳೂರಿಗೆ ಸಿಎಂ ಆಗಮಿಸಲಿದ್ದಾರೆ. ಜಗಳೂರಿನಲ್ಲಿ 11.15 ರಿಂದ 1.30ರವರೆಗೆ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿ ಬಳಿಕ ಜಗಳೂರಿನಿಂದ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್ ಗೆ ತೆರಳಿ ನಂತರ ರಸ್ತೆ ಮೂಲಕ ಮಧ್ಯಾಹ್ನ 2.25ಕ್ಕೆ ಹರಿಹರಕ್ಕೆ ಹಾರಲಿದ್ದಾರೆ.

ನವೆಂಬರ್ 25 ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಪ್ರಶಿಕ್ಷಣ ಶಿಬಿರ ಏರ್ಪಡಿಸಲಾಗಿದೆ. ತೀರ್ಥಹಳ್ಳಿ ಕ್ಷೇತ್ರಗಳಲ್ಲಿ BJP ಜನಸಂಕಲ್ಪ ಯಾತ್ರೆ ಇರುತ್ತೆ. ಹಾಗೂ ನವೆಂಬರ್ 27 ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ.

Published On - 7:04 am, Wed, 23 November 22